ಮೂಡುಬಿದಿರೆ

ಪ್ರಧಾನಮಂತ್ರಿ ಸೂರ್ಯಘರ್‌ ಮುಫ್ತ್‌ ಬಿಜ್ಲಿ ಯೋಜನೆ- ಮಾದರಿ ಸೋಲಾರ್‌ ಗ್ರಾಮವಾಗಿ ಪುತ್ತಿಗೆ ಗ್ರಾಮ ಪಂಚಾಯತ್

ಮೂಡುಬಿದಿರೆ : ಪ್ರಧಾನಮಂತ್ರಿ ಸೂರ್ಯಘರ್‌ ಮುಫ್ತ್‌ ಬಿಜ್ಲಿ ಯೋಜನೆಯಡಿಯಲ್ಲಿ ಮಾದರಿ ಸೋಲಾರ್‌ ಗ್ರಾಮವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ ತಾಲೂಕಿನ ಪುತ್ತಿಗೆ ಗ್ರಾಮ ಪಂಚಾಯತ್ ಆಯ್ಕೆಯಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತಿಗೆ ಗ್ರಾಮ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಪ್ರಧಾನಮಂತ್ರಿ ಸೂರ್ಯಘರ್‌ ಯೋಜನೆಯ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಾದರಿ ಸೋಲಾರ್‌ ಗ್ರಾಮವನ್ನು ಆಯ್ಕೆಮಾಡುವ ಸಲುವಾಗಿ ಜಿಲ್ಲಾ ಮಟ್ಟದ ಸಮಿತಿಯಿಂದ ನಡೆದ ಸಭೆಯಲ್ಲಿ 13 ಗ್ರಾಮಗಳನ್ನು ಆಯ್ಕೆ ಮಾಡಲಾಗಿದ್ದು, ಸದರಿ ಗ್ರಾಮಗಳಲ್ಲಿ ಮೂಡುಬಿದಿರೆ ತಾಲೂಕಿನ ಪುತ್ತಿಗೆ ಗ್ರಾಮದಲ್ಲಿ 2025 ಡಿಸೆಂಬರ್ 31ರ ವರೆಗೆ ಅಳವಡಿಸಿದ ಸೋಲಾರ್‌ ಘಟಕಗಳ ಸಾಮರ್ಥ್ಯವು ಅಧಿಕವಾಗಿದೆ. ಸದರಿ ಗ್ರಾಮವನ್ನು 2026ರ ಫೆಬ್ರವರಿಯಲ್ಲಿ ಪ್ರಾದೇಶಿಕ ಆಯುಕ್ತರು, ಮೈಸೂರು ವಿಭಾಗ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಾದರಿ ಸೋಲಾರ್‌ ಗ್ರಾಮವಾಗಿ ಆಯ್ಕೆ ಮಾಡಲಾಗಿದೆ.

ಮಾದರಿ ಸೋಲಾರ್‌ ಗ್ರಾಮ ಅಭಿವೃದ್ದಿಗಾಗಿ ಈ ಗ್ರಾಮಕ್ಕೆ ನವ ಮತ್ತು ನವೀಕರಿಸಬಹುದಾದ ಇಂಧನ ಇಲಾಖೆಯು ರೂ.1 ಕೋಟಿಯ ಸಹಾಯಧನವನ್ನು ಅನುಷ್ಟಾನಗೊಳಿಸುವ ಸಂಸ್ಥೆಗೆ ನೀಡುತ್ತದೆ.
ಉಡುಪಿ ಜಿಲ್ಲೆಯ ಕೋಟತಟ್ಟು ಗ್ರಾಮ ಪಂಚಾಯತ್ ಕೂಡಾ ಆಯ್ಕೆಯಾಗಿದೆ ಎಂದು ಮೆಸ್ಕಾಂ ಪ್ರಕಟಣೆ
ತಿಳಿಸಿದೆ.

Related posts

ದೀಪಾವಳಿ ಹಬ್ಬಕ್ಕೆ ಕಾರ್ಕಳದ ನ್ಯೂ ಪವನ್ ಜ್ಯುವೆಲ್ಲರ್ಸ್ ಆಕರ್ಷಕ ಬಂಪರ್ ಆಫರ್

Madhyama Bimba

 ಕಲ್ಲಿನ ಕೋರೆಗೆ ಉರುಳಿದ ಲಾರಿ

Madhyama Bimba

ನೆಲ್ಲಿಕಾರುನಲ್ಲಿ ಗಿಡ ನೆಟ್ಟು ವಿಶ್ವ ಪರಿಸರ ದಿನ ಆಚರಣೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More