ಮೂಡುಬಿದಿರೆಯಲ್ಲಿ ಪೌರ ಕಾರ್ಮಿಕರನ್ನು ಗೌರವಿಸಿ ಅವರ ಕಷ್ಟ ಕಾರ್ಪಣ್ಯಗಳಿಗೆ ಸದಾ ಸ್ಪಂದಿಸುತ್ತಿರುವ ಕಾಂಗ್ರೆಸ್ ಮುಖಂಡ, ಯುವ ನಾಯಕ ಮಿಥುನ್ ರೈಯವರ ಕಾರ್ಯ ವೈಖರಿ ಇಂದು ಎಲ್ಲರಿಗೂ ಮಾದರಿಯಾಗಿದೆ ಎಂದು ಮೂಡುಬಿದಿರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್. ಪ್ರವೀಣ್ ಕುಮಾರ್ ಅಭಿಪ್ರಾಯ ಪಟ್ಟಿದ್ದಾರೆ.
ಮೂಡುಬಿದಿರೆಯಲ್ಲಿ ಸಾರ್ವಜನಿಕ ಗಣೇಶೋತ್ಸವ ವಿಸರ್ಜನಾ ಮೆರವಣಿಗೆ ಸಂದರ್ಭ ರಾತ್ರಿಯೇ ಕಸ ವಿಲೇವಾರಿಗೊಳಿಸಿ ಗಮನ ಸೆಳೆದಿರುವ ಪೌರ ಕಾರ್ಮಿಕರಿಗೆ ಗೌರವಾರ್ಪಣೆ ನಡೆಸಿ, ಅವರೊಂದಿಗೆ ಊಟ ಉಪಹಾರ ಸೇವಿಸಿ, ಪೌರ ಕಾರ್ಮಿಕರಿಗೆ ಕೈಯಾರೆ ಊಟ ಬಡಿಸಿ ಮಿಥುನ್ ರೈಯವರು ಕಳೆದ ಎರಡು ವರ್ಷಗಳಿಂದ ಮೆಚ್ಚುಗೆ ಪಡೆದುಕೊಂಡಿದ್ದರು. ಮಿಥುನ್ ರೈಯವರ ಈ ಕಾರ್ಯ ಇದೀಗ ರಾಜ್ಯದ ಮುಖ್ಯಮಂತ್ರಿಯವರು ಕೂಡ ನಡೆಸಿ ಗಮನ ಸೆಳೆದಿದ್ದಾರೆ.
ಮುಖ್ಯಮಂತ್ರಿಯವರು ಪೌರ ಕಾರ್ಮಿಕರ ಬಗ್ಗೆ ಕಾಳಜಿ ವಹಿಸಲು ಸಾಧ್ಯವಾಗುತ್ತಿದೆ. ಮುಖ್ಯಮಂತ್ರಿಯವರ ಪ್ರೀತಿ ವಾತ್ಸಲ್ಯವನ್ನು ಮಿಥುನ್ ರೈ ಯವರು ಕಳೆದ ಎರಡು ವರ್ಷಗಳ ಹಿಂದೆಯೇ ಕೈಗೊಂಡು ಪೌರ ಕಾರ್ಮಿಕರ ಪ್ರೀತಿಗೆ ಪಾತ್ರವಾಗಿರುವುದು ನಮಗೆಲ್ಲಾ ಹೆಮ್ಮೆ ಎನಿಸಿದೆ ಎಂದು ಪ್ರವೀಣ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.
