ಮೂಡುಬಿದಿರೆ

ಎ ಜಿ ಸೋನ್ಸ್  ನೂತನ ಕಂಪ್ಯೂಟರ್ ಲ್ಯಾಬ್ ಉದ್ಘಾಟನೆ

ಮೂಡಬಿದಿರೆ ಎ.ಜಿ.ಸೋನ್ಸ್ ಐ.ಟಿ.ಐ.ಯಲ್ಲಿ ನೂತನ ಕಂಪ್ಯೂಟರ್ ಲ್ಯಾಬ್ ನ್ನು ಶ್ರೀ ಮಹಾವೀರ ಕಾಲೇಜು ವಿಶ್ವಸ್ಥ ಮಂಡಳಿಯ ಅಧ್ಯಕ್ಷರಾದ ಕೆ.ಅಭಯಚಂದ್ರ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ 5 ಕಂಪ್ಯೂಟರ್ ಗಳನ್ನು ದಾನವಾಗಿ ನೀಡಿದ ಎಮ್.ಸಿ.ಎಸ್ ಬ್ಯಾಂಕ್ವಿಶೇಷ ಕಾರ್ಯನಿರ್ವಹಣಾಧಿಕಾರಿ ಎಂ. ಚಂದ್ರಶೇಖರ ಇವರು ಕಂಪ್ಯೂಟರ್ ಗಳನ್ನು ಚಾಲನೆಗೊಳಿಸಿದರು.

ಕಾರ್ಯಕ್ರಮದಲ್ಲಿ ಶ್ರೀ ಮಹಾವೀರ ಕಾಲೇಜು ಆಡಳಿತ ಮಂಡಳಿಯ ಸದಸ್ಯರಾದ ಸಿ.ಎಚ್ ಅಬ್ದುಲ್ ಗಫೂರ್, ಕೆ.ಆರ್ ಪಂಡಿತ್, ರಾಮ್‌ ಪ್ರಸಾದ್ ಭಟ್, ಸುರೇಶ್ ಪ್ರಭು, ರಾಮನಾಥ ಭಟ್, ಕೆ.ವೆಂಕಟೇಶ್ ಕಾಮತ್, ಎ.ಎಫ್.ಓ.ಶ್ರೀಧರ್, ಜೆ.ಜೆ.ಪಿಂಟೋ, ಕಾರ್ಯದರ್ಶಿಗಳಾದ ಮೇಜರ್ ಡಾ. ರಾಧಕೃಷ್ಣ ಶೆಟ್ಟಿ,, ಎಮ್.ಕೆ.ಅನಂತ್ ರಾಜ್ ದೈಹಿಕ ಶಿಕ್ಷಣ ಕಾಲೇಜಿನ ಪ್ರಾಂಶುಪಾಲರಾದ ಧನಂಜಯ್ ಶೆಟ್ಟಿ, ಎಸ್.ಎನ್.ಎಮ್ ಪಾಲಿಟೆಕ್ನಿಕ್ ಪ್ರಾಂಶುಪಾಲರಾದ ಶ್ರೀಮತಿ ತರೀನಾ ನೊರೋನ್ ಮತ್ತು ಸಂಸ್ಥೆಯ ಪ್ರಾಂಶುಪಾಲರಾದ ಶ್ರೀಕಾಂತ ಹೊಳ್ಳ, ತರಬೇತಿ ಅಧಿಕಾರಿಗಳು, ಸಂಸ್ಥೆಯ ಸಿಬ್ಬಂದಿಗಳು ಹಾಗೂ ಇನ್ನಿತ್ತರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಸುಧೀರ್ಘ 40 ವರ್ಷಗಳ ಕಾಲ ಈ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿದ ಶ್ರೀನಿವಾಸ ಕಿಣಿಯವರು ಎರಡು ಕಂಪ್ಯೂಟರ್ ಗಳನ್ನು ಸಂಸ್ಥೆಗೆ ದಾನ ನೀಡಿದರು.

Related posts

ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ-ಓಪರೇಟಿವ್ ಸೊಸೈಟಿ: ರೂ.1200 ಕೋಟಿ ವ್ಯವಹಾರ

Madhyama Bimba

ಹೊಯಿಪಾಲ ಬೆಟ್ಟ ಅನ್ನಛತ್ರಕ್ಕೆ ರೂ. 50 ಸಾವಿರ ದೇಣಿಗೆ

Madhyama Bimba

ಮೂಡಬಿದಿರೆ ಎಕ್ಸಲೆಂಟ್ ಪಿಯು ಕಾಲೇಜಿನ ಸಾಧನೆಯ ಶಿಖರ: ದ್ವಿತೀಯ ಪಿಯುಸಿಯಲ್ಲಿ 32 ರ್‍ಯಾಂಕ್

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More