ಮೂಡುಬಿದಿರೆ

ಅ. 28 ರಂದು ಸರಕಾರಿ ನೌಕರರ ಸಂಘದ ಚುನಾವಣೆ

ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ 2024-2029ನೇ ಅವಧಿಗೆ ತಾಲೂಕು ನಿರ್ದೇಶಕರ, ಆಯ್ಕೆಗಾಗಿ ಚುನಾವಣೆ ಘೋಷಣೆ ಮಾಡಿದ್ದು ನಾಮ ಪತ್ರ ಸಲ್ಲಿಕೆ ಪ್ರಾರಂಭಗೊಂಡಿದೆ ಎಂದು ಸಂಘದ ಅಧ್ಯಕ್ಷ ನಾಗೇಶ್ ಎಸ್. ತಿಳಿಸಿದ್ದಾರೆ.

ಮೂಡುಬಿದಿರೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮೂಡುಬಿದಿರೆ 3 ಶಾಲೆಯ ಒಂದು ಕೊಠಡಿ ಸಂಘದ ಕಛೇರಿಯಾಗಿದ್ದು ಇಲ್ಲಿ ನಾಮ ಪತ್ರ ಸಲ್ಲಿಸಬಹುದಾಗಿದೆ. ತಾಲೂಕು ಚುನಾವಣಾಧಿಕಾಯಾಗಿ ಶೀನ ನಾಯ್ಕ ನಿವೃತ್ತ ಮುಖ್ಯ ಶಿಕ್ಷಕರು ಇವರು ಕರ್ತವ್ಯ ನಿರ್ವಹಿಸಲಿದ್ದಾರೆ.

ಅಕ್ಟೋಬರ್ – 18 ರ ಸಂಜೆ 5.00 ನಾಮ ಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ.
ಅಕ್ಟೋಬರ್ – 19 ರಂದು ಬೆಳ್ಳಿಗೆ 11 ಗಂಟೆಯಿಂದ ನಾಮ ಪತ್ರ ಪರಿಶೀಲನೆ ನಂತರ ಅರ್ಹ ಅಭ್ಯರ್ಥಿಗಳ ಹೆಸರು ಪ್ರಕಟನೆ ಅಕ್ಟೋಬರ್ 21 ಸಂಜೆ 4.30 ಗಂಟೆಯವರೆಗೆ ಉಮೇದುವಾರಿಕೆ ವಾಪಸ್ಸು ಪಡೆಯಲು ಕೊನೆಯ ದಿನವಾಗಿದೆ. ಸಂಜೆ – 5.30ಕ್ಕೆ ನಂತರ ಚುನಾವಣೆ ಕಣದಲ್ಲಿ ಉಳಿದ ಅಭ್ಯರ್ಥಿಗಳ ಹೆಸರು ಪ್ರಕಟಣೆ. ಚುನಾವಣೆ ಇದ್ದಲ್ಲಿ 28-10-2024ರ ಬೆಳ್ಳಿಗೆ 9.00 ರಿಂದ ಸಂಜೆ 4.00 ಗಂಟೆಯವರೆಗೆ ಮೂಡಬಿದ್ರಿ -3 ಶಾಲೆಯಲ್ಲಿ ನಡೆಯಲಿರುವುದು. ನಂತರ ಮತ ಎಣಿಕೆ ಮುಕ್ತಾಯದ ನಂತರ ಫಲಿತಾಂಶ ಪ್ರಕಟವಾಗಲಿದೆ.

Related posts

ಆಳ್ವಾಸ್‌ನ ಸಾಧ್ವಿ ಪಿ.ವಿ. ರಾಜ್ಯಕ್ಕೆ 4ನೇ ರ್‍ಯಾಂಕ್ 

Madhyama Bimba

ಮೂಡುಬಿದಿರೆ ಕಂಬಳದಲ್ಲಿ ಸಾಧಕರಿಗೆ ಪ್ರಶಸ್ತಿ, ಗೌರವ

Madhyama Bimba

ಶ್ರೀ ಮಹಾವೀರ ಕಾಲೇಜಿನಲ್ಲಿ ಗಾಂಧೀ ಜಯಂತಿ ಆಚರಣೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More