ಬೆಳ್ಮಣ್‌ನ ಸಂತ ಜೋಸೆಫರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆದರ್ಶ ಆಸ್ಪತ್ರೆಯ ನುರಿತ ವೈದ್ಯರ ತಂಡದಿಂದ ಲಯನ್ಸ್ ಕ್ಲಬ್ ಬೆಳ್ಮಣ್‌ನ ಆತಿಥ್ಯದಲ್ಲಿ ಸಂತ ಜೋಸೆಫರ ದೇವಾಲಯ ಬೆಳ್ಮಣ್ಣು, ಗ್ರಾಮ ಪಂಚಾಯತ್ ಬೆಳ್ಮಣ್ಣು, ನಂದಳಿಕೆ ಮತ್ತು ಬೋಳ, ರೋಟರಿ ಕ್ಲಬ್ ಬೆಳ್ಮಣ್ಣು, ಜೆಸಿಐ ಬೆಳ್ಮಣ್ಣು, ನವಚೇತನ ಸೇವಾ ಬಳಗ (ರಿ) ತೋಡಾರು, ವಿಕಾಸ ಭಾರತ ಟ್ರಸ್ಟ್ (ರಿ), ಶ್ರೀ ದುರ್ಗಾ ಪರಮೇಶ್ವರಿ ಫ್ರೆಂಡ್ಸ್ ಕ್ಲಬ್ (ರಿ) ಅಬ್ಬನಡ್ಕ-ನಂದಳಿಕೆ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಕಾಪು ತಾಲೂಕು ಮತ್ತು ಶ್ರೀ ಗುರುದುರ್ಗಾ ಮಿತ್ರ ಮಂಡಳಿ ನಂದಳಿಕೆ ಹಾಗೂ ಇತರ ಸಮಾಜ ಸೇವಾ ಸಂಸ್ಥೆಗಳ ಸಹಕಾರದೊಂದಿಗೆ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರವು ಅಕ್ಟೋಬರ್ 11 ಭಾನುವಾರದಂದು ಬೆಳಿಗ್ಗೆ ಗಂಟೆ 9.00 ರಿಂದ ಮಧ್ಯಾಹ್ನ 1.00 ರವರೆಗೆ ಬೆಳ್ಮಣ್ ಸಂತ ಜೋಸೆಫರ ಆಂಗ್ಲ ಮಾಧ್ಯಮ ಶಾಲಾ ಆವರಣದಲ್ಲಿ ನಡೆಯಲಿದೆ.
ಶಿಬಿರದಲ್ಲಿ ರಕ್ತದ ಸಕ್ಕರೆ ಅಂಶದ ಪರೀಕ್ಷೆ, ಕೊಬ್ಬಿನಾಂಶ, ಇ ಸಿ ಜಿ, ರಕ್ತದೊತ್ತಡ ಪರೀಕ್ಷೆ, ಕಣ್ಣಿನ ತಪಾಸಣೆ, ಮೂಳೆ ಮತ್ತು ಕೀಲುರೋಗ ಪರೀಕ್ಷೆ, ಹೃದ್ರೋಗ ಪರೀಕ್ಷೆ, ಚರ್ಮರೋಗ ಪರೀಕ್ಷೆ, ನರರೋಗ ಪರೀಕ್ಷೆ ಇನ್ನಿತರ ಪರೀಕ್ಷೆಯನ್ನು ನಡೆಸಲಾಗುವುದು. 10 ದಿನದ ಔಷಧಿಯನ್ನು ಉಚಿತವಾಗಿ ನೀಡಲಾಗುವುದು.
ಸಾರ್ವಜನಿಕರು ಈ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರದ ಪ್ರಯೋಜನವನ್ನು ಸಂಪೂರ್ಣವಾಗಿ ಪಡೆದುಕೊಳ್ಳಬೇಕೆಂದು ಲಯನ್ಸ್ ಕ್ಲಬ್ ಬೆಳ್ಮಣ್ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿರುತ್ತದೆ.
