ಕಾರ್ಕಳ

ಕಾರ್ಕಳ: ಘನತ್ಯಾಜ್ಯ ನಿರ್ವಹಣೆ ನಿಯಮಗಳ ಬಗ್ಗೆ ಮಾಹಿತಿ – ಎಸ್.ಎಲ್.ಆರ್.ಎಮ್. ಸ್ವಚ್ಛತಾ ಕಾರ್ಯಕರ್ತರಿಗೆ ಗೌರವಾರ್ಪಣೆ ಕಾರ್ಯಕ್ರಮ

ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿ, ಜಿಲ್ಲಾ ಪಂಚಾಯತ್ ಉಡುಪಿ ಹಾಗೂ ತಾಲೂಕು ಪಂಚಾಯತ್ ಕಾರ್ಕಳ ಇವರ ಸಂಯುಕ್ತ ಆಶ್ರಯದಲ್ಲಿ,
ಘನತ್ಯಾಜ್ಯ ನಿರ್ವಹಣೆ ನಿಯಮಗಳು 2026 – ಮಾಹಿತಿ ಕಾರ್ಯಕ್ರಮ ಹಾಗೂ ಗ್ರಾಮ ಪಂಚಾಯತ್ ಮಟ್ಟದ ಎಸ್.ಎಲ್.ಆರ್.ಎಮ್. ಸ್ವಚ್ಛತಾ ಕಾರ್ಯಕರ್ತರಿಗೆ ಗೌರವಾರ್ಪಣೆ ಕಾರ್ಯಕ್ರಮವು ಅ. 06ರಂದು ಕಾರ್ಕಳ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಜರಗಿತು.


ಉಡುಪಿ ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಡಾ. ಉದಯ ಕುಮಾರ್ ಶೆಟ್ಟಿ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು.
ಕಾರ್ಕಳ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ರಾವ್ ಎಂ.ವಿ., ಸಾಂದರ್ಭಿಕವಾಗಿ ಮಾತನಾಡಿ ಇಂತಹ ಯೋಜನೆಗಳ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದರು.

ರೋಟರಿ ಕ್ಲಬ್ ನ ಮಾರ್ಗದರ್ಶಕರಾದ ರೊ. ಡಾ. ಭರತೇಶ್ ಆದಿರಾಜ್ ಮಾತನಾಡಿ ಜಿಲ್ಲಾಡಳಿತ ಮತ್ತು ರೋಟರಿ ಸಂಸ್ಥೆಯು ಇಂತಹ ವಿಶಿಷ್ಟ ಕಾರ್ಯಕ್ರಮಗಳ ಮೂಲಕ ಸಮಾಜಕ್ಕೆ ಮಾದರಿಯಾಗಬಲ್ಲುದು ಎಂದು ತಿಳಿಸಿದರು.

ಡಾ. ಉದಯಕುಮಾರ್ ಶೆಟ್ಟಿ ಮಾತನಾಡಿ ” ಘನ ತ್ಯಾಜ್ಯ ನಿರ್ವಹಣೆ ನಿಯಮಗಳು 2026ರ ಬಗ್ಗೆ ವಿವರಿಸಿ , ಎಸ್‌ಎಲ್‌ಆರ್‌ಎಂ ಸ್ವಚ್ಛತಾ ಸೇನಾನಿಗಳ ಸೇವೆಯನ್ನು ಶ್ಲಾಘಿಸಿದರು ಹಾಗೂ ಅವರ ಅವಶ್ಯಕತೆಗಳನ್ನು ಸರಕಾರದ ಮಟ್ಟದಲ್ಲಿ ಚರ್ಚಿಸಿ ಹೆಚ್ಚಿನ ಸವಲತ್ತುಗಳನ್ನು ಒದಗಿಸುವಲ್ಲಿ ಭರವಸೆ ನೀಡಿದರು.

ಈ ಕಾರ್ಯಕ್ರಮದಲ್ಲಿ ಕಾರ್ಕಳ ತಾಲೂಕಿನ ವಿವಿಧ ಗ್ರಾಮಗಳಿಂದ 90ಕ್ಕಿಂತಲೂ ಹೆಚ್ಚು ಎಸ್‌ಎಲ್‌ಆರ್‌ಎಂ ಸ್ವಚ್ಛತಾ ಕಾರ್ಯಕರ್ತರು ಆಗಮಿಸಿದ್ದು ಎಲ್ಲಾ ಸ್ವಚ್ಛತಾ ಸೇನಾನಿಗಳನ್ನು ಈ ಸಂದರ್ಭದಲ್ಲಿ ಗುರುತಿಸಿ ಗೌರವಿಸಲಾಯಿತು.

ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿ ಅಧ್ಯಕ್ಷರಾದ ರೊ| ಹೆಚ್. ಮಂಜುನಾಥ ಹೆಗ್ಡೆ, ಕಾರ್ಕಳ ತಾಲೂಕು ಪಂಚಾಯತ್ ಸಹಾಯಕ ನಿರ್ದೇಶಕರಾದ ಕೃಷ್ಣಾನಂದ ಕೆ. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ರೊ.ಮಂಜುನಾಥ್ ಹೆಗ್ಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೃಷ್ಣಾನಂದ ಕೆ. ಸ್ವಾಗತಿಸಿದರು. ರೋಟರಿ ಕ್ಲಬ್‌ನ ಕಾರ್ಯದರ್ಶಿ ರೊ. ಗಣೇಶ್ ಬರ್ಲಾಯ ವಂದಿಸಿದರು. ರೊ. ಮಾಧವಿ ಕಾರ್ಯಕ್ರಮ ನಿರೂಪಿಸಿದರು. ಸ್ವಚ್ಛತಾ ಕಾರ್ಯಕರ್ತೆಯರು ಪ್ರಾರ್ಥನಾ ಗೀತೆ ಹಾಡಿದರು. ನಿಕಟ ಪೂರ್ವ ಅಧ್ಯಕ್ಷರಾದ ರೊ ಸುರೇಂದ್ರ ನಾಯಕ್, ರೊ. ಉಪೇಂದ್ರ ವಾಗ್ಲೆ, ರೊ. ಶ್ರೀವರ್ಮ ಅಜ್ರಿ, ರೊ. ಅಬ್ದುಲ್ ರೆಹಮಾನ್, ರೊ. ಫೆಲಿಕ್ಸ್ ವಾಜ್, ರೊ.ಕೃಷ್ಣಪ್ಪ, ರೊ. ಸೋಮಶೇಖರ್ ಉಪಸ್ಥಿತರಿದ್ದರು.

Related posts

ನೆಕ್ಲಾಜೆ ಶ್ರೀ ಕಾಳಿಕಾಂಬ ದೇವಸ್ಥಾನದ ಭಜನಾ ಸೇವಾ ಸಮಿತಿಯ ಪದಾಧಿಕಾರಿಗಳ ಪದಗ್ರಹಣ: ಅಧ್ಯಕ್ಷರಾಗಿ ಕರುಣಾಕರ ಆಚಾರ್ಯ, ಕಾರ್ಯದರ್ಶಿಯಾಗಿ ಪ್ರಸಾದ್ ಆಚಾರ್ಯ

Madhyama Bimba

ಶಾಲಾ ಬಸ್ಸಿನ ಚಾಲಕನಿಗೆ ಹಲ್ಲೆ: ಪ್ರಕರಣ ದಾಖಲು

Madhyama Bimba

ಜು.19 ರಂದು ಕಾರ್ಕಳ ಕ್ರಿಯೇಟಿವ್ ಕಾಲೇಜಿನಲ್ಲಿ “ಕ್ರಿಯೇಟಿವ್ ಪುಸ್ತಕಧಾರೆ-2026: 25 ಕೃತಿಗಳ ಅನಾವರಣ: ಅಜಿತ್ ಹನುಮಕ್ಕನವರ್ ಭಾಗಿ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More