ಹೆಬ್ರಿ: ಹೆಬ್ರಿ ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವ ಸಮಿತಿಯ 16ನೇ ವರ್ಷದ ಶ್ರೀ ಶಾರದಾ ಮಹೋತ್ಸವದ ಆಮಂತ್ರಣ ಪತ್ರಿಕೆಯ ಪೂಜಾ ಕಾರ್ಯಕ್ರಮವು ಹೆಬ್ರಿಯ ಶ್ರೀ ಅನಂತಪದ್ಮನಾಭ ದೇವಸ್ಥಾನದಲ್ಲಿ ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವ ಸಮಿತಿಯ ಅಧ್ಯಕ್ಷರಾದ ಸಂಪತ್ ಕುಮಾರ್ ಶೆಟ್ಟಿ, ಕಾರ್ಯದರ್ಶಿ ವಿಜಯ ಪೂಜಾರಿ ಚಾರಾ, ಕೋಶಾಧಿಕಾರಿ ರಾಘವೇಂದ್ರ ನಾಯ್ಕ್, ಗೌರವ ಸಲಹೆಗಾರರಾದ ವಾದಿರಾಜ್ ಶೆಟ್ಟಿ, ಹರೀಶ್ ಪೂಜಾರಿ ಹಾಗೂ ಸೀತಾನದಿ ವಿಠ್ಠಲ್ ಶೆಟ್ಟಿ ಮತ್ತು ಸಮಿತಿಯ ಪದಾಧಿಕಾರಿಗಳಾದ ಸುರೇಶ್ ಶೆಟ್ಟಿ, ಸುಕೇಶ್ ಶೆಟ್ಟಿ, ಕೃಷ್ಣ ನಾಯ್ಕ್, ಟಿ.ಜಿ. ಆಚಾರ್ಯ, ರಮೇಶ್ ಶೆಟ್ಟಿ, ಮಹೇಶ್ ಹೆಗ್ಡೆ, ಅಜೋಳ್ಳಿ ಹರೀಶ್ ಶೆಟ್ಟಿ, ನಡಪಾಲು ಪ್ರಮೀಳಾ ಶೆಟ್ಟಿ, ಶಕುಂತಲಾ ಆರ್. ಬಲ್ಲಾಳ್ ಹಾಗೂ ಸೋನಿ ಪಿ. ಶೆಟ್ಟಿ ಸೇರಿದಂತೆ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.
