ಮೂಡುಬಿದಿರೆ

ದೇವಸಾನ್ನಿಧ್ಯದತ್ತ ಪ್ರತಿಯೊಂದು ಹೆಜ್ಜೆಯೂ ಬದುಕಿಗೆ ಭದ್ರತೆ ನೀಡಲಿ

 

ಮೂಡುಬಿದಿರೆ: ಎಕ್ಸಲೆಂಟ್ ಪದವಿಪೂರ್ವ ಕಾಲೇಜು, ಕಲ್ಲಬೆಟ್ಟು, ಮೂಡುಬಿದಿರೆ ಇದರ ವತಿಯಿಂದ ಆಯೋಜಿಸಲಾದ ‘ಅಮ್ಮ ನಡೆ ನಮ್ಮ ನಡೆ’ ಪಾದಯಾತ್ರೆಯಲ್ಲಿ 75 ವಿದ್ಯಾರ್ಥಿಗಳು ಭಕ್ತಿಭಾವದಿಂದ ಪಾಲ್ಗೊಂಡು ಕಟೀಲು ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರಕ್ಕೆ ತೆರಳಿ ದೇವಿಯ ದರ್ಶನ ಪಡೆದರು.

ಈ ಸಂದರ್ಭದಲ್ಲಿ ಮಾತನಾಡಿದ ಕಟೀಲು ಶ್ರೀ ಕ್ಷೇತ್ರದ ಅನುವಂಶಿಕ ಅರ್ಚಕರಾದ ಶ್ರೀ ಕಮಲಾದೇವಿ ಪ್ರಸಾದ ಆಶ್ರಣ್ಣ ಅವರು, “ದೇವಸಾನ್ನಿಧ್ಯದತ್ತ ನಾವು ಇಡುವ ಪ್ರತಿಯೊಂದು ಹೆಜ್ಜೆಯೂ ನಮ್ಮ ಯಾತನೆಗಳನ್ನು ದೂರಮಾಡಿ, ಬದುಕಿನಲ್ಲಿ ಭದ್ರತೆಯನ್ನು ಒದಗಿಸಲಿ. ಭಕ್ತಿ ಎನ್ನುವುದು ಕೇವಲ ಪ್ರಾರ್ಥನೆಗೆ ಸೀಮಿತವಾಗದೆ, ಬದುಕಿಗೆ ಧೈರ್ಯ, ಮನಸ್ಸಿಗೆ ನೆಮ್ಮದಿ ಹಾಗೂ ಮುನ್ನಡೆಯಲು ಆತ್ಮವಿಶ್ವಾಸವನ್ನು ನೀಡುವ ಶಕ್ತಿಯಾಗಬೇಕು” ಎಂಬ ಆಶಯವನ್ನು ವ್ಯಕ್ತಪಡಿಸಿದರು.

ಸಂಸ್ಥೆಯ ಅಧ್ಯಕ್ಷರಾದ ಯುವರಾಜ್ ಜೈನ್ ಅವರು ಮಾತನಾಡಿ, ವಿದ್ಯಾರ್ಥಿಗಳಲ್ಲಿ ಭಕ್ತಿ, ಶ್ರದ್ಧೆ, ಶಿಸ್ತು ಮತ್ತು ಸಂಸ್ಕೃತಿಯ ಕುರಿತಾದ ಅರಿವು ಬೆಳೆಸುವುದರೊಂದಿಗೆ, ಜೀವನದ ಸವಾಲುಗಳನ್ನು ಎದುರಿಸುವ ಮಾನಸಿಕ ಸ್ಥೈರ್ಯವನ್ನು ರೂಪಿಸುವಲ್ಲಿ ಇಂತಹ ಧಾರ್ಮಿಕ ಪಾದಯಾತ್ರೆಗಳು ಮಹತ್ವದ ಪಾತ್ರ ವಹಿಸುತ್ತವೆ ಎಂಬ ಸಂದೇಶವನ್ನು ನೀಡಿದರು. ಶಿಕ್ಷಣವು ಜ್ಞಾನಾರ್ಜನೆಯೊಂದಿಗೆ ಸಂಸ್ಕಾರ ಮತ್ತು ಮೌಲ್ಯಗಳನ್ನೂ ಬೆಳೆಸಬೇಕು; ದೇವರ ಸಾನ್ನಿಧ್ಯದಲ್ಲಿ ಸಾಗುವ ಇಂತಹ ಅನುಭವಗಳು ವಿದ್ಯಾರ್ಥಿಗಳಲ್ಲಿ ಸಾಮೂಹಿಕ ಪ್ರಜ್ಞೆ ಹಾಗೂ ಆಂತರಿಕ ಶಕ್ತಿಯನ್ನು ವೃದ್ಧಿಸಲಿ ಎಂಬ ಆಶಯವನ್ನು ಅವರು ವ್ಯಕ್ತಪಡಿಸಿದರು.

ಕಟೀಲು ಕ್ಷೇತ್ರದಲ್ಲಿ ದೇವಿಯ ದರ್ಶನದ ಬಳಿಕ ವಿದ್ಯಾರ್ಥಿಗಳಿಂದ ಭಕ್ತಿಪೂರ್ವಕ ಭಜನಾ ಕಾರ್ಯಕ್ರಮ ನಡೆಯಿತು.

ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯದರ್ಶಿ ಶ್ರೀಮತಿ ರಶ್ಮಿತಾ ಜೈನ್, ಪ್ರೌಢಶಾಲಾ ಮುಖ್ಯೋಪಾಧ್ಯಾಯ ಶಿವಪ್ರಸಾದ ಭಟ್ ಕಾಂತಾವರ, ವಾಣಿಜ್ಯ ವಿಭಾಗದ ಮುಖ್ಯಸ್ಥ ಪ್ರಶಾಂತ್ ಶೆಟ್ಟಿ, ಭಾಷಾ ವಿಭಾಗದ ಮುಖ್ಯಸ್ಥ ಡಾ. ವಾದಿರಾಜ ಕಲ್ಲೂರಾಯ, ಉಪನ್ಯಾಸಕ ಅಶೋಕ್ ಹಾಗೂ ಹಾಸ್ಟೆಲ್ ವಾರ್ಡನ್‌ಗಳು ಉಪಸ್ಥಿತರಿದ್ದರು.

Related posts

ದಕ್ಷಿಣ ಕನ್ನಡ 55ಮಂದಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ

Madhyama Bimba

ಮೂಡುಮಾರ್ನಾಡು ಪ್ರೌಢಶಾಲೆಯಲ್ಲಿ ಉಚಿತ ನೋಟ್ ಪುಸ್ತಕ ಹಾಗೂ ಗುರುತುಕಾರ್ಡು ವಿತರಣಾ ಸಮಾರಂಭ

Madhyama Bimba

ಸಿಎ ಫೌಂಡೇಶನ್ ಪರೀಕ್ಷೆಯಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ 41 ವಿದ್ಯಾರ್ಥಿಗಳು ಉತ್ತೀರ್ಣ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More