Blog

ಮೆಸ್ಕಾಂ ಕಾರ್ಕಳದಲ್ಲಿ ವಿಶೇಷ ಕಾರ್ಯಕ್ರಮ

ಕೇಂದ್ರ ಸರಕಾರದ ಪ್ರಧಾನಮಂತ್ರಿ ಸೂರ್ಯಘರ್‌ ಯೋಜನೆಯ ಕುರಿತು ಮೆಸ್ಕಾಂ ಕಾರ್ಕಳ ಉಪವಿಭಾಗದಲ್ಲಿ ಅ. 15ರಿಂದ 17ರ ವರೆಗೆ ವಿಶೇಷ ಅಭಿಯಾನ ಆಯೋಜಿಸಲಾಗಿದೆ.

ಸೌರ ವಿದ್ಯುತ್ ವ್ಯವಸ್ಥೆ ಅಳವಡಿಸಿ ಕೊಳ್ಳಲು ಇಚ್ಛಿಸುವ ಗ್ರಾಹಕರಿಗೆ ಯೋಜನೆಯ ಮಾಹಿತಿ, ಅರ್ಜಿ ನೋಂದಣಿ, ಸಹಾಯಧನ ಹಾಗೂ ಬ್ಯಾಂಕ್ ಸಾಲ ಸೌಲಭ್ಯದ ಕುರಿತು ಸ್ಥಳದಲ್ಲೇ ಮಾಹಿತಿ ನೀಡಲಾಗುವುದು.

ಅರ್ಜಿ ಸಲ್ಲಿಸಲು ಇತ್ತೀಚಿನ ವಿದ್ಯುತ್ ಬಿಲ್‌, ಅರ್ಜಿದಾರರ ಸರಕಾರಿ ಗುರುತಿನ ಚೀಟಿ ಹಾಗೂ ಬ್ಯಾಂಕ್ ವಿವರಗಳು ಅಗತ್ಯ ವಿದ್ದು, ಸಾರ್ವಜನಿಕರು ವಿಶೇಷ ಕೌಂಟರ್‌ನ ಸದುಪಯೋಗ ಪಡೆದುಕೊಳ್ಳುವಂತೆ ಮೆಸ್ಕಾಂ ಪ್ರಕಟನೆ ತಿಳಿಸಿದೆ.

Related posts

ಕಾಂಗ್ರೆಸ್ ವಿರುದ್ಧ ತೊಡೆ ತಟ್ಟಿದ ಬಿಜೆಪಿ

Madhyama Bimba

ಮೂಡುಬಿದಿರೆ ಶ್ರೀಗಣೇಶೋತ್ಸವ ಪ್ರಯುಕ್ತ ವಿವಿಧ ಸ್ಪರ್ಧೆಗಳು

Madhyama Bimba

ಮೈಸೂರು ದಸರಾ ಕನ್ನಡ ಪುಸ್ತಕಗಳ ರಿಯಾಯಿತಿ ಮಾರಾಟ ಮೇಳ : ಮಳಿಗೆ ತೆರೆಯಲು ಅವಕಾಶ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More