ರಾಜ್ಯದ ಪ್ರತಿಷ್ಠಿತ ಕ್ರೆಡಿಟ್ ಸಹಕಾರ ಸಂಸ್ಥೆಗಳಲ್ಲೊಂದಾದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ವ್ಯಾಪ್ತಿಯಲ್ಲಿ ಕಾರ್ಯಾಚರಿಸುತ್ತಿರುವ ಸಹಕಾರ ಮಾಣಿಕ್ಯ ಪ್ರಶಸ್ತಿ ವಿಜೇತ ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ-ಓಪರೇಟಿವ್ ಸೊಸೈಟಿಯು 2026-27ನೇ ಸಾಲಿನ ವಿತ್ತೀಯ ವರ್ಷದ ಅರ್ಧವಾರ್ಷಿಕ ಅವಧಿ ಸೆಪ್ಟೆಂಬರ್ 30 ರ ಅಂತ್ಯಕ್ಕೆ ತನ್ನೆಲ್ಲಾ ಕಾರ್ಯವಿಭಾಗದಲ್ಲಿ ಹಿಂದಿನ ದಿನಗಳಂತೆ ಗಣನೀಯ ಪ್ರಗತಿಯನ್ನು ಸಾಧಿಸಿದ್ದು ನಿಗದಿಪಡಿಸಿದ ಎಲ್ಲಾ ಗುರಿಗಳನ್ನು ಮೀರಿ ಉತ್ತಮ ಸಾಧನೆ ದಾಖಲಿಸಿದೆ.
ಸೆಪ್ಟೆಂಬರ್ 30,2026ಕ್ಕೆ ರೂ.762 ಕೋಟಿ ಠೇವಣಿ, ರೂ.679 ಕೋಟಿ ಹೊರಬಾಕಿ ಸಾಲ, ಸೇರಿದಂತೆ ಒಟ್ಟು ರೂ.1441 ಕೋಟಿ ವ್ಯವಹಾರವನ್ನು ಹೊಂದಿದೆ. ಕಳೆದ ವರ್ಷದ ಇದೇ ಅವಧಿ 30.09.2025 ಕ್ಕೆ ಹೋಲಿಸಿದರೆ ಠೇವಣಾತಿಯಲ್ಲಿ ರೂ123 ಕೋಟಿ (19%), ಹೊರಬಾಕಿ ಸಾಲದಲ್ಲಿ ರೂ.130 ಕೋಟಿ (24%), ಒಟ್ಟು ವ್ಯವಹಾರದಲ್ಲಿ ರೂ.253 ಕೋಟಿ ಹೆಚ್ಚಳವಾಗಿದ್ದು 21% ಬೆಳವಣಿಗೆ ಸಾಧಿಸಲಾಗಿದೆ.
30.09.2026 ಕ್ಕೆ ನಿವ್ವಳ ಲಾಭವು ರೂ.7.97 ಕೋಟಿ ಗಳಿಸಿದ್ದು, ಇದು 2025ನೇ ಸಪ್ಟೆಂಬರ್ 30 ಕ್ಕೆ ಹೋಲಿಸುವಾಗ ರೂ.2.13 ಕೋಟಿ ಹೆಚ್ಚಳವಾಗಿ 36% ಲಾಭದ ವೃದ್ಧಿ ದಾಖಲಾಗಿದೆ.
30.09.2026 ಕ್ಕೆ ಕೇವಲ ರೂ.22 ಲಕ್ಷದಷ್ಟು (Gross NPA) ಮಾತ್ರ ಅನುತ್ಪಾದಕ ಆಸ್ತಿ ಇದ್ದು, ಇದು ಹೊರಬಾಕಿ ಸಾಲದ ಶೇ. 0.03% ಕ್ಕೆ ಸೀಮಿತವಾಗಿರುವುದು, ಮಾತ್ರವಲ್ಲದೆ ಸಂಘದ ನಿವ್ವಳ ಅನುತ್ಪಾದಕ ಆಸ್ತಿಯು (Net NPA) ಕಳೆದ 19 ವರ್ಷಗಳಿಂದ ಶೂನ್ಯ ಪ್ರಮಾಣದಲ್ಲಿದ್ದು, ಸಾಲ ಮರುಪಾವತಿಯು ಉತ್ತಮವಾಗಿರುತ್ತದೆ.
ಸಂಘದ ನಿರಂತರ ಪ್ರಗತಿಗೆ ಸಹಕರಿಸುತ್ತಿರುವ ಸಂಘದ ಎಲ್ಲಾ ಆಡಳಿತ ಮಂಡಳಿ ಸದಸ್ಯರುಗಳಿಗೆ, ಶಾಖಾ ಸಲಹಾ ಸಮಿತಿ ಅಧ್ಯಕ್ಷರುಗಳಿಗೆ ಹಾಗೂ ಸದಸ್ಯರುಗಳಿಗೆ, ಸಂಘದ ಸರ್ವ ಸದಸ್ಯ ಬಾಂಧವರಿಗೆ ಮತ್ತು ಹಿತೈಷಿಗಳಿಗೆ ಹಾಗೂ ಸಿಬ್ಬಂದಿಗಳಿಗೆ ಸಂಘದ ವತಿಯಿಂದ ಕೃತಜ್ಞತೆಯನ್ನು ಸಲ್ಲಿಸುತ್ತಿದ್ದೇನೆ ಎಂದು ಸಂಘದ ಅಧ್ಯಕ್ಷರಾದ ಕೆ. ಜೈರಾಜ್ ಬಿ. ರೈಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
