ಅಜೆಕಾರು ಎಣ್ಣೆಹೊಳೆ ಸೇತುವೆಯ ಕೆಳಭಾಗದಲ್ಲಿ ನದಿಯ ಬದಿ ಮೃತದೇಹವೊಂದು ಪತ್ತೆಯಾಗಿದೆ.
ಈ ಮೃತ ವ್ಯಕ್ತಿ ಯಾರೆಂದು ತಿಳಿದುಬಂದಿಲ್ಲ.
ಈತ ನೀಲಿ ಬಣ್ಣದ ಉದ್ದ ಗೆರೆ ಇರುವ ಶರ್ಟ್ ಹಾಗೂ ಬಿಳಿ ಮಿಶ್ರಿತ ಹಳದಿ ಪ್ಯಾಂಟ್ ಧರಿಸಿದ್ದು, ಕಾಲಲ್ಲಿ ನೀಲಿ ಬಣ್ಣದ ಶೂ ಅನ್ನು ಧರಿಸಿದ್ದಾರೆ.
ಸಂಬಂಧಪಟ್ಟವರು ಅಜೆಕಾರು ಠಾಣೆಯನ್ನು ಸಂಪರ್ಕಿಸಬಹುದಾಗಿದೆ.
