ಹೆಬ್ರಿ : ಧರ್ಮಯೋಗಿ ಮೋಹನ್ಸ್ವಾಮೀಜಿ ಸ್ಥಾಪಿಸಿದ ಪ್ರಸಿದ್ಧ ಮುದ್ರಾಡಿ ಶ್ರೀ ಅಭಯಹಸ್ತೆ ಆದಿಶಕ್ತಿ ಕ್ಷೇತ್ರವು ಸುಕುಮಾರ್ಮೋಹನ್ ಅವರ ಪರಿಶ್ರಮದ ಮೂಲಕ ಇಂದು ವಿಶ್ವದೆತ್ತರಕ್ಕೆ ಖ್ಯಾತಿ ಪಡೆದಿದೆ. ನಮತುಳುವೆರ್ ಕಲಾ ಸಂಘಟನೆ ಸಾಟಿಯೇ ಇಲ್ಲದಂತೆ ರಂಗಭೂಮಿಯಲ್ಲಿ ಪ್ರಸಿದ್ಧಿ ಪಡೆದಿದೆ, ಫಲಾಫೇಕ್ಷೆ ಇಲ್ಲದೆ ಸುಕುಮಾರ್ ಮೋಹನ್ ಮಾಡುವ ಸೇವೆಯಿಂದ ಮತ್ತಷ್ಟು ಪರಿಪೂರ್ಣತೆಯಿಂದ ಬೆಳಗುತ್ತಿದೆ, ನಾವು ಕ್ಷೇತ್ರದ ಜೊತೆಗೆ ಇದ್ದೇವೆ ಎಂದು ರಾಜ್ಯದ ನಾರಾಯಣಗುರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮುದ್ರಾಡಿ ಮಂಜುನಾಥ ಪೂಜಾರಿ ಹೇಳಿದರು.
ಅವರು ಭಾನುವಾರ ಮುದ್ರಾಡಿ ನಾಟ್ಕದೂರು ನಮ ತುಳುವೆರ್ಕಲಾ ಸಂಘಟನೆಯ ವತಿಯಿಂದ ಕನ್ನಡ ಸಂಸ್ಕೃತಿ ಇಲಾಖೆ ಬೆಂಗಳೂರು ಸಹಕಾರದಲ್ಲಿ ಮುದ್ರಾಡಿ ಶ್ರೀ ಆದಿಶಕ್ತಿ ಕ್ಷೇತ್ರದಲ್ಲಿ ಅ.11 ರಿಂದ 22 ರ ತನಕ ನಡೆಯುವ ೨೬ನೇ ವರ್ಷದ ನವರಂಗೋತ್ಸವ, ನಾಟ್ಕ ಮುದ್ರಾಡಿಯ 41ನೇ ವರ್ಷದ ಸಂಭ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಹಿಂದಿನಿಂದಲೂ ನಿತ್ಯವೂ ನಾವು ಮಾಧ್ಯಮಗಳಲ್ಲಿ ಕಾಣುವ ಹೆಸರು ಅಂಬಾತನಯ ಮುದ್ರಾಡಿ, ಮುದ್ರಾಡಿ ನಮ ತುಳುವೆರ್ಕಲಾ ಸಂಘಟನೆ, ಶ್ರೀ ಆದಿಶಕ್ತಿ ಕ್ಷೇತ್ರ, ಆ ಮೂಲಕ ಮುದ್ರಾಡಿಯ ಖ್ಯಾತಿಯು ಜಗದೆತ್ತರಕ್ಕೆ ಏರಿದೆ. ಮುದ್ರಾಡಿಗೆ ಹೆಚ್ಚಿನ ಕೀರ್ತಿಯನ್ನು ಸ್ವಾತಂತ್ರ್ಯ ದೊರೆತ ಬಳಿಕ ಅಂಬಾತನಯ ಮುದ್ರಾಡಿ, ಸುಕುಮಾರ್ಮೋಹನ್ಹೆಚ್ಚಿಸಿದ್ದಾರೆ ಎಂದು ಮುದ್ರಾಡಿ ಮಂಜುನಾಥ ಪೂಜಾರಿ ಅಭಿನಂದಿಸಿದರು.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯ ಉದ್ಯಾವರ ನಾಗೇಶ ಕುಮಾರ್ಅಧ್ಯಕ್ಷತೆ ವಹಿಸಿ ಮಾತನಾಡಿ ನನಗೂ ಶ್ರೀಕ್ಷೇತ್ರಕ್ಕೂ ವಿಶೇಷ ನಂಟು ಇದೆ. ಧರ್ಮಯೋಗಿ ಮೊಃನ್ಸ್ವಾಮೀಜಿ ಸ್ಥಾಪಿಸಿದ ಶ್ರೀ ಆದಿಶಕ್ತಿ ಕ್ಷೇತ್ರಕ್ಕೆ ಸುಕುಮಾರ್ಮೋಹನ್ ಮತ್ತವರ ಕುಟುಂಬ ಸಾಮಾಜಿಕ, ಧಾರ್ಮಿಕ, ರಂಗಭೂಮಿ, ಸಾಂಸ್ಕೃತಿಕ ಟಚ್ನೀಡಿ ಕ್ಷೇತ್ರವನ್ನು ಬೆಳಗಿಸಿದ್ದಾರೆ. ಮುದ್ರಾಡಿ ಕ್ಷೇತ್ರ ನಮ್ಮ ಹೃದಯದಲ್ಲಿದೆ, ಕಠಿಣ ಪರಿಶ್ರಮದ ಮೂಲಕ ಮುದ್ರಾಡಿ ಕ್ಷೇತ್ರ ಮತ್ತು ನಮತುಳುವೆರ್ಕಲಾ ಸಂಘಟನೆಗೆ ರಾಷ್ಟ್ರೀಯ ಮನ್ನಣೆಯನ್ನು ದೊರಕಿಸುವ ಕಾರ್ಯವನ್ನು ಮಾಡುತ್ತಿದ್ದಾರೆ ಎಂದರು.
ಮುದ್ರಾಡಿ ನಾಟ್ಕದೂರು ನಮ ತುಳುವೆರ್ಕಲಾ ಸಂಘಟನೆಯ ಅಧ್ಯಕ್ಷರಾದ ಧರ್ಮಾಧಿಕಾರಿ ವಿಜಯಕೀರ್ತಿ ಧರ್ಮಯೋಗಿ ಸುಕುಮಾರ್ಮೋಹನ್ಆಶೀರ್ವಚನ ನೀಡಿ ಸರ್ವರನ್ನು ಮಹಾತಾಯಿ ಆದಿಶಕ್ತಿ ಕರುಣಿಸಲಿ, ನಮ್ಮ ಮಹಾತಾಯಿಯ ಸ್ಮರಣೆಗಾಗಿ ದುರ್ಗಾಷ್ಟಮಿ ಪ್ರಯುಕ್ತ ೧೦೮ ಮುತ್ತೈದಯೆರಿಗೆ ಸೀರೆ ನೀಡುವ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.
ತುಮಕೂರು ಯೋಗ ವಿಸ್ಮಯ ಟ್ರಸ್ಟ್ನ ಅನಂತ್ಜಿ., ಹೆಗ್ಗದ್ದೆ ಮಾಧ್ಯಮದ ಸಂದೀಪ್ಶೆಟ್ಟಿ, ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಕಾರ್ಯನಿರ್ವಾಹಣಾಧಿಕಾರಿ ಪ್ರಶಾಂತ್ ಕುಮಾರ್ಶೆಟ್ಟಿ, ಕಾಟಿಪಳ್ಳಿ ವಿದ್ಯಾ ಎಸ್ಕರ್ಕೇರ, ನಾಟಿ ವೈದ್ಯ ಡಾ. ರಾಘವೇಂದ್ರ ಹುಳ್ಳೂರು ಕೈಲ್ಕೆರೆ ಅವರಿಗೆ ಕರ್ಣಾಟ ನಾಡ ಪೋಷಕ ಪ್ರಶಸ್ತಿಯನ್ನು ಹಾಗೂ ಉಡುಪಿಯ ರಂಗ ನಿರ್ದೇಶಕ ಪ್ರಶಾಂತ್ ಉದ್ಯಾವರ ಅವರಿಗೆ ಬಿ.ವಿ.ಕಾರಂತ ಯುವ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಮುದ್ರಾಡಿ ನಮ ತುಳುವೆರ್ಕಲಾ ಸಂಘಟನೆಯಿಂದ ಗುರುರಾಜ್ ಮಾರ್ಪಳ್ಳಿ ರಚಿಸಿ ನಿರ್ದೇಶಿಸಿದ ಅವ್ವ ನನ್ನವ್ವ ನಾಟಕದ ೫೦೦ನೇ ಪ್ರದರ್ಶನ ನಡೆಯಿತು. ನಮ ತುಳುವೆರ್ಕಲಾ ಸಂಘಟನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಸುಕುಮಾರ್ಮೋಹನ್ ಸ್ವಾಗತಿಸಿದರು. ರಚಿತಾ ಕುಲಾಲ್ಕಬ್ಬಿನಾಲೆ ನಿರೂಪಿಸಿ ವಂದಿಸಿದರು.
