ಕಾರ್ಕಳ ಎಣ್ಣೆಹೊಳೆಯ ಬಳಿ ನದಿಯಲ್ಲಿ ಸಿಕ್ಕಿದ ಶವ ಕಣಂಜಾರಿನ ಸುರೇಶ್ ಶೆಟ್ಟಿಯವರದ್ದು ಎಂದು ಗುರುತು ಪತ್ತೆಯಾಗಿದೆ.
ಇವರು ಮಂಗಳೂರಿನ ಯೆಯ್ಯಾಡಿಯಲ್ಲಿ ಹೊಟೇಲ್ ಕೆಲಸ ಮಾಡಿಕೊಂಡಿದ್ದರು.
ಕಟೀಲಿಗೆ ಬಂದಿದ್ದ ಇವರು ಶುಕ್ರವಾರದ ದಿನ ಮೊಬೈಲ್ ಅಲ್ಲಿಯ ಅಂಗಡಿಯೊಂದರಲ್ಲಿ ಇಟ್ಟು ಬಳಿಕ ನಾಪತ್ತೆಯಾಗಿದ್ದರು.
ಅವರು ಪತ್ನಿ ಹಾಗೂ ಮಕ್ಕಳನ್ನು ಅಗಲಿದ್ದಾರೆ.
ಅವರ ಶವದ ಗುರುತನ್ನು ಸಂಬಂಧಿಕರು ಪತ್ತೆ ಮಾಡಿದ್ದು ಈ ಶವ ಸುರೇಶ್ ಶೆಟ್ಟಿಯವರದ್ದು ಎಂದು ಹೇಳಿದ್ದಾರೆ.
