ಇರುವೈಲು ಓಡ ಬಸ್ ನಿಲ್ದಾಣ ಧರೆಗೆ
ಮೂಡುಬಿದಿರೆ ತಾಲೂಕಿನ ಇರುವೈಲು ಓಡ ಬಸ್ ನಿಲ್ದಾಣ ರಸ್ತೆ ಅಭಿವೃದ್ಧಿ ಕಾರ್ಯ ಸಂದರ್ಭ ಕುಸಿದು ಬಿದ್ದಿದೆ.
ಪರಿಸರದ ಸುಮಾರು ಮನೆಗಳವರಿಗೆ ಪ್ರತಿನಿತ್ಯ ಪ್ರಯೋಜನವಾಗುತ್ತಿದ್ದ ಪ್ರಖ್ಯಾತ ಈ ನಿಲ್ದಾಣ ತಕ್ಕಮಟ್ಟಿಗೆ ಅಪಾಯಕಾರಿಯಾಗಿಯೇ ಕಂಡುಬಂದಿತ್ತು. ಇದೀಗ ಅಕ್ಟೋಬರ್ 14ರ ರಾತ್ರಿ ಬಸ್ ನಿಲ್ದಾಣ ಕುಸಿದು ಬಿದ್ದಿದೆ. ನಿಲ್ದಾಣ ಕುಸಿತದಿಂದಾಗಿ ಇದೀಗ ಪರಿಸರದ ಹಲವಾರು ಮನೆಗಳವರು ಬೇಸಿಗೆ ಸಮಯದಲ್ಲಿ ಬಿಸಿಲು ಎದುರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. 1996ರಲ್ಲಿ ಊರವರು ಒಗ್ಗೂಡಿ ಸಾರ್ವಜನಿಕ ಪ್ರಯೋಜನಕ್ಕಾಗಿ ಈ ಬಸ್ ನಿಲ್ದಾಣವನ್ನು ಕಟ್ಟಿದ್ದರು. ಗ್ರಾಮ ಪಂಚಾಯ್ತಿ ಓಡ ಪ್ರದೇಶದಲ್ಲಿ ಇರುವ ಖಾಲಿ ಜಾಗದಲ್ಲಿ ಮತ್ತೊಮ್ಮೆ ನಿಲ್ದಾಣ ವನ್ನು ನಿರ್ಮಿಸಬೇಕಾಗಿದೆ.
