ಮೂಡುಬಿದಿರೆ

ಪ್ರಸಾದ್ ನೇತ್ರಾಲಯ ನೇತೃತ್ವದಲ್ಲಿ ವೈದ್ಯರ ದಿನಾಚರಣೆ

ಮಂಗಳೂರು: ಪಂಪ್‌ವೆಲ್‌ನಲ್ಲಿರುವ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆಯ ನೇತೃತ್ವದಲ್ಲಿ ಜು. 1ರಂದು ಆಸ್ಪತ್ರೆಯ ಸಭಾಂಗಣದಲ್ಲಿ “ವೈದ್ಯರ ದಿನಾಚರಣೆ 2026” ಅನ್ನು ಆಚರಿಸಲಾಯಿತು.


“ಬಿಹೈಂಡ್ ದಿ ಮಾಸ್ಕ್: ಹೂ ಹೀಲ್ಸ್ ದಿ ಹೀಲರ್ಸ್?” (ಮುಖವಾಡದ ಹಿಂದೆ: ವೈದ್ಯರನ್ನು ಗುಣಪಡಿಸುವವರು ಯಾರು?) ಎಂಬ ವಿಶೇಷ ಆಶಯದೊಂದಿಗೆ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಂಗಳೂರಿನ ಯೆನೆಪೋಯ ಪರಿಗಣಿತ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಆದ ಡಾ. ಅಶ್ವಿನಿ ದತ್ ಆರ್ (ಎಂಬಿಬಿಎಸ್, ಎಂಡಿ) ಭಾಗವಹಿಸಿದ್ದರು.

ಅವರು ಮಾತನಾಡುತ್ತಾ ಹಗಲು-ರಾತ್ರಿ ಎನ್ನದೆ, ಸ್ವಂತ ಆರೋಗ್ಯವನ್ನು ಲೆಕ್ಕಿಸದೆ ಸಮಾಜಕ್ಕಾಗಿ ದುಡಿಯುವ ವೈದ್ಯರ ದೈಹಿಕ ಮತ್ತು ಮಾನಸಿಕ ಆರೋಗ್ಯದ ಕಡೆಗೆ ನಾವೆಲ್ಲರೂ ಗಮನ ಹರಿಸಬೇಕಾದ ಅಗತ್ಯವಿದೆ. ವೈದ್ಯರಿಗೆ ಕೇವಲ ಗೌರವ ನೀಡಿದರೆ ಸಾಲದು, ಅವರಿಗೆ ಕೆಲಸ ಮಾಡಲು ಸುರಕ್ಷಿತ ಮತ್ತು ಒತ್ತಡರಹಿತ ವಾತಾವರಣವನ್ನು ನಿರ್ಮಿಸಿಕೊಡುವುದು ಇಡೀ ಸಮಾಜದ ಜವಾಬ್ದಾರಿಯಾಗಿದೆ.

ಇವತ್ತು ಇಲ್ಲಿ ಪ್ರಸಾದ್ ನೇತ್ರಾಲಯದ ವತಿಯಿಂದ ಸಮಾಜಕ್ಕೆ ಸ್ವಾರ್ಥರಹಿತ ಸೇವೆ ಸಲ್ಲಿಸಿದ ಹಿರಿಯ ಮತ್ತು ಅನುಭವೀ ವೈದ್ಯರನ್ನು ಸನ್ಮಾನಿಸುತ್ತಿರುವುದು ಅತ್ಯಂತ ಶ್ಲಾಘನೀಯ ಕಾರ್ಯ. ಸನ್ಮಾನಿತರಾದ ಎಲ್ಲಾ ವೈದ್ಯ ದೇವರಿಗೆ ಶುಭಾಶಯ ತಿಳಿಸಿದರು.

ಅತಿಥಿಯಾಗಿ ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜಿನ ಮುಖ್ಯ ಇಂಟರ್ವೆನ್ಷನಲ್ ಕಾರ್ಡಿಯಾಲಜಿಸ್ಟ್ ಡಾ. ಎಚ್. ಪ್ರಭಾಕರ್ (ಎಂಡಿ, ಡಿಎಂ, ಎಫ್‌ಐಸಿಸಿ) ಉಪಸ್ಥಿತರಿದ್ದರು.

ಅವರು ಮಾತನಾಡುತ್ತಾ ಇಲ್ಲಿ ನೆರೆದಿರುವ ಎಲ್ಲಾ ವೈದ್ಯರಿಗೆ, ಶುಶ್ರೂಷಕರಿಗೆ ಮತ್ತು ವೈದ್ಯಕೀಯ ಸಿಬ್ಬಂದಿಗೆ ಮತ್ತೊಮ್ಮೆ ರಾಷ್ಟ್ರೀಯ ವೈದ್ಯರ ದಿನಾಚರಣೆಯ ಶುಭಾಶಯ ತಿಳಿಸಿದರು. ನಿಮ್ಮ ತ್ಯಾಗ ಮತ್ತು ಸೇವೆಗೆ ಇಡೀ ಸಮಾಜ ಸದಾ ಋಣಿಯಾಗಿದೆ.

ಪ್ರಸಾದ್ ನೇತ್ರಾಲಯ ಸಮೂಹ ಸಂಸ್ಥೆಗಳ ವೈದ್ಯಕೀಯ ನಿರ್ದೇಶಕರಾದ ಡಾ. ಕೃಷ್ಣ ಪ್ರಸಾದ್ ಕುಡ್ಲು ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಶ್ರೀಮತಿ ರಶ್ಮಿ ಕೃಷ್ಣ ಪ್ರಸಾದ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭದಲ್ಲಿ ಸಮಾಜಕ್ಕೆ ಸ್ವಾರ್ಥರಹಿತ ವೈದ್ಯಕೀಯ ಸೇವೆ ಸಲ್ಲಿಸಿದ ವೈದ್ಯರನ್ನು ವಿವಿಧ ವೈದ್ಯಕೀಯ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಎಲ್ಲಾ ಪದ್ಧತಿಗಳ ವೈದ್ಯರುಗಳಾದ ಡಾ. ಸುಧೀಂದ್ರ ರಾವ್ .ಎಸ್., ಡಾ. ಕೃಷ್ಣ ಗೋಖಲೆ, ಡಾ. ಎ. ಮಂಜಯ್ಯ ಶೆಟ್ಟಿ, ಡಾ. ಶ್ರೀಪ್ರಕಾಶ್ ಬಿ., ಡಾ. ಕಿಶನ್ ರಾವ್, ಡಾ. ಆರ್.ಕೆ. ಶೆಟ್ಟಿ, ಡಾ. ಶ್ಯಾಮ್ ಪ್ರಸಾದ್ ಶೆಟ್ಟಿ, ಡಾ. ಪ್ರಿಯದರ್ಶಿನಿ ರೈ, ಡಾ. ವಿಕ್ರಂ ಜೈನ್, ಡಾ. ಹರೀಶ್ ಶೆಟ್ಟಿ, ಡಾ. ಶರತ್ ಹೆಗಡೆ, ಡಾ. ಸಿಬಿನ, ಡಾ. ಶೃತಿ, ಡಾ. ತೇಜಸ್ವಿನಿ ಇವರನ್ನು ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.
ಪ್ರಸಾದ್ ನೇತ್ರಾಲಯ ಮಂಗಳೂರಿನ ನಿರ್ದೇಶಕರುಗಳಾದ ಡಾ. ವಿಕ್ರಮ್ ಜೈನ್, ಡಾ. ಹರೀಶ್ ಶೆಟ್ಟಿ ಮತ್ತು ಡಾ. ಜೇಕಬ್ ಚಾಕೋ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.

ದಿವಾಕರ ಕಾರ್ಯಕ್ರಮವನ್ನು ನಿರೂಪಿಸಿದರು, ಶ್ರೀಮತಿ ನೂತನ್ ವಂದಿಸಿದರು, ಶ್ರೀಮತಿ ಕಾವ್ಯ ಸ್ವಾಗತಿಸಿದರು. ನೂರಾರು ಗಣ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಗಳು ಭಾಗವಹಿಸಿದ್ದರು.

Related posts

ಶ್ರೀ ಮಹಾವೀರ ಕಾಲೇಜಿನಲ್ಲಿ ಗಾಂಧೀ ಜಯಂತಿ ಆಚರಣೆ

Madhyama Bimba

ಮೂಡುಬಿದಿರೆಯ ರೋಟರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆ

Madhyama Bimba

ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕದ  ವರ್ಧಂತ್ಯುತ್ಸವ ಗಣ್ಯರ ಶುಭಾಶಯ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More