ಶಿರ್ತಾಡಿ: ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಶ್ರೀ ಕ್ಷೇತ್ರ ಅರ್ಜುನಾಪುರ ಶಿರ್ತಾಡಿ- ವಾಲ್ಪಾಡಿ ಯಲ್ಲಿ ದಾನಿಗಳ ನೆರವಿನೊಂದಿಗೆ ಸುಮಾರು 22 ಮಂದಿ ತೀವ್ರ ಅನಾರೋಗ್ಯ ಪೀಡಿತರಿಗೆ ಎರಡುವರೆ ಲಕ್ಷ ರುಪಾಯಿಯಷ್ಟು ಮೊತ್ತವನ್ನು ಅರೋಗ್ಯ ನಿಧಿಯಾಗಿ ವಿತರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ನಾರಾಯಣ ಶೆಟ್ಟಿ ಕೊಂಕೆ ವಹಿಸಿ ಮಾತನಾಡಿ ಪ್ರಸಕ್ತ ದ್ವಿತೀಯ ವರ್ಷದ ಕಾರ್ಯಕ್ರಮದಲ್ಲಿ ನೆರವು ನೀಡಲಾಗಿದೆ. ತೃತೀಯ ವರ್ಷದಲ್ಲಿ ಸುಮಾರು ಐದು ಲಕ್ಷ ಅರೋಗ್ಯ ನಿಧಿಯನ್ನು ವಿತರಿಸುವ ಗುರಿ ಹೊಂದಲಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿ ಪುಣೆ ಉದ್ಯಮಿ ರೋಹಿತ್ ಕುಮಾರ್ ಶೆಟ್ಟಿ ನಗ್ರಿಗುತ್ತು, ರುದ್ರಾಂಶ ಕನಸ್ಟ್ರಕ್ಷನ್ ನ ಮಾಲಕರಾದ ಅಜಯ್ ದೀಕ್ಷಿತ್ ಶೆಟ್ಟಿ, ಸಿ.ಎ ಕರುಣಾಕರ ಶೆಟ್ಟಿ ಪೊಸಲಾಯಿ ಮನೆ, ನೆಲ್ಲಿಕಾರು ವ್ಯವಸಾಯ ಸೇವಾ ಸಹಕಾರಿ ಸಂಘದ ನಿರ್ದೇಶಕ ರುಕ್ಕಯ್ಯ ಪೂಜಾರಿ, ಮೂಡುಬಿದಿರೆ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಅರುಣ್ ಕುಮಾರ್ ಶೆಟ್ಟಿ, ಅರ್ಜುನಾಪುರ ಮಹಿಳಾ ಸಮಿತಿ ಅಧ್ಯಕ್ಷ ಸವಿತಾ ವಿಶ್ವನಾಥ ಉಪಸ್ಥಿತರಿದ್ದರು.
ಉಪನ್ಯಾಸಕ ಸುದೀಪ್ ಬುನ್ನನ್ ಕಾರ್ಯಕ್ರಮ ನಿರೂಪಿಸಿದರು.
ನಂತರ ಶ್ರೀ ಕ್ಷೇತ್ರದಲ್ಲಿ ತುಲಾ ಸಂಕ್ರಮಣ ಹಾಗೂ ರಾತ್ರಿ ಶ್ರೀ ದುರ್ಗಾ ನಮಸ್ಕಾರ ಪೂಜೆ ನೆರವೇರಿಸಲಾಯಿತು.
