ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಕಾರ್ಕಳ ಹಾಗೂ ಮುದ್ರಾಡಿ ಎಂ.ಎನ್.ಡಿ.ಎಸ್.ಎಂ. ಅನುದಾನಿತ ಪ್ರೌಢಶಾಲೆಯ ಆಶ್ರಯದಲ್ಲಿ ನಡೆದ 17ರ ವಯೋಮಾನದ ಬಾಲಕರ ಕ್ರೀಡಾಕೂಟದಲ್ಲಿ ಶಿರ್ಲಾಲಿನ ಪ್ರಣಾಮ್ ನಾಯ್ಕ್ 100 ಮೀ., 200ಮೀ, ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿ ವೈಯಕ್ತಿಕ ಚಾಂಪಿಯನ್ ಆಗಿ ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

ಇವರು ನಿಟ್ಟೆಯಲ್ಲಿ 10ನೇ ತರಗತಿ ವ್ಯಾಸಾಂಗ ಮಾಡುತ್ತಿದ್ದು, ದೈಹಿಕ ಶಿಕ್ಷಕಿ ಉಷಾ, ತರಬೇತುದಾರರಾದ ನಿಟ್ಟೆ ಗಣೇಶ್ ಪೂಜಾರಿ ಇವರಿಂದ ತರಬೇತಿ ಪಡೆಯುತ್ತಿದ್ದಾರೆ.

ಇವರು ಶಿರ್ಲಾಲಿನ ಪ್ರತಿಮಾ- ರಘುರಾಮ್ ನಾಯ್ಕ್‌ರ ಪುತ್ರನಾಗಿದ್ದು, ಈ ಹಿಂದೆಯೂ ಕ್ರೀಡಾಕೂಟದಲ್ಲಿ ಅನೇಕ ಪ್ರಶಸ್ತಿಗಳನ್ನು ಪಡೆದುಕೊಂಡಿರುತ್ತಾರೆ.
