ಹಿರಿಯ ಕಾಂಗ್ರೆಸ್ ಮುಖಂಡ ಹಾಗೂ ಪ್ರಾಥಮಿಕ ಕೃಷಿ ಮತ್ತು ಭೂ ಅಭಿವೃದ್ಧಿ ಬ್ಯಾಂಕ್ ನ ಮಾಜಿ ಉಪಾಧ್ಯಕ್ಷರಾದ ಭೋಜ ಪೂಜಾರಿ ಶುಕ್ರವಾರ ಸಾಯಂಕಾಲ ಸಾಯಂಕಾಲ ನಿಧನರಾಗಿದ್ದಾರೆ.
ನಿಧನ ಕಾಲಕ್ಕೆ ಅವರಿಗೆ 72 ವರ್ಷ ವಯಸ್ಸು ಆಗಿತ್ತು.
ಅಜೆಕಾರು ವ್ಯವಸಾಯ ಸೇವಾ ಸಹಕಾರ ಸಂಘದ ಮಾಜಿ ಸದಸ್ಯರು, ಭೂ ನ್ಯಾಯ ಮಂಡಳಿಯ ಮಾಜಿ ಸದಸ್ಯರು, ಕಡ್ತಲ ಗ್ರಾಮ ಪಂಚಾಯತ್ ನ ಮಾಜಿ ಸದಸ್ಯರು, ಕುಕ್ಕುಜೆ ಸರಕಾರಿ ಪ್ರೌಢಶಾಲೆಯ ಅಭಿವೃದ್ಧಿ ಸಮಿತಿಯ ಮಾಜಿ ಸದಸ್ಯರರಾಗಿ ಕೂಡಾ ಸೇವೆ ಸಲ್ಲಿಸಿದ್ದರು.
ಮಾಜಿ ಮುಖ್ಯಮಂತ್ರಿ ಡಾ. ಎಂ ವೀರಪ್ಪ ಮೊಯ್ಲಿ ಹಾಗೂ ದಿ. ಗೋಪಾಲ ಭಂಡಾರಿಯವರ ಜೊತೆಗೆ ರಾಜಕೀಯ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದ ಇವರು ಪತ್ನಿ, ಮಕ್ಜಳನ್ನು ಅಗಲಿದ್ದಾರೆ.
ಕುಕ್ಕುಜೆಯಲ್ಲಿ ಸರಕಾರಿ ಪ್ರೌಢ ಶಾಲೆ ಆಗುವಲ್ಲಿ ಇವರ ಪ್ರಯತ್ನ ಮಹತ್ತರವಾಗಿತ್ತು.
ಇವರ ಅಂತ್ಯಕ್ರಿಯೆಯು ಶನಿವಾರ ಬೆಳಿಗ್ಗೆ 10.00 ಗಂಟೆಗೆ ಸ್ವಗೃಹ ಇಸಾರ್ ಮಾರ್ ಕುಕ್ಕುಜೆಯಲ್ಲಿ ನಡೆಸುವುದೆಂದು ಕುಟುಂಬಸ್ಥರು ತಿಳಿಸಿರುತ್ತಾರೆ.
