ಹಿಂದುಳಿದ ವರ್ಗದ ಜನ ಆರ್ಥಿಕತೆಯಲ್ಲಿ ಮುಂದೆ ಬರುವಂತಹ ಕಾರ್ಯಗಳು ಆಗುವ ಜೊತೆಗೆ ಕುಲಾಲ ಸಮಾಜದ ಅಭಿವೃದ್ಧಿಗಾಗಿ ನಿರಂತರ ಸಹಕಾರ ನೀಡುವುದಾಗಿ ರಾಜ್ಯ ಕುಂಭ ನಿಗಮದ ಅಧ್ಯಕ್ಷರಾದ ಡಾ ಶ್ರೀನಿವಾಸ್ ವೇಲು ಹಾಗೂ ನಾರಾಯಣ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಮಂಜುನಾಥ್ ಪೂಜಾರಿ ಹೇಳಿದ್ದಾರೆ
ಕುಲಾಲ ಸುಧಾರಕ ಸಂಘ, ಕಾರ್ಕಳ ಇದರ ಕ್ರೀಡಾ ಕೂಟವು ಕಾರ್ಕಳದ ಸ್ವರಾಜ್ಯ ಮೈದಾನದಲ್ಲಿ ನಡೆಯಿತು.
ಈ ಕಾರ್ಯಕ್ರಮ ಉದ್ಘಾಟನೆ ಮಾಡಿದ ಡಾ. ಶ್ರೀನಿವಾಸ ವೇಲು ಮಾತನಾಡಿ ಕಾರ್ಕಳದಲ್ಲಿ ಕುಲಾಲ ಸಮಾಜ ಅದ್ಭುತವಾಗಿ ಸಂಘಟನೆ ಮಾಡಿದೆ ಎಂದರು.
ನಾರಾಯಣ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಂಜುನಾಥ್ ಪೂಜಾರಿ ಭಾಗವಹಿಸಿ ಹಿಂದುಳಿದ ವರ್ಗದ ಅಭಿವೃದ್ಧಿಗಾಗಿ ಸಮಾಜದ ಎಲ್ಲರೂ ಒಗ್ಗೂಡಬೇಕಿದೆ ಎಂದು ಹೇಳಿದರು.
ವೇದಿಕೆಯಲ್ಲಿ ಕರ್ನಾಟಕ ಕುಂಭ ನಿಗಮದ ಅಧ್ಯಕ್ಷರಾದ ಡಾ. ಶ್ರೀನಿವಾಸ್ ವೇಲು, ಕುಲಾಲ ಸಂಘದ ಅಧ್ಯಕ್ಷರಾದ ಹರೀಶ್ಚಂದ್ರ ಕುಲಾಲ್, ಮಾಜಿ ಅಧ್ಯಕ್ಷರಾದ ಭೋಜ ಕುಲಾಲ್, ಹೂವಿನ ವ್ಯಾಪಾರಿ ಭಾಸ್ಕರ್ ಕುಲಾಲ್, ಕಾವ್ಯ ಆರ್ ಕುಲಾಲ್, ರಕ್ಷಿತ್ ಕುಲಾಲ್, ರಾಷ್ಟೀಯ ಕಬಡ್ಡಿ ಪಟು ಸುಕೇಶ್ ಕುಲಾಲ್ ಮಾಳ, ಮಾಜಿ ಸೈನಿಕ ಜಯ ಮೂಲ್ಯ ಮುಂಬೈ ಕುಲಾಲ ಸಂಘದ ಅಧ್ಯಕ್ಷ ರಾಘು ಮೂಲ್ಯ, ಉದ್ಯಮಿ ಸುನಿಲ್ ಸಾಲ್ಯಾನ್ ಮುಂಬೈ, ಮುಂಬೈ ಜ್ಯೋತಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಗಿರೀಶ್ ಕುಲಾಲ್, ಡಿ. ಐ ಮೂಲ್ಯ ಮುಂಬೈ, ದೇವಕಿ ಸುನಿಲ್ ಮುಂಬೈ, ವಲಯ ಅರಣ್ಯ ಅಧಿಕಾರಿ ಪ್ರಭಾಕರ್, ನಿವೃತ್ತ ಯೋಧ ಜಯ ಮೂಲ್ಯ, ಉಪಾಧ್ಯಕ್ಷರಾದ ಧವಳ ಕೀರ್ತಿ, ಮಹಿಳಾ ಘಟಕದ ಅಧ್ಯಕ್ಷರಾದ ವಿನಯ ದೇವಪ್ಪ ಕುಲಾಲ್ ಉಪಸ್ಥಿತರಿದ್ದರು
ದಿವಾಕರ ಬಂಗೇರ ಸ್ವಾಗತಿಸಿದರು.
ಹೃದಯ ಕುಲಾಲ್ ಹಾಗೂ ದೀಕ್ಷಾ ಕುಲಾಲ್ ಕಾರ್ಯಕ್ರಮ ನಿರೂಪಣೆ ಮಾಡಿದರು.
ಸಮಾರೋಪ ಸಮಾರಂಭದಲ್ಲಿ ವೈದ್ಯರಾದ ಡಾ. ಅಣ್ಣಯ್ಯ ಕುಲಾಲ್ ಭಾಗವಹಿಸಿ ಶುಭ ಹಾರೈಕೆ ಮಾಡಿದರು.
