ಕಾರ್ಕಳಹೆಬ್ರಿ

ಪ್ರಗತಿಪರ ಕೃಷಿಕ, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿ ದಯಾನಂದ ನಾಯಕ್ ನಿಧನ

ಕಾರ್ಕಳ: ಶಿರ್ಲಾಲು ಪಂಡಿತಬೆಟ್ಟುವಿನ ದಯಾನಂದ ನಾಯಕ್ (57) ಅವರು ಅನಾರೋಗ್ಯದಿಂದ ಭಾನುವಾರ ನಿಧನರಾದರು.

ಶಿರ್ಲಾಲು ಗಣೇಶೋತ್ಸವ ಸಮಿತಿಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದ ಅವರು, ಪಡಿಬೆಟ್ಟು ಶಾಲೆಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ (ಎಸ್‌ಡಿಎಂಸಿ) ಅಧ್ಯಕ್ಷರಾಗಿ ಹತ್ತು ವರ್ಷ ಕಾರ್ಯನಿರ್ವಹಿಸಿದ್ದರು. ಶಿರ್ಲಾಲು ಹಾಲು ಉತ್ಪಾದಕರ ಸಂಘದ ಅಧ್ಯಕ್ಷರಾಗಿ ಹಾಗೂ ನಿಡ್ಡೆಪಾದೆ ಗರಡಿಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು.

ರಾಜಕೀಯ ಕ್ಷೇತ್ರದಲ್ಲಿಯೂ ಸಕ್ರಿಯರಾಗಿದ್ದ ಅವರು, ವಿವಿಧ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು. ಪ್ರಗತಿಪರ ಕೃಷಿಕರಾಗಿಯೂ ಗುರುತಿಸಿಕೊಂಡಿದ್ದರು.

ಅವರು ತಂದೆ-ತಾಯಿ, ಪತ್ನಿ, ಮಗ, ಮಗಳು ಹಾಗೂ ಬಂಧು-ಬಳಗದವರನ್ನು ಅಗಲಿದ್ದಾರೆ.

Related posts

ರೆಂಜಾಳ ಭೂಕುಸಿತ ಸ್ಥಳದಲ್ಲಿ ಜಿಎಸ್‌ಐ ಬೆಂಗಳೂರು ತಂಡ ಪರಿಶೀಲನೆ

Madhyama Bimba

ಕಸ್ತೂರಿ ರಂಗನ್ ವರದಿ : ಜನರಲ್ಲಿ ಗೊಂದಲ ಸೃಷ್ಠಿಸುತ್ತಿರುವ ಕೇಂದ್ರ ಸರ್ಕಾರ – ಜನರ ಮನದಲ್ಲಿ ಆತಂಕ : ಸಂಸದರ ಮೌನ ! – ಮುದ್ರಾಡಿ ಮಂಜುನಾಥ ಪೂಜಾರಿ ಆಕ್ರೋಶ !

Madhyama Bimba

ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಅವಹೇಳನಕಾರಿ ಪೋಸ್ಟ್ – ಆರೋಪಿಯನ್ನು ಸಮರ್ಥಿಸುತ್ತಿರುವ ಬಿಜೆಪಿ ವಿರುದ್ಧ ದಲಿತ ಸಂಘಟನೆಗಳ ಆಕ್ರೋಶ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More