ಕಾರ್ಕಳ

ನಂದಳಿಕೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನವೆಂಬರ್ 1ರಂದು ಶಿಲಾ ಮುಹೂರ್ತ, ದಾರು ಮುಹೂರ್ತ ಹಾಗೂ ಸಂಸ್ಥಾನ ಪೂಜೆ

ಕಾರ್ಕಳ : ಸಕಲ ಸಿರಿ ಕ್ಷೇತ್ರಗಳ ತವರೂರು ಎಂಬ ಪ್ರಸಿದ್ದಿಯನ್ನು ಪಡೆದ ನಾಲ್ಕು ಸ್ಥಾನ ನಂದಳಿಕೆ ಶ್ರೀ ಮಹಾಲಿಂಗೇಶ್ವರ ದೇವಾಲಯದ ಜೀರ್ಣೋದ್ಧಾರ ಅಂಗವಾಗಿ ನ. 01 ರ ಭಾನುವಾರ ಕ್ಷೇತ್ರದಲ್ಲಿ ಶಿಲಾ ಮುಹೂರ್ತ, ದಾರು ಮುಹೂರ್ತ ಹಾಗೂ ಶ್ರೀ ಸೋದೆ ವಾದಿರಾಜ ಮಠದ ಸಂಸ್ಥಾನ ಪೂಜೆ ಮತ್ತು ಧಾರ್ಮಿಕ ಸಭಾ ಕಾರ್ಯಕ್ರಮಗಳು ವಿಜೃಂಭಣೆಯಿಂದ ನೆರವೇರಲಿವೆ.

ಬೆಳಿಗ್ಗೆ 7.30ಕ್ಕೆ: 48 ತೆಂಗಿನಕಾಯಿ ಗಣಯಾಗ, ಬೆಳಿಗ್ಗೆ 10.10ಕ್ಕೆ: ಶ್ರೀ ಸೋದೆ ವಾದಿರಾಜ ಮಠದ ಯತಿವರ್ಯರಿಂದ ಸಂಸ್ಥಾನ ಪೂಜೆ, 11.10ಕ್ಕೆ: ಸುಮುಹೂರ್ತದಲ್ಲಿ ಶಿಲಾ ಮುಹೂರ್ತ ಮತ್ತು ದಾರು ಮುಹೂರ್ತ ನೆರವೇರಲಿದೆ.

11.15ಕ್ಕೆ ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ಶ್ರೀ ಶ್ರೀ ಶ್ರೀ ಸೋದೆ ವಾದಿರಾಜ ಮಠದ ವಿಶ್ವವಲ್ಲಭ ತೀರ್ಥ ಶ್ರೀಪಾದಂಗಳವರು ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಲಿದ್ದಾರೆ.

ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಶ್ರೀ ಕೃಷ್ಣಧಾಮ, ಕೃಷ್ಣ ಪ್ಯಾಲೇಸ್ ಮುಂಬೈನ ಉದ್ಯಮಿ ಕೃಷ್ಣ ವೈ. ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ, ನಂದಳಿಕೆ ಚಾವಡಿ ಅರಮನೆ ಪ್ರದೀಪ್ ಹೆಗ್ಡೆ ಕಾರ್ಯಾಧ್ಯಕ್ಷ ಶ್ರೀಕಾಂತ್ ರಾವ್, ದೇವಳದ ತಂತ್ರಿವರ್ಯರಾದ ಶ್ರೀನಿವಾಸ ತಂತ್ರಿ ಪಾಡಿಗಾರು, ವಾಸ್ತು ತಜ್ಞರಾದ ಸುಬ್ರಹ್ಮಣ್ಯ ಭಟ್ ಗುಂಡಿಬೈಲು, ಬೆಳ್ಮಣ್ ದೇವಾಲಯ ಆಡಳಿತ ಮೊಕ್ತೇಸರ ವಿಘ್ನೇಶ್ ಭಟ್ ಬೆಳ್ಮಣ್, ನಂದಳಿಕೆ ಕ್ಷೇತ್ರದ ಪ್ರಧಾನ ಅರ್ಚಕ ಹರೀಶ್ ತಂತ್ರಿ, ಸಂಸದ ಕೋಟಾ ಶ್ರೀನಿವಾಸ್ ಪೂಜಾರಿ, ಕಾರ್ಕಳ ಶಾಸಕ ವಿ. ಸುನೀಲ್ ಕುಮಾರ್, ಕಾಪು ಕ್ಷೇತ್ರದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಉದಯ್ ಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಟ್ರಸ್ಟ್, ಮುನಿಯಾಲು ಉದಯ್ ಕುಮಾರ್ ಶೆಟ್ಟಿ, ನಂದಳಿಕೆ ಚಾವಡಿ ಅರಮನೆ ಸುಹಾಸ್ ಹೆಗ್ಡೆ, ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದಾರೆ ಎಂದು ಜೀರ್ಣೋದ್ದಾರ ಸಮಿತಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

Related posts

ರೋಟರಿ ಕ್ಲಬ್ ಕಾರ್ಕಳ : ನೋಟ್ ಪುಸ್ತಕ ವಿತರಣೆ

Madhyama Bimba

ಮೂಡಾ ಸೈಟು ಹಿಂದಿರಿಗಿಸಿರುವುದು ಭಯದ ಶರಣಾಗತಿಯಲ್ಲ: ಬಿಪಿನಚಂದ್ರ ಪಾಲ್ ನಕ್ರೆ

Madhyama Bimba

ಅಕ್ಟೋಬರ್ 05 ರಂದು ಕಾರ್ಕಳದಲ್ಲಿ ರಾಜ್ಯ ಸರ್ಕಾರದ ವಿರುದ್ದ ಬೃಹತ್ ಪ್ರತಿಭಟನೆ: ನವೀನ್ ನಾಯಕ್

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More