ಯೆನೆಪೋಯ (ಡೀಮ್ಡ್ ಟು ಬಿ) ಯುನಿರ್ವಸಿಟಿಯ ಯೆನೆಪೋಯ ದಂತ ವೈದ್ಯಕೀಯ ಕಾಲೇಜಿನ ಓರಲ್ ಪೆಥಲಾಜಿ ವಿಭಾಗದ ದಂತ ವೈದ್ಯೆ ಡಾ. ಸೋನಿಯಾ ಅಡ್ಯಂತಾಯ ಮಂಡಿಸಿದ ‘ಇವಾಲ್ಯೂಯೇಶನ್ ಆಫ್ ಕ್ಲಿನಿಕೋ ಪೆಥಲೋಜಿಕಲ್ ಫೀಚರ್‍ಸ್, ಫೈಬ್ರೋಬ್ಲಾಸ್ಟಿಕ್ ಆಕ್ಟಿವಿಟಿ, ಮಾರ್ಫಾಲೋಜಿ ಆಫ್ ಕೊಲಾಜಿನ್ ಫೈಬರ್‍ಸ್ ಆಂಡ್ ಡಿಲೀನಿಯೇಟಿಂಗ್ ದ ರೋಲ್ ಆಫ್ ಆರೆಕನಟ್ ಇನ್ ಓರಲ್ ಸಬ್ ಮ್ಯೂಕಸ್ ಫೈಬ್ರೋಸಿಸ್’ ಎಂಬ ಮಹಾಪ್ರಬಂಧಕ್ಕೆ ಯೆನೆಪೋಯ (ಡೀಮ್ಡ್ ಟು ಬಿ) ಯುನಿರ್ವಸಿಟಿಯು ಅ. 24ರಂದು ಪಿಹೆಚ್‌ಡಿ ಪದವಿಯನ್ನು ನೀಡಿದೆ.
ಈ ಸಂಶೋಧನೆಯನ್ನು ಡಾ. ರಿಯಾಝ್ ಅಬ್ದುಲ್ಲಾ ಅವರ ಮಾರ್ಗದರ್ಶನದಲ್ಲಿ ಕೈಗೊಳ್ಳಲಾಗಿದೆ.
ಇವರು ಡಾ. ಅಮಿತ್ ಅಡ್ಯಂತಾಯ ಮಂಗಳೂರು ಇವರ ಧರ್ಮಪತ್ನಿಯಾಗಿದ್ದು, ಕಾರ್ಕಳ ಭೀಮಗುತ್ತು ದಿ| ಅರವಿಂದ ಶೆಟ್ಟಿ ಮತ್ತು ನಿಂಜೂರು ಮಾಳಿಗಮನೆ ಶ್ರೀಮತಿ ಪ್ರಮೋದಾ ಅರವಿಂದ ಶೆಟ್ಟಿಯವರ ಪುತ್ರಿ.
