ಕಾರ್ಕಳಹೆಬ್ರಿ

ಶತಾಯುಷಿ ಕೃಷಿಕ  ವಿಠಲ ಶೆಟ್ಟಿ ನಿಧನ

 

ಕಾರ್ಕಳ: ಕಾರ್ಕಳ ತಾಲೂಕಿನ ಮೂರೂರು ಗ್ರಾಮದ ನೆಲ್ಲಿಕಟ್ಟೆ ಪರಿಸರದ ಶ್ರೀದೇವಿ ನಿಲಯ ನಿವಾಸಿ,  ಹಿರಿಯ ಕೃಷಿಕರಾದ   ವಿಠಲ ಶೆಟ್ಟಿ (101 ವರ್ಷ) ಅವರು ಅ. 30  ರಂದು ನಿಧನರಾದರು.

ಅಪ್ಪಟ ಕೃಷಿಕರಾಗಿದ್ದ ಇವರು ಕೃಷಿಯನ್ನೇ ತಮ್ಮ ಬದುಕಿನ ಅವಿಭಾಜ್ಯ ಅಂಗವನ್ನಾಗಿಸಿಕೊಂಡಿದ್ದರು. ವಯಸ್ಸಿನ ಇಳಿ ವಯಸ್ಸಿನಲ್ಲಿಯೂ ಕೃಷಿ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಇವರು, ತಮ್ಮ ಜೀವನದ ಕೊನೆಯ ದಿನಗಳವರೆಗೂ ಕೃಷಿ ಕಾಯಕದಲ್ಲಿ ನಿರತರಾಗಿದ್ದರು.

ಶಿಸ್ತು, ಸರಳತೆ, ಪರಿಶ್ರಮ ಹಾಗೂ ಸ್ವಾವಲಂಬನೆಯ ಜೀವನಶೈಲಿಯನ್ನು ಅಳವಡಿಸಿಕೊಂಡಿದ್ದ ಇವರು ಎಲ್ಲರಿಗೂ ಮಾದರಿಯಾಗಿದ್ದರು. 101 ವರ್ಷಗಳ ಸಾರ್ಥಕ ಜೀವನ ನಡೆಸಿದ ಇವರು, ಕೃಷಿಯ ಮೇಲಿನ ಅಪಾರ ಪ್ರೀತಿ ಹಾಗೂ ಕಾಯಕನಿಷ್ಠೆಯಿಂದ ಪರಿಸರದಲ್ಲಿ ವಿಶೇಷ ಗೌರವಕ್ಕೆ ಪಾತ್ರರಾಗಿದ್ದರು.

ಮೃತರು ಪತ್ನಿ, ಮಕ್ಕಳು, ಮೊಮ್ಮಕ್ಕಳು ಹಾಗೂ ಮರಿ ಮಕ್ಕಳನ್ನು ಅಗಲಿದ್ದಾರೆ.

Related posts

ಕಾಮೆಡ್-ಕೆ ಫಲಿತಾಂಶ: ಜ್ಞಾನಸುಧಾಕ್ಕೆ ಸಾವಿರದೊಳಗಿನ 9 ರ್‍ಯಾಂಕುಗಳು- ರಾಷ್ಟ್ರಮಟ್ಟದಲ್ಲಿ ಕನಿಷ್ಕ್‌ಗೆ 34ನೇ ರ್‍ಯಾಂಕ್

Madhyama Bimba

ಕರಾವಳಿ ರಂಗಾಯಣವೇ ಸರಿಯಾದ ಮತ್ತು ಸೂಕ್ತ ಹೆಸರು. ಬಿವಿಕಾರಂತರ ಅಪೇಕ್ಷೇಯು ಅದೇ ಆಗಿತ್ತು – ಶುಭದರಾವ್ ಕಾರ್ಕಳ

Madhyama Bimba

​ಶ್ರೀ ಅಂಬಾಭವಾನಿ ಗಾಲಿಮಾರಿ ದೇವಸ್ಥಾನದ ಭಕ್ತರ ಪ್ರತಿಭಟನೆ: ಸ್ಥಳ ಪರಿಶೀಲನೆ ನಡೆಸಿದ ತಹಶೀಲ್ದಾರ್ ಮತ್ತು ಮುಖ್ಯಾಧಿಕಾರಿ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More