ಮೂಡುಬಿದಿರೆ

ಪತ್ರಕರ್ತರಿಗೆ ಅಂಚೆ ವಿಮೆ

ಮೂಡುಬಿದಿರೆ: ಭಾರತೀಯ ಅಂಚೆ ಇಲಾಖೆ ಪುತ್ತೂರು ವಿಭಾಗ, ದ.ಕ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದೊಂದಿಗೆ ಮೂಡುಬಿದಿರೆ ಕಾರ್ಯನಿರತ ಪತ್ರಕರ್ತರಿಗೆ ಸಮಗ್ರ ಅಪಘಾತ ಸುರಕ್ಷಾ ವಿಮೆ ನೋಂದಣಿ ಕಾರ್ಯಕ್ರಮ ಮೂಡುಬಿದಿರೆ ಪ್ರೆಸ್‍ಕ್ಲಬ್‍ನಲ್ಲಿ ನಡೆಯಿತು.

ದ.ಕ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪುಷ್ಪರಾಜ್ ಬಿ.ಎನ್ ಮಾತನಾಡಿ ಜಿಲ್ಲಾ ಸಂಘದ ವತಿಯಿಂದ ಜಿಲ್ಲಾ ವ್ಯಾಪ್ತಿಯ ಎಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರಿಗೆ ಹಲವು ವರ್ಷಗಳಿಂದ ಅಪಘಾತ ವಿಮೆ ಪಾಲಿಸಿಯನ್ನು ನೋಂದಾಯಸಿಕೊಂಡು ಬರಲಾಗುತ್ತಿದೆ. ಇದರ ಪ್ರೀಮಿಯಂ ಹಣವನ್ನು ಜಿಲ್ಲಾ ಸಂಘದ ಕ್ಷೇಮ ನಿಧಿಯಿಂದ ಭರಿಸಲಾಗುತ್ತದೆ ಎಂದರು.

ಅಂಚೆ ಇಲಾಖೆಯ ಮಾರುಕಟ್ಟೆ ಅಧಿಕಾರಿ ಗುರುಪ್ರಸಾದ್ ಮಾತನಾಡಿ ಸುದ್ದಿ ಸಂಗ್ರಹಕ್ಕಾಗಿ ಸದಾ ಒತ್ತಡದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪತ್ರಕರ್ತರಿಗೆ ಅಂಚೆ ಇಲಾಖೆಯ ಅಪಘಾತ ಸುರಕ್ಷಾ ವಿಮೆ ಹೆಚ್ಚು ಪ್ರಯೋಜನ ನೀಡಲಿದೆ. ಕನಿಷ್ಟ ಪ್ರೀಮಿಯಂನಲ್ಲಿ ಗರಿಷ್ಟ ಮೊತ್ತದ ವಿಮಾ ಸೌಲಭ್ಯದ ಈ ಪಾಲಿಸಿ ಸಮಾಜದ ಎಲ್ಲಾ ವರ್ಗದವರು ನೋಂದಾಯಿಸಿಕೊಳ್ಳಬಹುದು ಎಂದರು.

ಇದೇ ವೇಳೆ ಅವರು ಸದಸ್ಯರಿಗೆ ಇಂಡಿಯನ್ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಕಾರ್ಡ್ ವಿತರಿಸಿದರು.

ಸಂಘದ ರಾಜ್ಯಕಾರ್ಯಕಾರಿ ಸಮಿತಿ ಸದಸ್ಯ ಶ್ರೀನಿವಾಸ ನಾಯಕ್ ಇಂದಾಜೆ, ಮೂಡುಬಿದಿರೆ ಪ್ರೆಸ್‍ಕ್ಲಬ್ ಅಧ್ಯಕ್ಷ ಸೀತಾರಾಮ ಆಚಾರ್ಯ, ಅಂಚೆ ಸಿಬ್ಬಂದಿ ಅರವಿಂದ್ ಉಪಸ್ಥಿತರಿದ್ದರು. ಮೂಡುಬಿದಿರೆ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ನವೀನ್ ಸಾಲ್ಯಾನ್ ಸ್ವಾಗತಿಸಿದರು. ಪ್ರೆಸ್‍ಕ್ಲಬ್ ಕಾರ್ಯದರ್ಶಿ ಪ್ರೇಮಶ್ರೀ ವಂದಿಸಿದರು.

Related posts

ಯುವರಾಜ ಜೈನ ಅವರಿಗೆ ಸಿರಿಪುರ ಪ್ರಶಸ್ತಿ

Madhyama Bimba

ಪಣಪಿಲದಲ್ಲಿ ಆಧಾರ್, ರಕ್ಷಣೆ ಯೋಜನೆ

Madhyama Bimba

ದಕ್ಷಿಣ ಕನ್ನಡ ಜಿಲ್ಲಾಮಟ್ಟದ ಪದವಿಪೂರ್ವ ಕಾಲೇಜುಗಳ ಗುಡ್ಡಗಾಡು ಓಟ- ಎರಡೂ ವಿಭಾಗದಲ್ಲೂ ಮೂಡುಬಿದಿರೆ ಆಳ್ವಾಸ್ ಪದವಿ ಪೂರ್ವ ಕಾಲೇಜು ಚಾಂಪಿಯನ್

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More