ಬೈಲೂರು: ಬೈಲೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಬಾಳೆಹಿತ್ಲು ನಿವಾಸಿ ಗಣೇಶ್ ಪೂಜಾರಿ (54ವ) ಅಕ್ಟೋಬರ್ 31 ರಂದು ಬೆಳಗ್ಗಿನ ಜಾವ ಸುಮಾರು 4:30 ಗಂಟೆಗೆ ಮನೆಯಿಂದ ಕಾಣೆಯಾಗಿದ್ದು (ಇಂದು) ನ.1 ರಂದು ಮನೆಯ ಸಮೀಪದ ಮುರತ ಗುಂಡಿಯಲ್ಲಿ (ನೀರಿನ ಹಳ್ಳ)ಶವವಾಗಿ ಪತ್ತೆಯಾಗಿದ್ದಾರೆ.
ಪ್ರಕರಣ ಕಾರ್ಕಳ ನಗರ ಠಾಣೆಯಲ್ಲಿ ದಾಖಲಾಗಿದ್ದು ಸಾವಿಗೆ ಕಾರಣ ಏನೆಂಬುದು ಇನ್ನಷ್ಟೆ ತಿಳಿಯಬೇಕಾಗಿದೆ.
ಮೃತರು ಪತ್ನಿ ಓರ್ವ ಪುತ್ರ ಹಾಗೂ ತಾಯಿ ಸಹೋದರರನ್ನು ಅಗಲಿದ್ದಾರೆ
