Blog

ಭುವನೇಂದ್ರ ಕಾಲೇಜಿನಲ್ಲಿ ಕಾರ್ಯಕ್ರಮ

*ಮಾನವ ಹಕ್ಕು ಅರಿವು ಪ್ರತಿಯೊಬ್ಬರ ಕರ್ತವ್ಯ : ಎಂ. ಶ್ವೇತಾ ವಿಪುಲ್ ತೇಜ್*

 

ಕಾರ್ಕಳ: ಮಾನವ ಹಕ್ಕುಗಳ ಪ್ರತಿಯೊಬ್ಬ ಮನುಷ್ಯನ ರಕ್ಷಣೆಗಾಗಿ ಇರುವಂಥವು.

ಅವುಗಳ ಬಗ್ಗೆ ತಿಳಿದು ಕೊಳ್ಳುವುದು, ಪಾಲಿಸುವುದು ಹಾಗೂ ಉಲ್ಲಂಘನೆಯಾಗದಂತೆ ನೋಡಿಕೊಳ್ಳುವುದು ಎಲ್ಲರ ಕರ್ತವ್ಯ ಎಂದು ಮುಖ್ಯ ಅತಿಥಿಗಳಾಗಿ ಆಗಮಿಸಿದ ಕಾರ್ಕಳದ ವಕೀಲೆ ಶ್ವೇತಾ ವಿಪುಲ್ ತೇಜ್ ಹೇಳಿದರು.

 

ಶ್ರೀ ಭುವನೇಂದ್ರ ಕಾಲೇಜಿನ

ಐಕ್ಯೂಎಸಿ ಆಶ್ರಯದಲ್ಲಿ ದಿನಾಂಕ 30.10.2026ನೇ

ಶನಿವಾರದಂದು ನಡೆದ ಮಾನವ ಹಕ್ಕುಗಳ ಮತ್ತು ಧಾರ್ಮಿಕ ಸಾಮರಸ್ಯ ಘಟಕದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು

ತಂತ್ರಜ್ಞಾನ ಮಾನವ ಹಕ್ಕುಗಳನ್ನು ಚಾಲಯಿಸಲು ಮಾಧ್ಯಮವಾಗಿ ಕೆಲಸ ಮಾಡುತ್ತಿದೆ.

ಆದರೆ ವೈಯಕ್ತಿಕ ಘನತೆಗೆ ದಕ್ಕೆ ಬರದಂತೆ ಜವಾಬ್ಧಾರಿಯುತವಾಗಿ ಹಕ್ಕುಗಳನ್ನು ಬಳಸಿಕೊಳ್ಳಬೇಕು ಸ್ವತಂತ್ರ ಗೌರವಯುತವಾಗಿ ಬದುಕಲು ಮಾನವ ಹಕ್ಕುಗಳು ರಕ್ಷಣೆ ಒದಗಿಸುತ್ತದೆ ಎಂದರು.

ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಚಾರ್ಯ

ಡಾ| ಮಂಜುನಾಥ ಎ. ಕೋಟ್ಯಾನ್ ಮಾತನಾಡಿ ಮತ್ತೊಬ್ಬರ ಭಾವನೆ ಅರ್ಥ ಮಾಡಿಕೊಳ್ಳದೆ ಹಕ್ಕುಗಳನ್ನು ಚಲಾಯಿಸುವುದು ಸರಿಯಲ್ಲ .

ಅನ್ಯಾಯದ ವಿರುದ್ಧ ಸದಾ ಧ್ವನಿಯೆತ್ತಬೇಕು ಎಲ್ಲ ಧರ್ಮಗಳು ಜ್ಞಾನ ಮತ್ತು ಮಾನವತಾವಾದಕ್ಕೆ ಮಹತ್ವ ನೀಡಿವೆ. ಜ್ಞಾನಪರ ಚಿಂತನೆಗಳಿರುವಲ್ಲಿ ಅಪರಾಧಗಳು ನಡೆಯುವುದಿಲ್ಲ ಎಂದರು.

ಕಾಲೇಜಿನ ಮುಖ್ಯ ಕಾರ್ಯನಿರ್ವಣಾಧಿಕಾರಿ ನಂದಕಿಶೋರ್ ಮಾನವಿಕ ಸಂಘದ ಕಾರ್ಯದರ್ಶಿ ವಿದ್ಯಾರ್ಥಿಗಳಾದ ನಿಖಿಲ್, ರೇಣುಕಾ ಉಪಸ್ಥಿತರಿದ್ದರು

ಮಾನವಿಕ ಸಂಘದ ಸಂಯೋಜಿಕೆ ಸುಚಿತ್ರಾ ಪ್ರಸ್ತಾವಿಸಿದರು, ಅರಿನ್ ಮಿರಾಂಡ ನಿರೊಪಿಸಿ ಆಂಟಿನಿ ಚಿನ್ನಪ್ಪನ್ ವಂದಿಸಿದರು

Related posts

ಆಗಸ್ಟ್ 7 ರಂದು ‘ಆಳ್ವಾಸ್ ಪ್ರಗತಿ’ ಉದ್ಯೋಗ ಮೇಳಕ್ಕೆ ಚಾಲನೆ

Madhyama Bimba

ಮೂಡುಬಿದಿರೆ ಲಯನ್ಸ್ ಕ್ಲಬ್ ‘ಹರಿಭವ’ ಲೋಕಾಪ೯ಣೆ

Madhyama Bimba

ಪಶ್ಚಿಮ ಘಟ್ಟ ಸಮಸ್ಯೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More