Blog

ಕಾರ್ಕಳ ಕುಲಾಲ ಸಂಘದಲ್ಲಿ ಕಾರ್ಯಕ್ರಮ

ಕಾರ್ಕಳ ತಾಲೂಕು ಕುಲಾಲ ಸುಧಾರಕ‌ ಸಂಘ (ರಿ.) ಕಾರ್ಕಳ

     ಇದರ 31 ನೇ ವಾರ್ಷಿಕ ಮಹಾಸಭೆ ಗಣಹೋಮ, ಶ್ರೀ ಸತ್ಯನಾರಾಯಣ ಪೂಜೆ,ವಿದ್ಯಾರ್ಥಿ ಪ್ರೋತ್ಸಾಹಧನ ವಿತರಣೆ,ಸಾಧಕರಿಗೆ ಸನ್ಮಾನ,ಕ್ರೀಡಾಕೂಟದ ಬಹುಮಾನ ವಿತರಣೆ,ಸಾಂಸ್ಕೃತಿಕ ಕಾರ್ಯಕ್ರಮವು 01/11/2026 ನೇ ಆದಿತ್ಯವಾರ ಕುಲಾಲ ಸಭಾಭವನದಲ್ಲಿ ನಡೆಯಿತು.

 ಕಾರ್ಕಳ ತಾಲೂಕು ಕುಲಾಲ ಸಂಘದ ಅಧ್ಯಕ್ಷರಾದ

ಹರೀಶ್ಚಂದ್ರ ಕುಲಾಲ್ ಇವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು.

ಕಾರ್ಕಳ ಶಾಸಕರಾದ ವಿ ಸುನೀಲ್ ಕುಮಾರ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಕುಲಾಲ ಸಮುದಾಯ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಯಶಸ್ಸನ್ನು ಕಾಣುತ್ತಿದೆ ಎಂದರು.

ಕಾರ್ಕಳದಲ್ಲಿ ಸರ್ವಜ್ಞ ವೃತ್ತ ನಿರ್ಮಾಣ ವಿಚಾರ ಬಗ್ಗೆ ತಿಳಿಸಿದ ಅವರು ಕುಲಾಲ ಸಮಾಜದ ಅಭಿವೃದ್ಧಿಗೆ ಸದಾ ಸಹಕಾರ ನೀಡುವುದಾಗಿ ತಿಳಿಸಿದರು.

ಡಾ ಆನಂದ ಕುಲಾಲ್,ರೇಖಾ ಪ್ರಭಾಕರ್,ಕೃಷ್ಣ ಮೂಲ್ಯ ಕಾರ್ಕಳ,ಭೋಜ ಕುಲಾಲ್ ಬೇಳಂಜೆ,ಧವಳಕೀರ್ತಿ,ಯೋಗೀಶ್ ಕುಲಾಲ್ ಪೆರ್ಡೂರು,ಜಯರಾಮ ಬಂಗೇರ ಕೆರ್ವಾಶೆ,ಮಹೇಶ್ ಕುಲಾಲ್ ಅರ್ತಿಮೂಲೆ,ಮಹೇಶ್ ಕುಲಾಲ್ ಬೇಲಾಡಿ,ಎಚ್ ಡಿ ಕುಲಾಲ್ ಹಿರ್ಗಾನ, ಹೃದಯ ಕುಲಾಲ್, ವಿನಯ ಕುಲಾಲ್ ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರು, ಸಮಾಜ‌ ಬಂಧುಗಳ ಉಪಸ್ಥಿತಿಯಲ್ಲಿ ಮಹಾಸಭೆ ಜರಗಿತು.

ದಿವಾಕರ್ ಎಂ ಬಂಗೇರ ಸ್ವಾಗತಿಸಿದರು,ಮನಸ್ವೀ ಕುಲಾಲ್ ಪ್ರಾರ್ಥನೆ ಗೈದರು,ವರದಿ,ಕಾರ್ಯಕಾರಿ ಮಂಡಳಿ ಆಯ್ಕೆ,ವಾರ್ಷಿಕ ಲೆಕ್ಕಪತ್ರ ಮಂಡಿಸಲಾಯಿತು ವಸಂತ್ ಜಾರ್ಕಳ ಧನ್ಯವಾದ ತಿಳಿಸಿದರು.

95% ಕ್ಕಿಂತ ಅಧಿಕ‌ ಅಂಕಗಳಿಸಿದ 20 ವಿಧ್ಯಾರ್ಥಿಗಳನ್ನು‌ ಸನ್ಮಾನಿಸಲಾಯಿತು,ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ,ರಾಜೇಶ್ ಪಿ ಹೊಸ್ಮಾರು,ಸತೀಶ್ ಬಂಗೇರ ಕರಿಯಕಲ್ಲು ,ಶಂಕರ್ ಸಾಣೂರು,ಶೀನ ಮೂಲ್ಯ ,ವೈಭವ್ ವಿ.ಆರ್, ಮನಸ್ವಿ ಕುಲಾಲ್,ಹರಿಶ್ಚಂದ್ರ ವಿ ಕುಲಾಲ್, ಸಾಕ್ಷೀ ಕುಲಾಲ್, ರಕ್ಷಿತ್ . ಇವರೆಲ್ಲ ಸಾಧಕರಿಗೆ ಸನ್ಮಾನಿಸಲಾಯಿತು . ಶಾಶ್ವತ ವಿದ್ಯಾನಿಧಿಗೆ ದೇಣಿಗೆ ನೀಡಿದ ಐತು ಕುಲಾಲ್ ಬನಶಂಕರಿ ಗೌರವಿಸಲಾಯಿತು.

 ಎಚ್ ಡಿ ಕುಲಾಲ್ ರವರಿಗೆ “ಕುಲಾಲ ಮಾಣಿಕ್ಯ ” ಬಿರುದನ್ನು ಶಾಸಕರಾದ ವಿ. ಸುನೀಲ್ ಕುಮಾರ್ ರವರು ನೀಡಿ ಗೌರವಿಸಿದರು.85% ಕ್ಕಿಂತ ಅಧಿಕ ಅಂಕಗಳಿಸಿದ 95 ಮಕ್ಕಳಿಗೆ ವಿದ್ಯಾರ್ಥಿ ಪ್ರೋತ್ಸಾಹಧನ ನೀಡಲಾಯಿತು.

ಕಾರ್ಯಕ್ರಮ ನಿರೂಪಣೆಯನ್ನು ದೀಕ್ಷಾ, ಪ್ರಣಿತ್, ಶೃತ ಅವರು ನೆರವೇರಿಸಿದರು.

Related posts

ನಿವೃತ್ತ ಸೈನಿಕ ಸಂಕಪ್ಪ ಪೂಜಾರಿ ನಿಧನ

Madhyama Bimba

ಮಿಯ್ಯಾರು ಕುಂಟಿ ಬೈಲುನಲ್ಲಿ ಹಗ್ಗ ಜಗ್ಗಾಟ

Madhyama Bimba

ಕಾರ್ಕಳ ಅತ್ತೂರು ಕಲ್ಕುಡ ಕ್ಷೇತ್ರಕ್ಕೆ ಪವರ್ ಟಿ ವಿ ಮುಖ್ಯಸ್ಥ ರಾಕೇಶ್ ಶೆಟ್ಟಿ ಭೇಟಿ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More