Blog

ಸರಕಾರಿ ಬಸ್ ಸಿಬ್ಬಂದಿಗಳ ಮಾನವೀಯತೆ

ಹೆಬ್ರಿ : ಬಸ್ಸನ್ನು ಆಸ್ಪತ್ರೆಗೆ ಒಯ್ದು, ಯುವತಿಯ ಜೀವ ಉಳಿಸಿದ ಸರ್ಕಾರಿ ಬಸ್ ಸಿಬ್ಬಂದಿ.

-ಸುಕುಮಾರ್ ಮುನಿಯಾಲ್

ಹೆಬ್ರಿ : ಬಸ್ಸಿನಲ್ಲಿದ್ದ ಪ್ರಯಾಣಿಕರೊಬ್ಬರು ಅಸ್ವಸ್ಥ ಗೊಂಡ ಹಿನ್ನೆಲೆಯಲ್ಲಿ   ಸರ್ಕಾರಿ ಬಸ್ ಸಿಬ್ಬಂದಿಗಳು  ನೇರವಾಗಿ ಹೆಬ್ರಿಯ ಸರ್ಕಾರಿ ಸಮುದಾಯ ಕೇಂದ್ರ ಆಸ್ಪತ್ರೆಗೆ ದಾಖಲು ಮಾಡಿ ಜೀವ ಉಳಿಸಿದ ಘಟನೆ ಸೋಮವಾರ ಸಂಜೆ ನಡೆದಿದೆ.

ಸರ್ಕಾರಿ ಬಸ್ ಶಿವಮೊಗ್ಗದಿಂದ  ಉಡುಪಿಯತ್ತ  ಬರುತ್ತಿತ್ತು.19 ಹರೆಯದ ಸುರಕ್ಷಾ ಎಂಬವರು  ಮೇಗರವಳ್ಳಿಯಲ್ಲಿ  ಬಸ್ ಹತ್ತಿದ್ದರು. ಆಗುಂಬೆ ಘಾಟಿಯಲ್ಲಿ  ತೀವ್ರ ಅಸ್ವಸ್ಥಗೊಂಡಾಗ  ನಿರ್ವಾಹಕ ವಾಸಿಮ್ ದೇಸಾಯಿ ಆಕೆಯ ಸಹಾಯಕ್ಕೆ ಬಂದಿದ್ದಾರೆ. ತೀವ್ರವಾಗಿ ಅಸ್ವಸ್ಥಗೊಂಡ ಹಿನ್ನೆಲೆಯಲ್ಲಿ ಸೋಮೇಶ್ವರದ ಉಪ ಪ್ರಾಥಮಿಕ ಚಿಕಿತ್ಸಾ ಕೇಂದ್ರಕ್ಕೆ  ಕರೆದುಕೊಂಡು ಹೋದಾಗ, ಸುರಕ್ಷಾ ಯಾವುದೇ ರೀತಿಯ ಚೇತರಿಕೆ ಕಂಡು ಬಂದಿಲ್ಲ. ಅಲ್ಲಿಂದ ನೇರವಾಗಿ  ಪ್ರಯಾಣಿಕರ ಸಹಕಾರದೊಂದಿಗೆ  ಹೆಬ್ರಿಯ ಸರ್ಕಾರಿ ಸಮುದಾಯ ಆಸ್ಪತ್ರೆಗೆ ಬಂದು  ಅವರನ್ನು ದಾಖಲು ಮಾಡಲಾಗಿದೆ. ಸದ್ಯಕ್ಕೆ ಸ್ವಲ್ಪ ಮಟ್ಟದಲ್ಲಿ ಸುಧಾರಿಸಿಕೊಂಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿ ಜಿಲ್ಲಾ ಆಸ್ಪತ್ರೆಗೆ  ಸೇರಿಸಲಾಗಿದೆ.

ಬಸ್ ಸಿಬ್ಬಂದಿಗಳ  ತುರ್ತು ಸ್ಪಂದನೆಗೆ  ವ್ಯಾಪಕ ಶ್ಲಾಘನೆ:

ಚಾಲಕ ತಾರೇಶ್  ಹಾಗೂ ನಿರ್ವಾಹಕ ವಾಸಿಮ್ ದೇಸಾಯಿ ಸುರಕ್ಷಾ ಚೇತರಿಕೆಗೆ ಬಹಳಷ್ಟು ಶ್ರಮವಹಿಸಿದರು. ಬಸ್ಸಿನಲ್ಲಿ ಮಹಿಳೆಯರಿಂದ ಜೀವ ಉಳಿಸಲು ಸಹಾಯ ಕೇಳಿದಾಗ  ಯಾರ ಸಹಾಯವೂ ಸಿಗದಿದ್ದರೂ, ಮುಸ್ಲಿಂ ಯುವತಿಯೊಬ್ಬರು ಒಬ್ಬಳು  ಬಾಯಿಗೆ ಶ್ವಾಸ ನೀಡಿ  ಮಾನವೀಯತೆ ಮೆರೆದಿದ್ದಾಳೆ. ಇವರೊಂದಿಗೆ ಸಿಬ್ಬಂದಿಗಳು ತೋರಿದ ಸಕಾಲಿಕ ಶ್ರಮದಿಂದ ಜೀವ ಉಳಿದಿದೆ.   ಹೆಬ್ರಿಯ ಪೊಲೀಸರು, ಸಾರ್ವಜನಿಕರು ಅಭಿನಂದಿಸಿದ್ದಾರೆ.

ಸೀಟು ಸಿಗುವುದಿಲ್ಲವೆಂದು  ಅಲ್ಲಾಡದ ಮಹಿಳೆಯರು :

ನನ್ನ ಸಹೋದ್ಯೋಗಿ ವಾಸಿಮ್ ದೇಸಾಯಿ  ಯಾವುದನ್ನು ಲೆಕ್ಕಿಸದೆ  ಯುವತಿಯನ್ನು ತುರ್ತಾಗಿ ಚಿಕಿತ್ಸೆ ನೀಡಲು  ಹೊತ್ತುಕೊಂಡು ಹೋದ ರೀತಿ ನನಗೆ ಕಣ್ಣಲ್ಲಿ ಬರುತ್ತಿದೆ. ಮಹಿಳೆಯರು  ಸಹಾಯಕ್ಕೆ ಬರಲೇ ಇಲ್ಲ. ಕುಳಿತುಕೊಳ್ಳಲು ಸೀಟು ತಪ್ಪಿ ಹೋಗುತ್ತದೆ ಎಂಬ  ಭಯದಿಂದ ಯಾರೂ ಸಹಾಯಕ್ಕೆ ಬಂದಿಲ್ಲ.  ಮುಸ್ಲಿಂ ಸಹೋದರ ಸಹೋದರಿಯಿಂದ  ಸುರಕ್ಷಾ ಇಂದು  ಚೇತರಿಸಿಕೊಳ್ಳುತ್ತಿದ್ದಾಳೆ. ಇದು ಸಮಾಜಕ್ಕೆ ಮಾದರಿಯಾಗಬೇಕು.ಹೆಬ್ರಿ ಪೊಲೀಸರು ಕೂಡ ಸೋಮೇಶ್ವರ ದಿಂದ ಹೆಬ್ರಿಯ ಆಸ್ಪತ್ರೆಯ ತನಕ ೦ ಟ್ರಾಪಿಕ್ ವ್ಯವಸ್ಥೆ ನೀಡಿ ಯುವತಿಯ ಜೀವ ಉಳಿಸಲು ಸಹಕಾರ ನೀಡಿದ್ದಾರೆ.

–  ತಾರೇಶ್. ಚಾಲಕರು.
– ಸರ್ಕಾರಿ ಬಸ್
,………


ದೇವರ ರೀತಿಯಲ್ಲಿ ಬಂದು ನನ್ನ ಮಗಳನ್ನು  ಕಾಪಾಡಿದ ಸಿಬ್ಬಂದಿಗಳಿಗೆ  ನನ್ನ ಮನಪೂರ್ವಕ ಕೃತಜ್ಞತೆ. ಉಸಿರಿರುವವರೆಗೆ  ಅವರನ್ನು ನೆನಪು ಮಾಡುತ್ತೇನೆ. ಮುನಿಯಾಲಿನಲ್ಲಿ  ದೊಡ್ಡಪ್ಪನ ಮನೆಯಲ್ಲಿ ಇದ್ದುಕೊಂಡು  ನನ್ನ ಮಗಳು ವಿದ್ಯಾಭ್ಯಾಸ ಮಾಡುತ್ತಿದ್ದಳು.

ರೇಖಾ, ಸುರಕ್ಷಾ ಅವರ ತಾಯಿ.
……………..


ಘಟನೆ ಸಂಭವಿಸಿದಾಗ  ನಾನು ಸೋಮೇಶ್ವರ ಚೆಕ್ ಪೋಸ್ಟ್ ನಲ್ಲಿದ್ದೆ. 
ಬಸ್ ಸಿಬ್ಬಂದಿಗಳು  ಕರ್ತವ್ಯ ಪ್ರಜ್ಞೆ ಮೆರೆದ ಹಿನ್ನೆಲೆಯಲ್ಲಿ  ಅಪಾಯ ತಪ್ಪಿದೆ. ಇಂತಹ ಕೆಲಸಗಳು ಸಮಾಜಕ್ಕೆ ಮಾದರಿಯಾಗಬೇಕು.

ಮಹೇಶ್ ಟಿಎಂ, ಹೆಬ್ರಿ ಪಿಎಸ್ಐ.

…….


ಆಗುಂಬೆ ತಿರುವಿನಲ್ಲಿ  ಹುಡುಗಿ ತೀವ್ರ ಅಸ್ವಸ್ಥಗೊಂಡರು. ಬಹಳಷ್ಟು ಮಹಿಳೆಯರಲ್ಲಿ ಸಹಾಯ ಮಾಡಲು ಬೇಡಿಕೊಂಡರು, ಯಾರು ಮುಂದು ಬರಲಿಲ್ಲ. ಮುಸ್ಲಿಂ ಯುವತಿಯೊಬ್ಬಳು  ಸಹಾಯ ಮಾಡಿ  ಜೀವ ಉಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಪ್ರಯಾಣಿಕರ ಸಹಕಾರದೊಂದಿಗೆ  ನೇರವಾಗಿ ಆಸ್ಪತ್ರೆಗೆ ಬಂದು  ಒಂದು ಜೀವವನ್ನು ಉಳಿಸಿದ್ದೇವೆ. ನಮ್ಮ ಕರ್ತವ್ಯಕ್ಕೆ ಬಹಳಷ್ಟು ಮಂದಿ  ಕರೆ ಮಾಡಿ ಶ್ಲಾಘಿಸುತ್ತಿದ್ದಾರೆ.

-ವಾಸಿಮ್ ದೇಸಾಯಿ, ನಿರ್ವಾಹಕ, ಸರ್ಕಾರಿ ಬಸ್.

Related posts

ಕಾರ್ಕಳ ತಾಲೂಕು ಕಚೇರಿಯ ಕಂಪ್ಯೂಟರ್ ವಿಭಾಗ ಕ್ಕೆ ಸಿಡಿಲಿನ ಆಘಾತ

Madhyama Bimba

ಜನರಿಗೆ ಕಾಂಗ್ರೆಸ್ ನೀಡುವ ಯೋಜನೆಗಳನ್ನು ಬಿಜೆಪಿ ಅವಹೇಳನ ಮಾಡುತ್ತಿರುವುದನ್ನು ಜನ ಗಮನಿಸುತ್ತಿದ್ದಾರೆ

Madhyama Bimba

ರಾಷ್ಟ್ರ ಮಟ್ಟಕ್ಕೆ ಆಯ್ಕೆ ಆದ ವಿದ್ಯಾರ್ಥಿಗಳಿಗೆ ಮುನಿಯಾಲುನಲ್ಲಿ ಸ್ವಾಗತ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More