Blog

ಜಿಲ್ಲೆಯಲ್ಲಿ ರೈತ ಸಂಘದ ಬಲವರ್ಧನೆ

ಹೆಬ್ರಿ ಸಮೀಪದ ಮುನಿಯಾಲಿನಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಉಡುಪಿ ಜಿಲ್ಲಾ ಘಟಕದ ಸಭೆಯು ಜಿಲ್ಲಾಧ್ಯಕ್ಷ ಮುನಿಯಾಲು ಗೋಪಾಲ ಕುಲಾಲ್‌ ಅಧ್ಯಕ್ಷತೆಯಲ್ಲಿ ಭಾನುವಾರ ನಡೆಯಿತು.

ಮುನಿಯಾಲು : ಕರ್ನಾಟಕ ರಾಜ್ಯ ರೈತ ಸಂಘದ ಸಭೆ.
ಜಿಲ್ಲೆಯಾದ್ಯಂತ ರೈತ ಸಂಘವನ್ನು ಬಲಪಡಿಸಲು ಚಿಂತನೆ : ಗೋಪಾಲ ಕುಲಾಲ್‌.

ಹೆಬ್ರಿ : ಉಡುಪಿ ಜಿಲ್ಲೆಯ ಎಲ್ಲಾ ತಾಲ್ಲೂಕಿನಲ್ಲಿ ಸಂಘಟನೆ ಮಾಡುವ ಮೂಲಕ ಕರ್ನಾಟಕ ರಾಜ್ಯ ರೈತ ಸಂಘದ ಉಡುಪಿ ಜಿಲ್ಲಾ ಘಟಕವನ್ನು ಬಲಪಡಿಸುವುದು, ಸದಸ್ಯತ್ವ ಅಭಿಯಾನ ನಡೆಸುವುದು, ರೈತರಿಗೆ ಮಾಹಿತಿ ಕಾರ್ಯಕ್ರಮಗಳನ್ನು ನಡೆಸಿ, ಸಂಘಟನೆ ಬಲಗೊಂಡ ಬಳಿಕ ರೈತರ ಸಮಾವೇಶ, ಕೃಷಿ ಮಾಹಿತಿ ಕಾರ್ಯಕ್ರಮ, ರೈತರ ಕ್ರೀಡಾಕೂಡವನ್ನು ನಡೆಸಲಾಗುತ್ತದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಉಡುಪಿ ಜಿಲ್ಲಾ ಘಟಕದ ಅಧ್ಯಕ್ಷ ಮುನಿಯಾಲು ಗೋಪಾಲ ಕುಲಾಲ್‌ ಹೇಳಿದರು.
ಅವರು ಮುನಿಯಾಲಿನಲ್ಲಿರುವ ರೈತ ಸಂಘದ ಕಚೇರಿಯಲ್ಲಿ ನಡೆದ ಸಮಾಲೋಚನಾ ಸಭೆಯಲ್ಲಿ ಮಾತನಾಡಿದರು.


ರೈತ ಸಂಘದ ಅಭಿವೃದ್ಧಿಯ ಬಗ್ಗೆ ಸದಸ್ಯರು ಹಲವು ಅಭಿಪ್ರಾಯವನ್ನು ಸಭೆಯಲ್ಲಿ ನೀಡಿದರು. ಕಾರ್ಕಳ ತಾಲ್ಲೂಕು ಘಟಕದ ಅಧ್ಯಕ್ಷ ರೊನಾಲ್ಡ್‌ ವಲೇರಿಯನ್‌ ಲೋಬೋ ಮಾಡಿ ರೈತಸಂಘವನ್ನು ಸಕ್ರೀಯಗೊಳಿಸಿ ಸಂಘಟನೆ ಮಾಡಿ ನಿರಂತರವಾಗಿ ರೈತರಿಗೆ ನೆರವಾಗುವ ಕಾರ್ಯಕ್ರಮಗಳನ್ನು ನೀಡುವಂತೆ ಸಭೆ ಸಲಹೆ ನೀಡಿದರು.
ಕರ್ನಾಟಕ ರಾಜ್ಯ ರೈತ ಸಂಘದ ಹೆಬ್ರಿ ಕಾರ್ಕಳ ತಾಲ್ಲೂಕು ಘಟಕದ ವಿವಿಧ ಪದಾಧಿಕಾರಿಗಳು ಉಪಸ್ಥಿತರಿದ್ದರು.

Related posts

ಮೂಡುಬಿದಿರೆ ಪತ್ರಕರ್ತರ ಸಂಘದ ನೂತನ ಅಧ್ಯಕ್ಷ ನವೀನ್ ಸಾಲ್ಯಾನ್ ರಿಗೆ ಸನ್ಮಾನ

Madhyama Bimba

ಮೇಘ ಸ್ಪೋಟ

Madhyama Bimba

ಬೇಕಾಗಿದ್ದಾರೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More