*ಬಡವರ ಬಿಪಿಎಲ್ ಕಾರ್ಡ್ ರದ್ದುಗೊಳಿಸಲು ಬಿಜೆಪಿಯು ಪಿತೂರಿ ನಡೆಸಿ ಮಾದ್ಯಮ ಹೇಳಿಕೆ ನೀಡುವುದು ಮಗುವನ್ನು ಚಿವುಟಿ ತೊಟ್ಟಿಲು ತೂಗಿದಂತೆ ಸುಪ್ರೀತ್ ಶೆಟ್ಟಿ*
ಬಡ ಜನರ ಸಂಕಷ್ಟಗಳನ್ನು ಮನಗಂಡು ಬಡಜನರ ಹಿತ ಕಾಪಾಡಲು, ಹಸಿವು ಮುಕ್ತ ಸಮಾಜ ನಿರ್ಮಾಣ ಮಾಡಲು, ಬಡ ಜನರಿಗೆ ಆರೋಗ್ಯ, ಶಿಕ್ಷಣ, ಗುಣಮಟ್ಟದ ಆಹಾರ ಮುಂತಾದ ಸಕಲ ಸರ್ಕಾರಿ ಸವಲತ್ತುಗಳೂ ದೊರೆಯುವಂತಾಗಲು, ವ್ಯವಸ್ಥೆಯ ಎಲ್ಲಾ ವಿಭಾಗಗಳಲ್ಲೂ ಬಡಜನರ ಹಿತ ಕಾಪಾಡಲೆಂದೇ ಬಡ ಜನರ ಹಿತದೃಷ್ಟಿಯಿಂದ ಕಾಂಗ್ರೆಸ್ ಪಕ್ಷವು ಬಡವರಿಗೆಂದೇ ಬಿಪಿಎಲ್ ಕಾರ್ಡ್,ನ್ನು ಹಾಗೂ ಕಡು ಬಡವರಿಗೆ ಅಂತ್ಯೋದಯ ಕಾರ್ಡ,ನ್ನು ಜಾರಿಗೊಳಿಸಿದ್ದು ಈಗ ಇತಿಹಾಸ. ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳನ್ನು ಗುರುತಿಸಿ ಅವರೆಲ್ಲರಿಗೂ ಅಕ್ಕಿ, ಗೋದಿ, ಸಕ್ಕರೆ, ದವಸ ದಾನ್ಯಗಳನ್ನು ಪಡಿತರ ಮೂಲಕ ವಿತರಿಸುವಂತಹ ಮಹತ್ತರದ ಯೋಜನೆಗಳನ್ನು ಕಾಂಗ್ರೆಸ್ ಪಕ್ಷವು ಜಾರಿಗೊಳಿಸಿತು. ಅಷ್ಟೇ ಅಲ್ಲದೇ ಮನಮೋಹನ ಸಿಂಗ್ ಅವರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಆಹಾರ ಭದ್ರತೆ ಕಾನೂನನ್ನು ಜಾರಿಗೊಳಿಸಿ ದೇಶದಲ್ಲಿ ಯಾವ ಪ್ರಜೆಯೂ ಹಸಿದ ಹೊಟ್ಟೆಯಲ್ಲಿ ಮಲಗಬಾರದು ಎನ್ನುವಂತಹ ಉದಾತ್ತ ಚಿಂತನೆಯುಳ್ಳ ಯೋಜನೆಯನ್ನು ಕಾಂಗ್ರೆಸ್ ಕಾರ್ಯರೂಪಕ್ಕೆ ತಂದಿತು ಎಂದು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಸುಪ್ರೀತ್ ಶೆಟ್ಟಿ ತಿಳಿಸಿದ್ದಾರೆ
ಪಡಿತರ ಮೂಲಕ ಆಹಾರ ದಾನ್ಯಗಳನ್ನು ಪಡೆಯುವುದು ಅದು ಪ್ರಜೆಗಳ ಹಕ್ಕು, ದೇಶದ ಪ್ರಜೆಗಳಿಗೆ ಆಹಾರವನ್ನು ಪೂರೈಸುವುದು ಸರ್ಕಾರದ ಕರ್ತವ್ಯ ಎನ್ನುವಂತಹ ಮಹತ್ತರವಾದ “ಆಹಾರ ಭದ್ರತಾ ಕಾಯ್ದೆಯನ್ನು” ಜಾರಿಗೊಳಿಸಿ ದೇಶದಲ್ಲಿ ಹಸಿವು ಮುಕ್ತ ಸಮಾಜವನ್ನು ನಿರ್ಮಾಣ ಮಾಡಲು ಕಾಂಗ್ರೆಸ್ ತನ್ನ ಅಧಿಕಾರವಧಿಯಲ್ಲಿ ಶಕ್ತಿ ಮೀರಿ ಪ್ರಯತ್ನಿಸಿತ್ತು. ಆಹಾರ ಪೂರೈಸುವುದನ್ನು ಯೋಜನೆಯಾಗಿಸದೇ ಕಾಯ್ದೆಯನ್ನಾಗಿ ಜಾರಿಗೊಳಿಸಿದ ಪರಿಣಾಮ ಇಂದಿಗೂ ಬಡವರಿಗೆ ಸರ್ಕಾರದಿಂದ ಆಹಾರ ವಸ್ತುಗಳು ದೊರೆಯುವಂತಾಗಿದೆ. ಕಾಂಗ್ರೆಸ್ ಸರ್ಕಾರದ ಅಂದಿನ ಯೋಜನೆಗಳಿಂದ ಇಂದು ಜನರ ಜೀವನ ಮಟ್ಟ ಸುಧಾರಣೆಯಾಗಿ ಬಡವರೂ ಸ್ವಾಭಿಮಾನದಿಂದ ಜೀವಿಸುವಂತಾಗಿದ್ದು ಇದು ಕಾಂಗ್ರೆಸ್ ಪಕ್ಷದ ದೂರದೃಷ್ಟಿತ್ವಕ್ಕೆ ಉದಾಹರಣೆಯಾಗಿದೆ.
ಬಿಪಿಎಲ್ ಹಾಗೂ ಅಂತ್ಯೋದಯ ಕಾರ್ಡ್,ದಾರರಿಗೆ ಪಡಿತರ ಕಾರ್ಡ್ ಮೂಲಕ ಅಕ್ಕಿ, ಗೋದಿ, ಬೇಳೆಕಾಳುಗಳು, ಸಕ್ಕರೆ ಮುಂತಾದ ಆಹಾರ ದಾನ್ಯಗಳು ಕಾಂಗ್ರೆಸ್ ಸರ್ಕಾರದ ಕಾಲದಲ್ಲಿ ಬಡಜನರಿಗೆ ಅತ್ಯಂತ ಸುಲಭವಾಗಿ ದೊರೆಯುತ್ತಿತ್ತು. ಆದರೆ ಮುಂದೆ ಬಂಡವಾಳ ಶಾಹಿಗಳ ಪರವಾಗಿರುವ ಬಿಜೆಪಿಯ ಮೋದಿ ಸರ್ಕಾರ ಆಡಳಿತಕ್ಕೆ ಬಂದ ಪರಿಣಾಮ ಬಡಜನ ವಿರೋದಿ ಬಿಜೆಪಿಯು ಪಡಿತರ ಮೂಲಕ ಬಡವರಿಗೆ ಸಿಗುತ್ತಿದ್ದ ಗೋದಿ, ಸಕ್ಕರೆ, ಅಡುಗೆ ಎಣ್ಣೆ, ಬೇಳೆ ಕಾಳು, ದವಸ ದಾನ್ಯಗಳು ಮುಂತಾದ ಎಲ್ಲಾ ಆಹಾರ ದಾನ್ಯಗಳನ್ನು ಕಡಿತಗೊಳಿಸಿ ಕೇವಲ ಅಕ್ಕಿ ಮಾತ್ರಾ ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಸಿಗುವಂತಾಗಿದೆ. ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರವಿದ್ದ ಸಂದರ್ಭದಲ್ಲಿ ನೀಡುತ್ತಿದ್ದ ಎಲ್ಲಾ ಆಹಾರ ದಾನ್ಯಗಳನ್ನು ಪಡಿತರದಿಂದ ರದ್ದುಗೊಳಿಸಿ ಬಡ ಜನರಿಗೆ ಬಿಜೆಪಿಯು ದ್ರೋಹವನ್ನೆಸಗಿದೆ. ಕಾಂಗ್ರೆಸ್ ಆಡಳಿತದಲ್ಲಿ ಪಡಿತರ ಮೂಲಕ ದೊರೆಯುತ್ತಿದ್ದ ಗೋದಿ, ಸಕ್ಕರೆ, ಬೇಳೆ ಕಾಳು, ದವಸ ದಾನ್ಯಗಳು ಮೋದಿ ಆಡಳಿತದಲ್ಲಿ ಯಾಕೆ ಸಿಗುತ್ತಿಲ್ಲವೆಂದು ಬಿಜೆಪಿ ನಾಯಕರು ಉತ್ತರಿಸಲಿ.
ರಾಜ್ಯದ ಕಾಂಗ್ರೆಸ್ ಸರ್ಕಾರದ ಜನಪ್ರಿಯ “ಕಾಂಗ್ರೆಸ್ ಗ್ಯಾರಂಟಿ” ಯೋಜನೆಗಳಿಂದ ಕಂಗೆಟ್ಟು ಹತಾಶವಾಗಿರುವ ಬಿಜೆಪಿಯು ಸ್ಥಳೀಯಾಡಳಿತದಲ್ಲಿ ಬಹುಪಾಲು ಪ್ರಾಬಲ್ಯವನ್ನು ಹೊಂದಿದ್ದು ತನ್ನ ಪಕ್ಷದ ಜನಪ್ರತಿನಿದಿಗಳ ಮೂಲಕ ಬಡ ಜನರ ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬಗಳ ಆದಾಯ ಹೆಚ್ವಾಗಿದೆಯೆಂದು ತಪ್ಪು ಮಾಹಿತಿಯನ್ನು ಸಂಬಂದ ಪಟ್ಟ ಇಲಾಖೆಗೆ ನೀಡುತ್ತಿರುವುದರಿಂದಲೇ ಇಂದು ಕಾರ್ಕಳದ ಬಡ ಜನರ ಬಿಪಿಎಲ್ ಕಾರ್ಡ್ ರದ್ದುಗೊಳ್ಳಲು ನೇರ ಕಾರಣವಾಗಿದೆ. ಕಾಂಗ್ರೆಸ್ ಸರ್ಕಾರದ ಜನಪ್ರಿಯತೆಯನ್ನು ಸಹಿಸಲಾರದೆ ಬಿಜೆಪಿಯು ತನ್ನ ಸದಸ್ಯರ ಮೂಲಕ ಬಿಪಿಎಲ್ ಕಾರ್ಡ್,ದಾರರ ಕಾರ್ಡ್ ರದ್ದುಗೊಳ್ಳುವಂತೆ ತೆರೆಮರೆಯಲ್ಲಿ ಪಿತೂರಿ ನಡೆಸುತ್ತಿದೆ. ಬಿಜೆಪಿ ಶಾಸಕರುಗಳು ಮಾದ್ಯಮದ ಮೂಲಕ ಬಿಪಿಎಲ್ ಕಾರ್ಡ್ ರದ್ದುಗೊಳಿಸಿದ್ದು ಕಾಂಗ್ರೆಸ್ ಎನ್ನುವ ಆರೋಪಗಳನ್ನು ಮಾಡುತ್ತಿರುವುದೆ ಬಿಜೆಪಿಯ ಈ ಪಿತೂರಿಗೆ ಸಾಕ್ಷಿಯಾಗಿದೆ ಎಂದು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಸುಪ್ರೀತ್ ಶೆಟ್ಟಿ ತಿಳಿಸಿದ್ದಾರೆ
ಕಾರ್ಕಳ ಕ್ಷೇತ್ರದಾದ್ಯಂತ ವಾಸಿಸುತ್ತಿರುವ ಬಡ ಕುಟುಂಬಗಳ ಆದಾಯ ಹೆಚ್ಚಾಗಿದೆಯೆಂದು ಸಂಬಂದಪಟ್ಟ ಇಲಾಖೆಗಳಿಗೆ ತಪ್ಪು ಮಾಹಿತಿಯನ್ನು ನೀಡಿ ಬಡವರ ಬಿಪಿಎಲ್ ಕಾರ್ಡ್ ರದ್ದುಗೊಳಿಸಲು ಪಿತೂರಿ ನಡೆಸುತ್ತಿರುವ ಬಿಜೆಪಿ ಸದಸ್ಯರ ಈ ಕುಕೃತ್ಯವನ್ನು ಕಾರ್ಕಳದ ಜನತೆ ಅರ್ಥ ಮಾಡಿಕೊಳ್ಳಬೇಕು.
ಕಾಂಗ್ರೆಸ್ ಗ್ಯಾರಂಟಿ ವಿರುದ್ದ ಮಾತನಾಡಿದ್ದ ಕಾರ್ಕಳದ ಬಿಜೆಪಿಯು ಬಡಜನರನ್ನು ಬಿಟ್ಟಿ ಭಾಗ್ಯಗಳಿಗೆ ಮಾರಿಕೊಂಡವರು ಎಂದು ಬಹಿರಂಗವಾಗಿ ಅವಹೇಳನ ಮಾಡಿದ್ದು ಇದೆಲ್ಲವನ್ನೂ ಜನರು ಗಮನಿಸುತ್ತಿದ್ದಾರೆ. ಗ್ರಾಮೀಣ ಭಾಗದ ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬಗಳ ಬಗ್ಗೆ ತಪ್ಪು ಮಾಹಿತಿ ನೀಡಿ ಬಡವರಿಗೆ ತೊಂದರೆ ನೀಡುತ್ತಿರುವ ಸ್ಥಳೀಯ ಬಿಜೆಪಿ ಕಾರ್ಯಕರ್ತರಿಗೆ ಕಾರ್ಕಳದ ಬಿಜೆಪಿ ನಾಯಕರು ಮೊದಲು ಬುದ್ದಿ ಮಾತನ್ನು ಹೇಳಿ ಸರಿದಾರಿಗೆ ತರಲು ಪ್ರಯತ್ನಿಸಿ. ತನ್ನ ಪಕ್ಷದ ಕಾರ್ಯಕರ್ತರ ಮೂಲಕ ಬಿಪಿಎಲ್ ಕಾರ್ಡ್ ರದ್ದುಗೊಳಿಸಲು ಪಿತೂರಿ ನಡೆಸಿ ಮಾದ್ಯಮದ ಮೂಲಕ ಹೇಳಿಕೆ ನೀಡುವ ಬಿಜೆಪಿ ನಾಯಕರದ್ದು “ಒಂದು ಕೈಯಲ್ಲಿ ಮಗುವನ್ನು ಚಿವುಟಿ ಮತ್ತೊಂದು ಕೈಯಲ್ಲಿ ತೊಟ್ಟಿಲು ತೂಗಿದಂತಾ” ವರ್ತನೆಯಾಗಿದೆ ಎಂದು ಅವರು ತಿಳಿಸಿದ್ದಾರೆ
next post