ವರದಿ ರಾಣಿ ಪ್ರಸನ್ನ
ಶಾಲಾ ಅಭಿವೃದ್ಧಿ ಮಂಡಳಿ ವತಿಯಿಂದ ಪತ್ರ ನೀಡಿದರು ಯಾವುದೇ ರೀತಿಯ ಸ್ಪಂದನೆಯನ್ನು ನೀಡದ ಶಿಕ್ಷಣ ಇಲಾಖೆ ಹಾಗು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ.
ಸಕಲೇಶಪುರದ ದೇವಾಲದಕೆರೆ ಗ್ರಾಮ ಪಂಚಾಯಿತಿಗೆ ಒಳ ಪಡುವ ಅಚ್ಚನಹಳ್ಳಿ ಸರ್ಕಾರಿ ಹಿರಿಯ ಮತ್ತು ಕಿರಿಯ ಪ್ರಾಥಮಿಕ ಶಾಲೆ 115 ವರ್ಷದ ಇತಿಹಾಸವಿದ್ದು ಶಿಥಿಲಾವಸ್ಥೆಯ ಸ್ಥಿತಿಯಲ್ಲಿದೆ.
ಹಳೆಯ ಶಾಲೆಯ ಪಕ್ಕದಲ್ಲೇ ಅದರ ಬದಲಾಗಿ ಹೊಸ ಶಾಲಾ ಕಟ್ಟಡ ನಿರ್ಮಾಣ ಮಾಡಲಾಗಿದೆ. ಆದರೆ ಸಮಸ್ಯೆ ಇದಲ್ಲ. ಶಾಲಾ ಮಕ್ಕಳು ಶೌಚಾಲಯಕ್ಕೆ ಹೋಗಬೇಕೆಂದರೆ ಹಳೆಯ ಕಟ್ಟಡಕ್ಕೆ ಹೋಗಬೇಕು ಮತ್ತು ಅಂಗನವಾಡಿ ಕೂಡ ಇದಕ್ಕೆ ಹೊಂದಿಕೊಂಡಂತೆ ಇದೆ. ಹಲವಾರು ಮಕ್ಕಳು ಅಂಗನವಾಡಿ ಶಿಕ್ಷಕರು ಅಲ್ಲಿಯೇ ಶಾಲೆಯನ್ನು ನಡೆಸುತ್ತಿದ್ದಾರೆ ಈ ಹಳೇ ಕಟ್ಟಡ ಯಾವಾಗ ಬೇಕಾದರೂ ಬಿದ್ದು ಹೋಗಬಹುದು ಆದಕಾರಣ ಇದರ ಕುರಿತು 4 ದಿನಗಳ ಮೊದಲು ನಡೆದ 2024-25 ನೇ ಸಾಲಿನ ಗ್ರಾಮ ಸಭೆಯಲ್ಲೂ ಸಹ ಗ್ರಾಮಾಭಿವೃದ್ಧಿ ಸಮಿತಿ ಅಧ್ಯಕ್ಷ ಹಾಗು ದೇವಾಲದಕೆರೆ ಗ್ರಾಮ ಪಂಚಾಯತಿ ಉಪಾಧ್ಯಕ್ಷರು ಪೂರ್ಣೇಶ್ ಅತ್ತಿಬೆಟ್ಟ ಅವರು ಚರ್ಚಿಸಿದ್ದಾರೆ. ಇದರ ಕುರಿತು ಶಾಸಕರಾದ ಸಿಮೆಂಟ್ ಮಂಜುನಾಥ್ ಅವರು ಸಹ ಇದರ ಕುರಿತು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ .
ಈಗ ಮಕ್ಕಳಿಗೆ ದಸರಾ ರಜಗಳು ಇರುವ ಕಾರಣ ಹಳೇ ಕಟ್ಟಡವು ಶಿಥಿಲಾವಸ್ಥೆಯಲ್ಲಿರುವ ಶಾಲೆಯನ್ನು ತಕ್ಷಣ ತೆರವುಗೊ ಳಿಸಿ. ಮಕ್ಕಳ ಹಿತದೃಷ್ಟಿಯಿಂದ ರಜೆ ಮುಗಿಯುವ ಒಳಗೆ ಈ ಕಾರ್ಯವನ್ನು ಮಾಡಬೇಕು ಎಂದು ಮಲ್ನಾಡ್ ಶಾಡೋ ಮೂಲಕ ಮನವಿ ಮಾಡಿದ್ದಾರೆ.
ಹಳೇ ಶಾಲಾ ಕಟ್ಟಡದ ಪಕ್ಕದಲ್ಲಿಯೇ ಶಾಲಾ ಮಕ್ಕಳ ಶೌಚಾಲಯ ಹಾಗೂ ಅದರ ಪಕ್ಕದಲ್ಲಿ ಅಂಗನವಾಡಿ ಕೇಂದ್ರವಿರುತ್ತದೆ ಮಕ್ಕಳು ಹಾಗೂ ಸಾರ್ವಜನಿಕರ ಮೇಲೆ ಬಿದ್ದರೆ ಶಿಕ್ಷಣ ಇಲಾಖೆಯೇ ಹೊಣೆಗಾರರಾಗಿರುತ್ತಾರೆ. ಆದ್ದರಿಂದ ದಯವಿಟ್ಟು ದುರಸ್ತಿ ಮಾಡಿಸಿಕೊಡಬೇಕಾಗಿ ಒತ್ತಾಯಿಸುತ್ತೇವೆ ಎಂದು ತಿಳಿಸಿದ್ದಾರೆ.
next post