ಕಡಂದಲೆ ಲಯನ್ಸ್ ಕ್ಲಬ್ ,ಲಯನ್ಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ಸಚ್ಚೇರಿಪೇಟೆ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ನಮ್ಮ ನಡೆ ಸ್ವಚ್ಛತೆಯ ಕಡೆ ಎಂಬ ಶೀರ್ಷಿಕೆಯಲ್ಲಿ ಸುತ್ತಮುತ್ತಲಿನ ಸಚ್ಚೇರಿಪೇಟೆ, ಕಡಂದಲೆ, ಸಂಕಲಕರಿಯ,ಮುಂಡ್ಕೂರು ಪ್ರದೇಶದಲ್ಲಿ ಸ್ವಚ್ಚತಾ ಕಾರ್ಯಕ್ರಮ ವನ್ನು ನಡೆಸಲಾಯಿತು.
ಕಡಂದಲೆ ಲಯನ್ಸ್ ಕ್ಲಬ್ ಹಾಗೂ ಲಯನ್ಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ಸಚ್ಚೇರಿಪೇಟೆಯ ಸಂಯುಕ್ತ ಆಶ್ರಯದಲ್ಲಿ ಲಯನ್ಸ್ ಶಾಲಾ ಸಭಾಂಗಣದಲ್ಲಿ ಮಹಾತ್ಮಾ ಗಾಂಧಿ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರಿಯವರ ಜನ್ಮ ದಿನಾಚರಣೆ ನಡೆಯಿತು.
ದಕ್ಷಿಣ ಕನ್ನಡ ಹಾಲು ಉತ್ಪಾದಕರ ಸಂಘದ ಅಧ್ಯಕ್ಷರು ಹಾಗೂ ಲಯನ್ಸ್ ಕಾರ್ಯಕಾರಿ ಸಮಿತಿಯ ಅಧ್ಯಕ್ಷರಾದ ಲಯನ್ ಕೆ.ಪಿ.ಸುಚರಿತ ಶೆಟ್ಟಿ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ವಿದ್ಯಾರ್ಥಿಗಳು ಬಾಲ್ಯದಿಂದಲೇ ಸ್ವಚ್ಚತಾ ಕಾರ್ಯಕ್ರಮದಲ್ಲಿ ತಮ್ಮನ್ನು ತೊಡಗಿಸಿಕೊಂಡು ,ಸಮಾಜದಲ್ಲಿ ಆದರ್ಶ ಸಂಸ್ಕಾರಯುತ ವ್ಯಕ್ತಿಗಳಾಗಿ ಮೂಡಿ ಬರಬೇಕು ಎಂದು ಹೇಳಿದರು.
ಸಂಸ್ಥೆಯ ಸಂಚಾಲಕರಾದ ಲಯನ್ ಕೆ.ಸತ್ಯ ಶಂಕರ್ ಶೆಟ್ಟಿಯವರು ಗಾಂಧೀಜಿ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರಿಯವರ ಜೀವನ ಚರಿತ್ರೆಯನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ನ ಅಧ್ಯಕ್ಷರಾದ ಲ ಪ್ರಶಾಂತ್ ಶೆಟ್ಟಿ, ಲಯನ್ಸ್ ಕ್ಲಬ್ ನ ಕಾರ್ಯದರ್ಶಿ ಯಶವಂತ್ ಆಚಾರ್ಯ, ಲಯನ್ ಆನಂದ ಆಚಾರ್ಯ, ಲಯನ್ ವಿಕಾಸ್ ಶೆಟ್ಟಿ, ಹಿರಿಯರಾದ ಲಯನ್ ಕ್ರಷ್ಣ ಶೆಟ್ಟಿ, ಲಯನ್ ಪುರುಷೋತ್ತಮ ಪೂಜಾರಿ, ಅಟೋ ಚಾಲಕ ಮಾಲಕರ ಸಂಘದ ಅಧ್ಯಕ್ಷರಾದ ದಿನೇಶ್ ಪಿ ದೇವಾಡಿಗ, ಲಯನ್ ಸತೀಶ್ ಪ್ರಭು,ನೂತನ ಸದಸ್ಯರಾದ ಲಯನ್ ಸುನೀಲ್, ಸಂಸ್ಥೆಯ ಮುಖ್ಯ ಶಿಕ್ಷಕರಾದ ಗೌರವ್ ಆರ್.ಕೆ ಮತ್ತಿತರರಿದ್ದರು.
ಎಮ್ ಯಾಹ್ನ ಕಾರ್ಯಕ್ರಮ ನಿರೂಪಿಸಿ,ಎಮ್ ತಾನ್ಯ ಸ್ವಾಗತಿಸಿ, ಸಾನ್ವಿ ವಿ ವಂದನಾರ್ಪಣೆ ಗೈದರು. ಭಾರತೀಯ ಸ್ಕೌಟ್ ಮತ್ತು ಗೈಡ್ಸ್ ಹಾಗೂ ಕಬ್ ಬುಲ್ ಬುಲ್ ವಿದ್ಯಾರ್ಥಿಗಳಿಂದ ಸರ್ವ ಧರ್ಮದ ಪ್ರಾರ್ಥನೆ ನೆರವೇರಿತು.