Blog

ರತನ್ ಟಾಟಾ ಶ್ರದ್ಧಾಂಜಲಿ ಸಭೆ

ನಾಳೆ ಕಾರ್ಕಳ ಬಸ್ ಸ್ಟ್ಯಾಂಡ್ ನಲ್ಲಿ ಶ್ರೀ ರತನ್ ಟಾಟಾ ಶೃದ್ದಾಂಜಲಿ ಸಭೆ*



ಪದ್ಮವಿಭೂಷಣ, ಮಹಾ ಮಾನವತಾವಾದಿ ಶ್ರೀ ರತನ್ ಟಾಟಾ ಅವರಿಗೆ ಸಾರ್ವಜನಿಕ ಶೃದ್ದಾಂಜಲಿ ಸಭೆಯನ್ನು ಬುಧವಾರ ದಿನಾಂಕ 16 – 10 -2024ರಂದು ಕಾರ್ಕಳ ಬಸ್ ನಿಲ್ದಾಣದಲ್ಲಿ ಅಭಿನವ ಭಾರತ ಸೊಸೈಟಿ ಆಯೋಜಿಸಿದೆ.

ಲಕ್ಷಾಂತರ ಜನರಿಗೆ ಉದ್ಯೋಗ ನೀಡಿದ ದೇಶದ ಅಗ್ರಗಣ್ಯ ಕೈಗಾರಿಕೋದ್ಯಮಿ…
ದೇಶದ ಅಭಿವೃದ್ಧಿಗೆ ವಿಶಿಷ್ಟ ಕೊಡುಗೆ ನೀಡಿದ ದೇಶಭಕ್ತ ಉದ್ಯಮಿ…
ದೇಶದ ಜನರ ಸಮಸ್ಯೆಗೆ ಸದಾ ಮಿಡಿದ ಮಹಾ ಮಾನವತಾವಾದಿ…
ದೇಶದ ಸಂಕಷ್ಟಕ್ಕೆ ಅವಿರತ ಸ್ಪಂದಿಸಿದ ಲೋಕೋಪಕಾರಿ…
ಭಾರತ ಮಾತೆಯ ಹೆಮ್ಮೆಯ ಸುಪುತ್ರ, ದೇಶ ಭಕ್ತರ ಪ್ರೀತಿಯ ರತನ್ ಟಾಟಾರವರು ಸ್ವರ್ಗಸ್ಥರಾಗಿದ್ದು
ಅವರ ಅದ್ವಿತೀಯ ಸಾಧನೆ, ಅಪ್ರತಿಮ ದೇಶಭಕ್ತಿಯನ್ನು ಮೆಲುಕು ಹಾಕುತ್ತಾ
ಅವರಿಗೆ ಭಾವಪೂರ್ಣ ಶೃದ್ದಾಂಜಲಿ ಸಲ್ಲಿಸುವ ಸಲುವಾಗಿ ಈ ಕಾರ್ಯಕ್ರಮ ಆಯೋಜನೆಯಾಗಿದೆ.

ಬೆಳಿಗ್ಗೆ 10-00 ಗಂಟೆಯಿಂದ ಸಂಜೆ 7-00ರ ತನಕ ಕಾರ್ಕಳ ಬಸ್ ನಿಲ್ದಾಣದಲ್ಲಿ ಪದ್ಮವಿಭೂಷಣ ಶ್ರೀ ರತನ್ ಟಾಟಾರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಲು  ಕಾರ್ಕಳದ ದೇಶಭಕ್ತ ನಾಗರೀಕರ ಬಂಧು ಬಗಿನಿಯರಿಗೆ ಅವಕಾಶ ಇದೆ ಎಂದು ಆಯೋಜಕರು ತಿಳಿಸಿದ್ದಾರೆ.

Related posts

ನಲ್ಲೂರು ಗೋ ಹತ್ಯೆಯ ಬಂಧಿತ ಹಿಂದೂ ಕಾರ್ಯಕರ್ತ ಅಲ್ಲ

Madhyama Bimba

ಇನ್ನೋವಾ ಅಪಘಾತ

Madhyama Bimba

ರಾಜ್ಯ ಮಟ್ಟದ ಕ್ರೀಡಾಕೂಟ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More