Blog

ಹೆಬ್ರಿ ಜೀರ್ಣೋದ್ದಾರಕ್ಕೆ ಭೂಮಿ ಪೂಜೆ

ಹೆಬ್ರಿಯ ಶ್ರೀ ಕ್ಷೇತ್ರ ಬಡಾಗುಡ್ಡೆ ಕೊರತಿ ಕೊರಗಜ್ಜ ದೈವಸ್ಥಾನದ ಜೀರ್ಣೋದ್ಧಾರಕ್ಕೆ ಗುರುವಾರ ಭೂಮಿ ಪೂಜೆ ನೆರವೇರಿಸಲಾಯಿತು.

ಹೆಬ್ರಿ ಬಡಾಗುಡ್ಡೆ ಕೊರತಿ ಕೊರಗಜ್ಜ ದೈವಸ್ಥಾನದ ಜೀರ್ಣೋದ್ಧಾರ : ಭೂಮಿ ಪೂಜೆ.

ಹೆಬ್ರಿ : ಹೆಬ್ರಿಯ ಶ್ರೀ ಕ್ಷೇತ್ರ ಬಡಾಗುಡ್ಡೆ ಕೊರತಿ ಕೊರಗಜ್ಜ ದೈವಸ್ಥಾನವು ಶಿಲಾಮಯ ಗರ್ಬಗುಡಿಯ ನಿರ್ಮಾಣ ಮತ್ತು  ಜೀರ್ಣೋದ್ಧಾರ ಕಾರ್ಯಕ್ಕೆ ಗುರುವಾರ ಭೂಮಿ ಪೂಜೆ ನೆರವೇರಿಸಲಾಯಿತು. ಹೆಬ್ರಿಯ ಶ್ರೀ ಅನಂತಪದ್ಮನಾಭ ದೇವಸ್ಥಾನದಿಂದ ಪೂಜೆ ಸಲ್ಲಿಸಿ ಭೂಮಿಪೂಜೆಯ ಶಿಲೆಯನ್ನು ಮೆರವಣಿಗಯ ಮೂಲಕ  ಶ್ರೀ ಕ್ಷೇತ್ರ ಬಡಾಗುಡ್ಡೆಕ್ಕೆ ತರಲಾಯಿತು.


ವೇದಮೂರ್ತಿ ಹೆಬ್ರಿ ನಾಗರಾಜ ಜೋಯಿಸ್‌ ಧಾರ್ಮಿಕ ವಿಧಿವಿಧಾನ ನೆರವೇರಿಸಿದರು. ಶ್ರೀ ಕ್ಷೇತ್ರ ಬಡಾಗುಡ್ಡೆ ಕೊರತಿ ಕೊರಗಜ್ಜ ದೈವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಕನ್ಯಾನ ಲಕ್ಷ್ಮೀನಾರಾಯಣ ನಾಯಕ್‌, ಪ್ರಧಾನ ಕಾರ್ಯದರ್ಶಿ ಎಚ್.ಜನಾರ್ಧನ್‌, ಶ್ರೀ ಕ್ಷೇತ್ರ ಬಡಾಗುಡ್ಡೆ ಕೊರತಿ ಕೊರಗಜ್ಜ ದೈವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಜನಾರ್ಧನ್‌, ಸಮಿತಿಯ ಸದಸ್ಯರು, ಸಮುದಾಯದ ಮುಖಂಡರು, ಹೆಬ್ರಿಯ ವಿವಿಧ ಮುಖಂಡರಾದ ಎಚ್.ಭಾಸ್ಕರ ಜೋಯಿಸ್‌, ಎಚ್.ಪ್ರವೀಣ್‌ ಬಲ್ಲಾಳ್‌, ಎಚ್.‌ ವಾದಿರಾಜ ಶೆಟ್ಟಿ, ಹೆಬ್ರಿ ಗ್ರಾಮ ಪಂಚಾಯಿತಿ ಅಧ್ಯಕ್ಷ ತಾರಾನಾಥ ಎಸ್‌ ಬಂಗೇರ, ಸದಸ್ಯರಾದ ಎಚ್.ಬಿ.ಸುರೇಶ್‌, ಕರುಣಾಕರ ಶೇರಿಗಾರ್‌, ಕನ್ಯಾನ ಸಂತೋಷ ನಾಯಕ್‌, ಚಾರ ಗ್ರಾಮ ಪಂಚಾಯಿತಿ ಅಧ್ಯಕ್ಷ ದಿನೇಶ ಶೆಟ್ಟಿ, ನಾಡ್ಪಾಲು ಗ್ರಾಮ ಪಂಚಾಯಿತಿ ಅಧ್ಯಕ್ಷ ನವೀನ್‌ ಕುಮಾರ್‌, ಪ್ರಮುಖರಾದ ಶಂಕರ ಶೇರಿಗಾರ್‌, ನವೀನ್‌ ಕೆ ಅಡ್ಯಂತಾಯ, ಎಚ್.ಕೆ.ಸುಧಾಕರ್‌, ಹೆಬ್ರಿ ಟಿ.ಜಿ.ಆಚಾರ್ಯ, ನರೇಂದ್ರ ನಾಯಕ್‌, ಸುಧಾಕರ ಹೆಗ್ಡೆ, ಗಣೇಶ ಕುಮಾರ್‌ ಜರ್ವತ್ತು ಸೇರಿದಂತೆ ಸ್ಥಳೀಯ ಗಣ್ಯರು ಭಾಗವಹಿಸಿದ್ದರು.

Related posts

ಗಂಡನನ್ನು ಕೊಂದ ಹೆಂಡತಿ

Madhyama Bimba

ಸಾಣೂರು ಯುವಕನಿಗೆ ಉಡುಪಿಯಲ್ಲಿ ಕೊಲೆ ಬೆದರಿಕೆ

Madhyama Bimba

ಮಿಯ್ಯಾರುನಲ್ಲಿ ಭೀಕರ ರಸ್ತೆ ಅಪಘಾತ – ರಸ್ತೆ ಸಮಸ್ಯೆ – ಹೋರಾಟದ ಎಚ್ಚರಿಕೆ ನೀಡಿದ ಶೇಕ್ ಶಬೀರ್

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More