ಸಂಘಟನೆಯಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡು ವಿವಿಧ ಹುದ್ದೆಗಳನ್ನು ಅಲಂಕರಿಸಿರುವ ಬಿಜೆಪಿಯ ಸಾಮಾನ್ಯ ಕಾರ್ಯಕರ್ತನಾಗಿ ದುಡಿದು ಅತ್ಯಂತ ಸರಳ ವ್ಯಕ್ತಿತ್ವದ ಕಿಶೋರ್ ಕುಮಾರ್ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದು ಅವರ ಗೆಲುವು ನಿಶ್ಚಿತ ಎಂದು ಕಾರ್ಕಳ ಬಿಜೆಪಿ ಮಂಡಲ ಅಧ್ಯಕ್ಷ ನವೀನ್ ನಾಯಕ್ ಹೇಳಿದರು
ಅ. 12 ರಂದು ಬಿಜೆಪಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಸವಿತಾ ಸಮಾಜದಂತಹ ಸಣ್ಣ ಸಮುದಾಯಕ್ಕೆ ಪಕ್ಷದ ಹಿರಿಯರು ಮನ್ನಣೆ ನೀಡಿ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಿರುವುದು ಸಾಮಾಜಿಕ ನ್ಯಾಯವಾಗಿದೆ ಎಂದರು
ಭಯೋತ್ಪಾದಕರ ಸೆಡ್ಡನ್ನು ಲೆಕ್ಕಿಸದೆ ಕಾಶ್ಮೀರದ ಲಾಲ್ ಚೌಕ್ ನಲ್ಲಿ ರಾಷ್ಟ್ರ ಧ್ವಜವನ್ನು ಹಾರಿಸಿ ರಾಷ್ಟ್ರ ಪ್ರೇಮವನ್ನ ಮೆರೆದಿರುವುದು ಇವರ ರಾಷ್ಟ್ರೀಯತೆಯನ್ನು ಎತ್ತಿ ಹಿಡಿಯುತ್ತದೆ ಎಂದರು
ಬಿಜೆಪಿ ಎಂದು ಜಾತಿ ರಾಜಕಾರಣವನ್ನು ಮಾಡುತ್ತಿಲ್ಲ ಎಂಬುದಕ್ಕೆ ಇದೇ ಆದರೆ ಕಾಂಗ್ರೆಸ್ ಜಾತಿ ರಾಜಕಾರಣದ ಮೇಲೆ ರಾಜಕೀಯ ಮಾಡಿ ಮತ ಪಡೆಯಲು ಪ್ರಯತ್ನಿಸುತ್ತಿದೆ ಆದರೆ ಇದು ಅಸಾಧ್ಯವೆಂದರು ಕಾಂಗ್ರೆಸ್ಸಿನ ದುರಾಡಳಿತ ಬೆಲೆ ಏರಿಕೆ ಇದು ಜನರನ್ನು ಕೆರಳಿಸಿದೆ ಕಾಂಗ್ರೆಸ್ ಆಡಳಿತಕ್ಕೆ ಬಂದಮೇಲೆ ಅಭಿವೃದ್ಧಿ ಶೂನ್ಯವಾಗಿದೆ ಅಂಗನವಾಡಿ ಕಾರ್ಯಕರ್ತರಿಗೆ ವೇತನ ನೀಡಲು ಪರದಾಡುತ್ತಿದೆ ಇಲಾಖೆಯಲ್ಲಿ ಹಣವಿಲ್ಲದೆ ವಿದ್ಯುತ್ ಬಿಲ್ ಬಾಕಿ ಇರಿಸಿ ಉಚಿತಗಳ ಸರಮಾಲೆಯಿಂದ ಕಾಂಗ್ರೆಸ್ ಸರಕಾರವು ದಿವಾಳಿಯಾಗಿದೆ ಎಂದರು.
ಗೋಷ್ಠಿಯಲ್ಲಿ ಗೇರು ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಮಣಿರಾಜ ಶೆಟ್ಟಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಮಹಾವೀರ ಹೆಗ್ಡೆ, ಬಿಜೆಪಿ ವಕ್ತಾರ ರವೀಂದ್ರ ಮೈಲಿ
previous post