ಕಾರ್ಕಳ: ಶಾಲಾ ಶಿಕ್ಷಣ ಇಲಾಖೆ, ಕರ್ನಾಟಕ ಸರಕಾರ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಕಾರ್ಕಳ, ಸಂತ ಮರಿಯ ಗೊರಟ್ಟಿ ಆಂಗ್ಲಮಾಧ್ಯಮ ಪ್ರೌಢಶಾಲೆ, ಹಿರ್ಗಾನ ಇವರ ಆಶ್ರಯದಲ್ಲಿ ಕಾರ್ಕಳ ತಾಲೂಕು ಕ್ರೀಡಾಂಗಣದಲ್ಲಿ ನಡೆದ ಕಾರ್ಕಳ ವಲಯ ಮಟ್ಟದ ಪ್ರಾಥಮಿಕ ಶಾಲಾ ಕ್ರೀಡಾಕೂಟದಲ್ಲಿ ಕ್ರೈಸ್ಟ್‌ಕಿಂಗ್ ಆಂಗ್ಲಮಾಧ್ಯಮ ಪ್ರಾಥಮಿಕ ಶಾಲೆಯು ಈ ಬಾರಿಯ ಸಮಗ್ರ ಛಾಂಪಿಯನ್ ಪ್ರಶಸ್ತಿ ಪಡೆದುಕೊಂಡಿದೆ.
28 ಶಾಲೆಯ 350 ವಿದ್ಯಾರ್ಥಿಗಳು ಭಾಗವಹಿಸಿದ್ದು ಇದರಲ್ಲಿ ಕ್ರೈಸ್ಟ್‌ಕಿಂಗ್ ವಿದ್ಯಾರ್ಥಿಗಳ ಅಮೋಘ ಸಾಧನೆಯಿಂದ ಛಾಂಪಿಯನ್ ಆಗಿ ಹೊರಹೊಮ್ಮಿದೆ.
ಏಳನೇ ತರಗತಿಯ ವಿದ್ಯಾರ್ಥಿಗಳಾದ ಫಿಯೋನಾ ಪಿಂಟೊ ಚಕ್ರ ಎಸೆತ ಪ್ರಥಮ, ಗುಂಡೆಸೆತ ದ್ವಿತೀಯ, ಪಾವನಿ 400 ಮೀ ಓಟ ಪ್ರಥಮ, 600 ಮೀ ದ್ವಿತೀಯ, ಅಭೀಷ್ 400 ಮೀ ಪ್ರಥಮ, 80ಮೀ ಹರ್ಡಲ್ಸ್ ಪ್ರಥಮ, ಸಂಮ್ಯುಗ್ ಗುಂಡೆಸೆತ ತೃತೀಯ, ಹಿಝಾ ಎತ್ತರ ಜಿಗಿತ ದ್ವಿತೀಯ, 80 ಮೀ ಹರ್ಡಲ್ಸ್ ತೃತೀಯ, ಆಶ್ನಿ 100ಮೀ ಓಟ ತೃತೀಯ, ಹೈಝಾ 80ಮೀ ಹರ್ಡಲ್ಸ್ ದ್ವಿತೀಯ, ಬಾಲಕರ ವಿಭಾಗದ 4*100 ರಿಲೇ ಪ್ರಥಮ, ಬಾಲಕಿಯರ ವಿಭಾಗದ 4*100 ರಿಲೇ ತೃತೀಯ ಸ್ಥಾನ ಪಡೆದುಕೊಳ್ಳುವುದರ ಮೂಲಕ ಸಂಸ್ಥೆಯು ಸಮಗ್ರ ಛಾಂಪಿಯನ್ ಆಗಿ ಹೊರಹೊಮ್ಮಿತು.
ಬಾಲಕಿಯರ ತಂಡವು ಒಟ್ಟಾರೆ ತಂಡ ಪ್ರಶಸ್ತಿ ಪಡೆದುಕೊಂಡರೆ ಏಳನೇ ತರಗತಿಯ ಫಿಯೋನಾ ಪಿಂಟೊ ವೈಯಕ್ತಿಕ ಛಾಂಪಿಯನ್ ಆಗಿ ಹೊರಹೊಮ್ಮಿದ್ದಾಳೆ. ಸಂಸ್ಥೆಯ ದೈಹಿಕ ಶಿಕ್ಷಣ ಶಿಕ್ಷಕರಾದ ಪ್ರಕಾಶ್ ನಾಯ್ಕ್ ಹಾಗೂ ಕು.ಲಾವಣ್ಯ ಶೆಟ್ಟಿ ವಿದ್ಯಾರ್ಥಿಗಳನ್ನು ತರಬೇತುಗೊಳಿಸಿದ್ದರು.