ಕಾರ್ಕಳ

ಪರಶುರಾಮ ಪ್ರತಿಮೆಯ ಸೊಂಟದ ಮೇಲ್ಬಾಗದ ಕಳ್ಳತನವೇ ಉಳಿದ ಬಿಡಿಭಾಗಗಳ ಕಳ್ಳತನಕ್ಕೆ ಪ್ರೇರಣೆ: ಈ ದುಸ್ಥಿತಿಗೆ ಶಾಸಕ ಸುನೀಲ್ ಕುಮಾರ್ ನೇರ ಹೊಣೆ- ಉದಯ ಶೆಟ್ಟಿ ಮುನಿಯಾಲು

ಕಾರ್ಕಳದ ಪರಶುರಾಮ ಥೀಮ್ ಪಾರ್ಕಿನಲ್ಲಿ ಎರಡನೆಯ ಬಾರಿ ಕಳ್ಳತನ ನಡೆದಿದೆ.

ಮೊದಲನೇ ಬಾರಿ ಕಳ್ಳತನ ನಡೆದಿದ್ದು: ಕಂಚಿನ ಬದಲು ಪರಶುರಾಮರ ಪೈಬರ್ ಮಿಶ್ರಿತ ನಕಲಿ ಪ್ರತಿಮೆ ನಿರ್ಮಿಸಿ ಅದರಲ್ಲಿಯೂ ಪ್ರತಿಮೆಯ ಸೊಂಟದ ಮೇಲಿನ ಭಾಗವನ್ನು ಸುನೀಲ್ ಕುಮಾರ್ ನಿರ್ದೇಶನದಂತೆ ಕಳ್ಳತನ ನಡೆಸಲಾಗಿತ್ತು.

ಎರಡನೇ ಬಾರಿ ಕಳ್ಳತನ: ಥೀಮ್ ಪಾರ್ಕಿನಲ್ಲಿ ಉಳಿದ ಬಿಡಿ ಭಾಗಗಳನ್ನು ಈಗ ಕಳ್ಳರು ಕಳ್ಳತನ ನಡೆಸಿದ್ದಾರೆ ಎಂದು ಕಾರ್ಕಳ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ನಾಯಕರು ಉದಯ ಶೆಟ್ಟಿ ಮುನಿಯಾಲು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೊದಲನೇ ಬಾರಿ ಪರಶುರಾಮ ಪ್ರತಿಮೆಯ ಸೊಂಟದ ಮೇಲಿನ ಭಾಗ ಕಳ್ಳತನವಾದಾಗ ಸುನೀಲ್ ಕುಮಾರ್ ಪ್ರತಿಕ್ರಿಯೆ ನೀಡದೇ ಮೌನವಾಗಿದ್ದಿದ್ದು ಯಾಕೆ..? ಆ ಕಳ್ಳತನ ಸುನೀಲ್ ಕುಮಾರ್ ನಿರ್ದೇಶನದಂತೆ ನಡೆದ ಕಾರಣ ಆಗ ಮೌನವಾಗಿದ್ದರು ಎಂದುಕೊಳ್ಳಬೇಕಾಗುತ್ತದೆ.

ಕೋಟ್ಯಾಂತರ ರೂಪಾಯಿ ಸರ್ಕಾರದ ಅನುದಾನದವನ್ನು ಬಳಿಸಿ ಕಂಚಿನ ಪ್ರತಿಮೆಯ ಬದಲು ನಕಲಿ ಪರಶುರಾಮ ಪ್ರತಿಮೆ ನಿರ್ಮಿಸಿ ಜನತೆಗೆ ಮೋಸ ಮಾಡಿದಾಗಲೇ ಪರಶುರಾಮ ಥೀಮ್ ಪಾರ್ಕಿನ ಮೂಲಕ ತೆರೆದುಕೊಳ್ಳಬೇಕಾಗಿದ್ದ ಸುಂದರ ಪ್ರವಾಸೋದ್ಯಮದ ಯೋಜನೆ ನುಚ್ಚುನೂರಾಗಿತ್ತು.

ಯೋಜನೆಯ ಆರಂಭದಲ್ಲೇ ಪರಶುರಾಮ ಪ್ರತಿಮೆ ನಿರ್ಮಾಣದ ಕಾರ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸುತ್ತಿದ್ದರೆ ಇಂದು ಇಂತಾ ದುರ್ಗತಿ ಬರುತ್ತಿರಲಿಲ್ಲ. ಕಂಚಿನ ಪ್ರತಿಮೆ ಎಂದು ಜನರನ್ನು, ಸರ್ಕಾರವನ್ನು, ಧಾರ್ಮಿಕ ನಂಬಿಕೆಯನ್ನು, ಆಸ್ತಿಕ ಬಂಧುಗಳನ್ನು ನಂಬಿಸಿ ಮೋಸ ಮಾಡಿದ ಸುನಿಲ್ ಕುಮಾರ್ ಅವರಿಂದಾಗಿ ಇಂದು ಪರಶುರಾಮ ಥೀಮ್ ಪಾರ್ಕ್, ಗೆ ಕಳ್ಳಕಾಕರು ನುಗ್ಗುವಂತಾಗಿದೆ. ಶಾಸಕ ಸುನೀಲ್ ಕುಮಾರ್ ಮಾಡಿದ ಮೋಸದಿಂದಾಗಿ ಈ ಕಳ್ಳತನ ನಡೆದಿದ್ದು ಕಾರ್ಕಳದ ಜನತೆಯ ಕನಸಿನ ಪ್ರವಾಸಿ ತಾಣವಾಗಬೇಕಿದ್ದ ಪರಶುರಾಮ ಥೀಮ್ ಪಾರ್ಕ್‌ಗೆ ಇಂತಾ ದುರ್ಗತಿ ಬರಲು ಕಾರಣವಾದ ಶಾಸಕ ಸುನೀಲ್ ಕುಮಾರ್ ತಕ್ಷಣ ಜನತೆಯ ಕ್ಷಮೆ ಯಾಚಿಸಬೇಕು.

ಒಬ್ಬ ಸಮಯ ಸಾಧಕ, ಸ್ವಾರ್ಥಿ, ಚುನಾವಣೆಗಾಗಿ ಹಿಂದು ಧರ್ಮಕ್ಕೂ, ಜನರಿಗೂ ಮೋಸ ಮಾಡುವ ನೀಚ ಮನಸ್ಥಿತಿಯ ಸುನೀಲ್ ಕುಮಾರ್‌ನಂತವರಿಂದಾಗಿ ಇಂದು ಪ್ರವಾಸೋದ್ಯಮದ ಪ್ರಮುಖ ಆಕರ್ಷಣೀಯ ಬಿಂದುವಾಗಬೇಕಿದ್ದ ಕಾರ್ಕಳ ವಿವಾದದ ತಾಣವಾಗಿರುವುದು ಅತ್ಯಂತ ಬೇಸರದ ಸಂಗತಿ. ಈ ಕೂಡಲೇ ಸರ್ಕಾರದ ಸ್ವತ್ತನ್ನು ಕಳವುಗೈದ ದುಷ್ಕರ್ಮಿಗಳನ್ನು ಬಂಧಿಸಬೇಕು. ಸರ್ಕಾರದ ಸ್ವತ್ತನ್ನು ರಕ್ಷಿಸಲು ಸೂಕ್ತ ಭದ್ರತೆ ಒದಗಿಸಬೇಕೆಂದು ಪೋಲಿಸ್ ಇಲಾಖೆಗೆ ಆಗ್ರಹಿಸುತ್ತಿದ್ದೇನೆ.

Related posts

ಅಂತರಾಷ್ಟ್ರೀಯ ಕರಾಟೆ ಸ್ಪರ್ಧೆಯಲ್ಲಿ ಬೋಳ ಪ್ರಾಪ್ತಿ ಎಸ್. ಪೂಜಾರಿಗೆ ಗ್ರ್ಯಾಂಡ್ ಚಾಂಪಿಯನ್ ಶಿಪ್ ಪ್ರಶಸ್ತಿ

Madhyama Bimba

ನಾಗರಾಜ್ ಕಾಡುಹೊಳೆ ಅವರಿಗೆ ಕೋಸ್ಟಲ್ ಕಾಮಿಡಿ ಸ್ಟಾರ್ ೨ನೇ ರನ್ನರ್ ಆಪ್ ಪ್ರಶಸ್ತಿ

Madhyama Bimba

ಅಂತರಾಷ್ಟ್ರೀಯ ಟೇಕ್ವಾಂಡೋ ಚಾಂಪಿಯನ್ ಶಿಪ್ ನಲ್ಲಿ  ಮಿಂಚಿದ ಹಿರ್ಗಾನದ ಅದಿತಿ ಶರ್ಮಾ ಹಾಗೂ ರತಿ ಶರ್ಮಾ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More