ಕಾರ್ಕಳ: ಉದ್ಯಾವರದ ಪ್ರಸಾದ್ ವಿ ಎಂಬವರ ತಂದೆಯ ಮೇಲೆ ಸ್ಕೂಟಿಯೊಂದು ಡಿಕ್ಕಿ ಹೊಡೆದಿದೆ.
ದಿನಾಂಕ 05.10.2024 ರಂದು ಕಾರ್ಕಳ ಕೆದಿಂಜೆ ಗ್ರಾಮದ ರಕ್ತೇಶ್ವರಿ ದೇವಸ್ಥಾನದಲ್ಲಿ ಪೂಜಾ ಕಾರ್ಯಕ್ರಮ ಇದ್ದುದರಿಂದ ತನ್ನ ತಂದೆಯೊಂದಿಗೆ ಕಾರಿನಲ್ಲಿ ಬಂದು ಕಾರನ್ನು ರಸ್ತೆಯ ಎಡ ಬದಿಯಲ್ಲಿ ನಿಲ್ಲಿಸಿ ಕಾರ್ಕಳ ಕಡೆಯಿಂದ ಪಡುಬಿದ್ರಿ ಕಡೆಗೆ ದೇವಸ್ಥಾನಕ್ಕೆ ನಡೆದುಕೊಂಡು ಹೋಗುತ್ತಿರುವಾಗ ಕಾರ್ಕಳ ಕಡೆಯಿಂದ ಪಡುಬಿದ್ರಿ ಕಡೆಗೆ ಹೊಂಡಾ ಅಕ್ಟೀವಾ ಸ್ಕೂಟಿ ಸವಾರ ಕಿಶನ್ ಎಂಬವರು ತನ್ನ ಸ್ಕೂಟಿಯನ್ನು ಪ್ರಸಾದ್‌ರವರ ತಂದೆ ವಿಠ್ಠಲ ಇವರಿಗೆ ಹಿಂದಿನಿಂದ ಡಿಕ್ಕಿಹೊಡೆದ ಪರಿಣಾಮ ವಿಠಲರ ಎಡಕೈ ಮತ್ತು ಎಡಕಾಲಿಗೆ ರಕ್ತ ಗಾಯವಾಗಿದೆ.
ಅಲ್ಲದೆ ಅಪಘಾತ ಪಡಿಸಿದ ಸ್ಕೂಟಿ ಸವಾರನ ಮುಖ, ತಲೆ, ಕಿವಿಯ ಬಾಗಕ್ಕೆ ರಕ್ತಗಾಯವಾಗಿದ್ದು ಚಿಕಿತ್ಸೆ ಬಗ್ಗೆ ಕಾರ್ಕಳದ ಟಿ. ಎಂ. ಎ. ಪೈ ರೋಟರಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿದ್ದಾರೆ.
ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ಯಲ್ಲಿ ಪ್ರಕರಣ ದಾಖಲಾಗಿರುತ್ತದೆ.