ಕಾರ್ಕಳ

ಕುಕ್ಕುಂದೂರು ಫ್ರೆಂಡ್ಸ್ ಸದಸ್ಯರಿಂದ ಶ್ರೀ ದುರ್ಗಾದೇವಿ ಸರ್ಕಾರಿ ಅನುದಾನಿತ ಶಾಲೆ ಸ್ವಚ್ಛತೆ

ಕುಕ್ಕುಂದೂರು: ಬೇಸಿಗೆ ರಜೆಯ ನಂತರ ಜೂ.೦೧ ರಿಂದ ಈ ಸಾಲಿನ ಶೈಕ್ಷಣಿಕ ವರ್ಷಾರಂಭಗೊಳ್ಳಲಿದ್ದು, ರಜೆಯಿಂದಾಗಿ ಶಾಲೆಯಲ್ಲಿ ಯಾವುದೇ ಚಟುವಟಿಕೆಗಳು ನಡೆಯದೆ ಇದ್ದುದರಿಂದ ಶಾಲೆಗೆ ಆಗಮಿಸುವ ಮಕ್ಕಳು ಧೂಳು, ಕಸಕಡ್ಡಿಗಳಿಲ್ಲದ ಸ್ವಚ್ಛಂದವಾದ ತರಗತಿ ಕೊಠಡಿಗಳಲ್ಲಿ ಕಲಿಕೆಯನ್ನು ಆರಂಭಿಸುವ ಸಲುವಾಗಿ ಕುಕ್ಕುಂದೂರು ಫ್ರೆಂಡ್ಸ್ (ರಿ.) ಕುಕ್ಕುಂದೂರು – ಮುಂಬೈ ಸಂಘದ ಸದಸ್ಯರು ಕುಕ್ಕುಂದೂರು ಶ್ರೀ ದುರ್ಗಾದೇವಿ ಸರ್ಕಾರಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಎಲ್ಲಾ ತರಗತಿ ಕೊಠಡಿಗಳನ್ನು ಹಾಗೂ ಹೊರ ಆವರಣವನ್ನು ಸ್ವಚ್ಛಗೊಳಿಸಿದರು.

ಶಾಲಾ ಮುಖ್ಯೋಪಾಧ್ಯಾಯನಿ ಶ್ರೀಮತಿ ಸುಜಾತ ಎನ್. ರಾಜ್, ಕುಕ್ಕುಂದೂರು ಫ್ರೆಂಡ್ಸ್ ಅಧ್ಯಕ್ಷರಾದ ಶ್ರೀಮತಿ ಪುಷ್ಪಾ ಪ್ರಭು, ಉಪಾಧ್ಯಕ್ಷರಾದ ಶ್ರೀಮತಿ ಲಲಿತಾ ಶೆಟ್ಟಿ ಹಾಗೂ ಶಾಲೆಯ ಶಿಕ್ಷಕರಾದ ರಮೇಶ್ ನಾಯಕ್ ಅವರ ಮಾರ್ಗದರ್ಶನದಲ್ಲಿ ಶಾಲೆಯನ್ನು ಸ್ವಚ್ಛಗೊಳಿಸಲಾಯಿತು.

Related posts

ವಿಬಿಎಸ್ ಸಭಾ: ವಿದ್ಯಾರ್ಥಿವೇತನ ಮತ್ತು ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ

Madhyama Bimba

ನಗರ, ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ಹುದ್ದೆ : ಅರ್ಜಿ ಆಹ್ವಾನ

Madhyama Bimba

ಹೆಬ್ರಿ ಎಸ್.ಆರ್ ವಿದ್ಯಾರ್ಥಿಗಳು ತಯಾರಿಸಿದ ವಿಜ್ಞಾನ ಮಾದರಿಗೆ ಬಹುಮಾನ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More