Blog

ಬೋಳ ಸಹಕಾರ ಸಂಘದ ಸಾಧನೆ

*ಒಂದೇ ತಿಂಗಳಲ್ಲಿ 3 ಕೋಟಿ ಡೆಪಾಸಿಟ್ ಪಡೆದ ಹೆಗ್ಗಳಿಕೆಗೆ ಪಾತ್ರವಾದ ಬೋಳ ವ್ಯವಸಾಯ ಸೇವಾ ಸಹಕಾರ ಸಂಘ*

*ಗ್ರಾಹಕ ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿದ ಬೋಳ ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷ ಬೋಳ ಸದಾಶಿವ ಶೆಟ್ಟಿ*

ಬೋಳ ವ್ಯವಸಾಯ ಸೇವಾ ಸಹಕಾರಿ ಸಂಘವು ಒಂದೇ ತಿಂಗಳಲ್ಲಿ ರೂ. 3 ಕೋಟಿ ಡಿಪಾಸಿಟ್ ಹೊಂದುವ ಮೂಲಕ ಗ್ರಾಹಕರ ವಿಶ್ವಾಸ ಪಡೆದ ಗ್ರಾಮೀಣ ಸಹಕಾರ ಸಂಘ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಈ ಸಹಕಾರ ಸಂಘವು ಜುಲೈ 15 ರಿಂದ ಆಗಸ್ಟ್ 15 ರವರೆಗೆ ಠೇವಣಿ ಮಾಸ ಆಚರಣೆ ಮಾಡಿತ್ತು.

ಈ ಠೇವಣಿ ಮಾಸ ಆಚರಣೆಯ ಮೊದಲು 35 ಕೋಟಿ ಡೆಪಾಸಿಟ್ ನ್ನು ಹೊಂದಿತ್ತು. ಈ ಸಂಘವು ಸುಮಾರು 69 ವರ್ಷಗಳಿಂದ ವ್ಯವಹಾರ ಮಾಡುತ್ತ ಬಂದಿದೆ.

ಠೇವಣಿ ಮಾಸ ಆಚರಣೆಯ ಒಂದೇ ತಿಂಗಳಲ್ಲಿ ರೂ 3 ಕೋಟಿಯಷ್ಟು ದೊಡ್ಡ ಮೊತ್ತದ ಡಿಪಾಸಿಟ್ ನ್ನು ಈ ಸಂಘವು ಪಡೆಯುವಲ್ಲಿ ಯಶಸ್ಸು ಕಂಡಿದೆ.

2023 – 24 ನೇ ಸಾಲಿನಲ್ಲಿ 235 ಕೋಟಿ 51 ಲಕ್ಷ ವ್ಯವಹಾರ ಮಾಡಿ ಜಿಲ್ಲೆಯಲ್ಲಿ ಸಾಧನೆ ಮಾಡಿದ ಸಹಕಾರಿ ಸಂಘ ಎಂಬ ಹೆಗ್ಗಳಿಕೆಗೆ ಈ ಸಹಕಾರ ಸಂಘವು ಪಾತ್ರವಾಗಿದೆ.

ಈ ಸಹಕಾರ ಸಂಘದ ಅಧ್ಯಕ್ಷರಾದ ಬೋಳ ಸದಾಶಿವ ಶೆಟ್ಟಿಯವರ ನೇತೃತ್ವದಲ್ಲಿ ಈ ಸಹಕಾರ ಸಂಘವು ಯಶಸ್ಸಿನತ್ತ ಸಾಗುತ್ತಲಿದೆ.

ಈಗಾಗಲೇ ಈ ಸಹಕಾರ ಸಂಘವು ಹಲವಾರು ಶಾಖೆಗಳ ಮೂಲಕ ಜನರಿಗೆ ಸಹಕಾರಿ ಸೇವೆಯನ್ನು ನೀಡುತ್ತಾ ಬರುತ್ತಿದೆ.

ಮುಖ್ಯ ಕಾರ್ಯ ನಿರ್ವಹಣೆ ಅಧಿಕಾರಿ ದೀಪ ಶೆಟ್ಟಿ, ನಿರ್ದೇಶಕರು ಹಾಗೂ ಸಿಬ್ಬಂದಿಗಳ ಸಹಕಾರದಿಂದ ಸಾಧನೆ ಆಗುವ ನಿಟ್ಟಿನಲ್ಲಿ ಶ್ರಮಿಸಿದ್ದಾರೆ

Related posts

ಎರಡು ಸೇತುವೆ ನಿರ್ಮಾಣಕ್ಕೆ ರೂ 5 ಕೋಟಿ ಮಂಜೂರು

Madhyama Bimba

ಕಾರ್ಕಳದಲ್ಲಿ ಅಕ್ರಮ ಬಾಂಗ್ಲಾ ವಲಸಿಗರು

Madhyama Bimba

ನಿಟ್ಟೆಯಲ್ಲಿ ಪೊಲೀಸ್ ದಾಳಿ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More