Blog

ಸಂಕಷ್ಟದಲ್ಲಿ ಬೆಳೆಗಾರರು

ಭಾರಿ ಮಳೆ : ಉದುರುತ್ತಿರುವ ಅಡಿಕೆ : ಸಂಕಷ್ಟದಲ್ಲಿ ಅಡಿಕೆ ಬೆಳೆಗಾರರು !
ತೆಂಗು ಬೆಳೆಗೂ ಸಮಸ್ಯೆ : ಉದುರುತ್ತಿರುವ ಎಳತು ಬೊಂಡಗಳು.

ಮಾಧ್ಯಮಬಿಂಬ ವಿಶೇಷ ವರದಿ




ಮುನಿಯಾಲು :  ಭಾರಿ ಮಳೆಯಿಂದಾಗಿ ಬಹುತೇಕ ಅಡಿಕೆ ತೋಟಗಳಲ್ಲಿ ಅಡಿಕೆಗಳು ಉದುರಿದೆ. ಉದಿರಿರುವ ಅಡಿಕೆಗಳನ್ನು  ರೈತರು ತೋಟದಲ್ಲಿ ಬಿಟ್ಟಿರುವುದರಿಂದ ವ್ಯಾಪಕವಾಗಿ ಕೊಳೆ ರೋಗ ಇಡೀ ತೋಟಕ್ಕೆ ವ್ಯಾಪಿಸಿ ಮತ್ತಷ್ಟು ಸಮಸ್ಯೆ ಜಾಸ್ತಿಯಾಗಿದೆ ಎನ್ನಲಾಗುತ್ತಿದೆ.


ಹೆಬ್ರಿ ತಾಲ್ಲೂಕಿನಾದ್ಯಂತ ಮಳೆಯ ತೀವ್ರತೆ ಹೆಚ್ಚಾಗಿದೆ. ಬಹುತೇಕ ರೈತರ ತೋಟದಲ್ಲಿ ಅಡಿಕೆ ಉದುರಿ ಕೊಳೆಯುತ್ತಿದೆ. ಕೆಲವರು ತೋಟದಿಂದ ಬೇರ್ಪಡಿಸಿದರೆ, ಇನ್ನು ಕೆಲವರು ಅದನ್ನು ಬೇರ್ಪಡಿಸದೆ  ಬಿಟ್ಟಿದ್ದಾರೆ. ಇದರಿಂದಾಗಿ ಸಮಸ್ಯೆ ಉಂಟಾಗುತ್ತಿದೆ. ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಏನು ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಅಡಿಕೆ ಬೆಳೆಗಾರರು ನೋವು ವ್ಯಕ್ತಪಡಿಸುತ್ತಿದ್ದಾರೆ. ಸಾಮಾನ್ಯವಾಗಿ ಅಡಿಕೆಗೆ 2 ಭಾರಿ ಔಷಧಿಯನ್ನು ಸಿಂಪಡಿಸುವುದು ವಾಡಿಕೆಯಾಗಿದೆ. ಈ ಸಲ ೩ ಸಲ ಸಿಂಪಡಿಸಿದರೂ ಅಡಿಕೆ ಉದುರುತ್ತಿದೆ. ಹಾಗಾಗಿ ಈ ಸಲ ಅಡಿಕೆಯಲ್ಲಿ ಇಳುವರಿ ಇಲ್ಲದೆ ಸಂಕಷ್ಟ ಎದುರಿಸಬೇಕಾಗಿದೆ ಎಂದು ಪ್ರಗತಿಪರ ಕೃಷಿಕ ಮುನಿಯಾಲು ಗೋಪಾಲ ಕುಲಾಲ್‌ ಅಡಿಕೆ ಬೆಳೆಗಾರರ ಸಂಕಷ್ಟದ ಬಗ್ಗೆ ಮಾಹಿತಿ ನೀಡಿದರು.


ಎಲ್ಲೆಡೆಯೂ ಈ ಸಲ ಅಡಿಕೆ ಮಾತ್ರವಲ್ಲದೆ ತೆಂಗು ಬೆಳೆಗೂ ಸಮಸ್ಯೆಯಾಗುತ್ತಿದೆ. ಸಣ್ಣ ಎಳತು ಬೊಂಡಗಳು ಕೂಡ ಉದುರುತ್ತಿದೆ ಎಂದು ಗೋಪಾಲ ಕುಲಾಲ್‌ ಹೇಳುತ್ತಾರೆ.


ಮಣ್ಣು ಪರೀಕ್ಷೆ ಅಗತ್ಯ : ಆಗಸ್ಟ್ ತಿಂಗಳಿನಲ್ಲಿ ಕೊಳೆ ರೋಗವನ್ನು ನಿಯಂತ್ರಣಕ್ಕೆ ತರಬೇಕಾದರೆ ಅತಿ ಅಗತ್ಯವಾಗಿ ಮಣ್ಣು ಪರೀಕ್ಷೆ ಮಾಡಬೇಕಾಗಿದೆ. ಅಧಿಕವಾಗಿ ಸಾರಜನಕ ಹಾಕಿರುವುದು ಕೊಳೆರೋಗಕ್ಕೆ ಕಾರಣವಾಗುತ್ತದೆ. ಪೊಟೇಶ್ ಕಡಿಮೆಯಾಗಿ, ಸಸಾರಜನಕ ಹೆಚ್ಚಾಗಿ ರೋಗ ನಿರೋಧಕ ಶಕ್ತಿ ಕಡಿಮೆ ಆಗಿ ಕೊಳೆರೋಗ ಬರುತ್ತದೆ.


ಬಿಸಿಲು ಮಳೆಯಿಂದ ಸಮಸ್ಯೆ : ಕಳೆದ ಕೆಲವು ಸಮಯದಿಂದ ಬಿಸಿಲು ಮಳೆ ಕೂಡಿದ ವಾತಾವರಣ ಇದೆ. ಪ್ರಮುಖವಾಗಿ ಕೊಳೆ ರೋಗ ಬರಲು ಇದು ಕಾರಣವಾಗಿದೆ. ಕಳೆದ ವರ್ಷ ಕೊಳೆ ಬಂದಂತಹ ಉಳುಕೆಗಳನ್ನು ತೆಗೆದು ಸುಟ್ಟು ಹಾಕಬೇಕು. ತೋಟದಲ್ಲಿ ಇಟ್ಟರೆ ಅದು ಕೂಡ ವ್ಯಾಪಕವಾಗಿ ರೋಗ ಹರಡಲು  ಕಾರಣವಾಗುತ್ತದೆ.


ವ್ಯಾಪಕವಾಗಿ ಉದುರಿದ  ಅಡಿಕೆ : ಅಡಿಕೆಗಳು ತೋಟಗಳಲ್ಲಿ  ಭಾರಿ ಮಳೆಯಿಂದ ಉದುರುವಿದೆ. ಕೆಲವು ಕಡೆ  ಗೊನೆಯಲ್ಲಿ ಏನು ಉಳಿದಿಲ್ಲ. ಕೆಲವರಿಗೆ ಇನ್ನೂ  ದ್ರಾವಣ ಸಿಂಪಡಿಸಲು  ಸಾಧ್ಯವಾಗಿಲ್ಲ.  ವ್ಯಾಪಕವಾಗಿ ಉದುರಿರುವ ಅಡಿಕೆ ನೋಡಿ ರೈತರು ಆತಂಕದಲ್ಲಿದ್ದಾರೆ.
…………
ಹವಾಮಾನ ಕೊಳೆ ರೋಗ ಹರಡುವಿಕೆ ವ್ಯಾಪಕವಾಗಿದೆ  ರೈತರು ಬಿದ್ದ ಕಾಯಿಗಳನ್ನು ಸಂಗ್ರಹಿಸಿ ತೋಟದಿಂದ ಹೊರಕ್ಕೆ ಸಾಗಿಸಬೇಕು ಹಾಗೂ ಬೋರ್ಡೋ ದ್ರಾವಣ ಸಿಂಪರಣೆ ಕೈಗೊಳ್ಳಬೇಕು.
ಆಗಸ್ಟ್ ತಿಂಗಳಲ್ಲಿ ಮಣ್ಣು ಪರೀಕ್ಷೆ ಆಧಾರದಲ್ಲಿ ಸುಣ್ಣ ನೀಡಿ 15 – 20 ತಿಂಗಳ ನಂತರ ಶಿಫಾರಸ್ಸು ಮಾಡಿದ ರಸಗೊಬ್ಬರ ನೀಡಬೇಕು. ಬೋರ್ಡೋ ದ್ರಾವಣಕ್ಕೆ ಪರ್ಯಾಯವಾಗಿ ಮಂಡಿಪ್ರೊಪಿಮಿಡ್
ಶಿಲೇಂದ್ರ ನಾಶಕವನ್ನು ಬಳಸುವ ಬಗ್ಗೆ ಸಂಶೋಧನೆಗಳು ನಡೆಯುತ್ತಿದ್ದು ಹೆಚ್ಚು ಕೊಳೆ ಭಾದೆ ಇರುವಂತ ತೋಟಗಳಲ್ಲಿ ಬಳಸಬಹುದು. ಸಮಗ್ರವಾಗಿ ಕ್ರಮ ಕೈಗೊಂಡಿದ್ದರೆ ಇಂತಹ ಸಮಸ್ಯೆಗಳು ಬರುತ್ತಿರಲಿಲ್ಲ.
– ಶ್ರೀನಿವಾಸ್ ಬಿ ವಿ, ಹಿರಿಯ ನಿರ್ದೇಶಕರು, ತೋಟಗಾರಿಕಾ ಇಲಾಖೆ ಕಾರ್ಕಳ. 
……….
ಸಾಲ ಕಟ್ಟುವ ಚಿಂತಿಯಲ್ಲಿ ರೈತರು.
ಒಂದು ಕಡೆ ಕೃಷಿಗೆ ಕಾಡುಪ್ರಾಣಿ, ಮಂಗಗಳ ಕಾಟ. ಈ ಸಲ ಅಡಿಕೆ ಬೆಳೆಯಲ್ಲಿ ರೈತರಿಗೆ ಏನೂ ಆದಾಯ ಕೂಡ ಸಿಗಲು ಸಾಧ್ಯವಿಲ್ಲ. ಅಷ್ಟರ ಮಟ್ಟಿಗೆ ಅಡಿಕೆ ಉದುರಿದೆ. ಭಾರಿ ಮಳೆಯಿಂದಾಗಿ ಭತ್ತದ ಕೃಷಿಯೂ ಹಾನಿಯಾಗಿ ನಷ್ಟವಾಗಿದೆ. ರೈತರಿಗೆ ಬ್ಯಾಂಕ್‌ ಸಾಲಗಳು ಹೊರೆಯಾಗುತ್ತಿದೆ. ಈ ಸಲ ಅಕಾಲಿಕ ಮಳೆಯಿಂದಾಗಿ ರೈತರು ತೀವೃ ಸಂಕಷ್ಟ ಎದುರಿಸುತ್ತಿದ್ದು ಸಂಪೂರ್ಣ ಸಾಲ ಮನ್ನಾ ಮಾಡಬೇಕು. ಮುಂದಿನ 1 ವರ್ಷ ಬಡ್ಡಿ ರಹಿತವಾಗಿ ಸಾಲವನ್ನು ಮುಂದುವರಿಸಬೇಕು.


– ಗೋಪಾಲ ಕುಲಾಲ್‌ ಮುನಿಯಾಲು.
ಪ್ರಗತಿಪರ ಕೃಷಿಕರು.
ಅಧ್ಯಕ್ಷರು. ಕರ್ನಾಟಕ ರಾಜ್ಯ ರೈತ ಸಂಘ ಉಡುಪಿ ಜಿಲ್ಲಾ ಘಟಕ.

Related posts

ಕಾರ್ಕಳ ಪತ್ತೊಂಜಿಕಟ್ಟೆ ಶ್ರೀ ದತ್ತಾತ್ರೇಯಾ ಮೂಕಾಂಬಿಕಾ ದೇವಸ್ಥಾನದಲ್ಲಿ ನವರಾತ್ರಿ ಪೂಜೆ

Madhyama Bimba

ರಾಷ್ಟ್ರ ಮಟ್ಟಕ್ಕೆ ಆಯ್ಕೆ ಆದ ವಿದ್ಯಾರ್ಥಿಗಳಿಗೆ ಮುನಿಯಾಲುನಲ್ಲಿ ಸ್ವಾಗತ

Madhyama Bimba

ಹೆಬ್ರಿ ಜೀರ್ಣೋದ್ದಾರಕ್ಕೆ ಭೂಮಿ ಪೂಜೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More