ಕಡಂದಲೆ :ಶ್ರೀ ಆದಿಶಕ್ತಿ ದೇವಸ್ಥಾನ (ರಿ.) ಕಡಂದಲೆ ಉಳುವೆಯ ಶ್ರೀ ಆದಿಶಕ್ತಿ ದೇವಿಯ ಸನ್ನಿಧಿಯಲ್ಲಿ ವರ್ಷಂಪ್ರತಿ ಜರಗುವ ನವರಾತ್ರಿ ಉತ್ಸವ ಸಂಭ್ರಮದಿಂದ ಸಂಪನ್ನಗೊಂಡಿತು. ವೇದಮೂರ್ತಿ ಕೆ.ಎನ್ ರಾಘವೇಂದ್ರ ಭಟ್ ಸಾರಥ್ಯದಲ್ಲಿ ದೇವಸ್ಥಾನದಲ್ಲಿ ಹತ್ತು ದಿನಗಳ ನವರಾತ್ರಿ ಪೂಜೆ ಯಶಸ್ವಿಯಾಗಿ ನಡೆಯಿತು.
ಹತ್ತು ದಿನಗಳ ಕಾರ್ಯಕ್ರಮವನ್ನು ಯಶಸ್ವಿಯಾಗಿ ನೆರವೇರಿಸಲು ಎಲ್ಲಾ ರೀತಿಯಿಂದ ಸಹಕರಿಸಿದ ಎಲ್ಲರಿಗೂ ದೇವಸ್ಥಾನದ ಮುಖ್ಯಸ್ಥರಾದ ಸುಂದರ ಗೌಡ ಉಳುವೆ ಕೃತಜ್ಞತೆ ಸಲ್ಲಿಸಿದರು. ಕೊಯಮತ್ತೂರು, ಮುಂಬೈ ಸಹಿತ ಎಲ್ಲಾ ಕಡೆಯಿಂದಲೂ ನೆರವು ಹರಿದುಬಂದಿದೆ. ಸುತ್ತಮುತ್ತಲಿನ ಗ್ರಾಮಗಳ ಗ್ರಾಮಸ್ಥರೂ ಉತ್ತಮ ರೀತಿಯಲ್ಲಿ ಸಹಕರಿಸಿದ್ದಾರೆ. ನಾವು ಅಂದುಕೊಂಡಂತೆ, ಅರ್ಚಕರು ಪ್ರಾರ್ಥಿಸಿದಂತೆ ಸಮಯ ಸಮಯಕ್ಕೆ ಸರಿಯಾಗಿ ಯಾವುದೇ ಅಡಚಣೆ ಇಲ್ಲದೆ ಕಾರ್ಯಕ್ರಮಗಳೂ ನಡೆದವು. ಅನ್ನಸಂತರ್ಪಣೆ ಕಾರ್ಯಕ್ರಮವೂ ಯಶಸ್ವಿಯಾಗಿ ನಡೆಯಿತು ಎಂದು ಅವರು ತಿಳಿಸಿದರು.
ನವರಾತ್ರಿ ಪ್ರಯುಕ್ತ ಎಲ್ಲಾ ದಿನ ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಭಜನಾ ಕಾರ್ಯಕ್ರಮಗಳು ನಡೆದವು. ವಿಶೇಷವಾಗಿ ರಂಗ ಪೂಜೆ ನಡೆಯಿತು. ನಿತ್ಯಪೂಜೆ, ಗಣಹೋಮ ನಡೆಯಲಿತು. ಚಂಡಿಕಾ ಯಾಗವೂ ನಡೆಯಿತು. ಶನಿವಾರ ಬೆಳಿಗ್ಗೆ 11.30ಕ್ಕೆ ಪೂರ್ಣಾಹುತಿ, ಮಹಾಪೂಜೆ, ಪ್ರಸಾದ ವಿತರಣೆ ನಡೆಯಿತು. ನಂತರ ಸಾರ್ವಜನಿಕ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಲಿತು. ರಾತ್ರಿ 6ಕ್ಕೆ ನಿತ್ಯಪೂಜೆ, ಆಯುಧಪೂಜೆ, ಮಹಾಪೂಜೆ ನಡೆಯಿತು. ಬಳಿಕ ಪ್ರಸಾದ ವಿತರಣೆ ನಡೆಯಿತು. ನಂತರ ಅನ್ನಸಂತರ್ಪಣೆ ನಡೆದು, ರಾತ್ರಿ 9 ಗಂಟೆಗೆ ಕಲಶ ವಿಸರ್ಜನೆ ನಡೆಯಿತು.