ಮೂಡುಬಿದಿರೆ

ಎಕ್ಸಲೆಂಟ್ ವಿದ್ಯಾಸಂಸ್ಥೆಯಲ್ಲಿ ಕ್ರಿಸ್ಮಸ್ ದಿನಾಚರಣೆ

ಶಾಂತಿ, ಪ್ರೀತಿ ಮತ್ತು ಕರುಣೆಯ ದಿವ್ಯ ಸಂದೇಶವನ್ನು ಜಗತ್ತಿಗೆ ಸಾರಿದ ಯೇಸು ಕ್ರಿಸ್ತನ ಜನ್ಮೋತ್ಸವವಾದ ಕ್ರಿಸ್ಮಸ್ ಹಬ್ಬವು,  ಮಾನವ ಹೃದಯಗಳಲ್ಲಿ ನಂಬಿಕೆ, ಸಹೋದರತ್ವ , ಹಂಚಿ ತಿನ್ನುವ ಗುಣ ಮತ್ತು ಮಾನವೀಯ ಮೌಲ್ಯಗಳ ದೀಪವನ್ನು ಬೆಳಗಿಸಲಿ. ಪರಸ್ಪರ ಗೌರವ, ಕ್ಷಮೆ ಮತ್ತು ಸಹಾನುಭೂತಿಯೊಂದಿಗೆ ಬದುಕುವ ಪ್ರೇರಣೆಯನ್ನು ಈ ಪವಿತ್ರ ದಿನವು ನಮಗೆ ನೀಡಲಿ. ಎಂದು ಖ್ಯಾತ ಉದ್ಯಮಿಗಳಾದ ಶರ್ಲಿನ್ ರೋಡ್ರಿಗಸ್  ಹೇಳಿದರು


ಅವರು ಮೂಡಬಿದ್ರೆ ಕಲ್ಲಬೆಟ್ಟು ಎಕ್ಸಲೆಂಟ್ ವಿದ್ಯಾಸಂಸ್ಥೆಯಲ್ಲಿ ನಡೆದ ಕ್ರಿಸ್ಮಸ್ ದಿನಾಚರಣೆ ಯ ಸಂಭ್ರಮದಲ್ಲಿ ಮಾತಾಡಿದರು. ಬಳಿಕ ಮಾತಾಡಿದ ಅವರು ಕ್ರಿಸ್ಮಸ್ ನಕ್ಷತ್ರವು – “ಬೆಳಕು ನೀನಾಗು, ದಾರಿ ನೀನೇ ಆಗು” ಎಂಬ ಮಾನವೀಯ ಸಂದೇಶವನ್ನು ಜಗತ್ತಿಗೆ ಸಾರುತ್ತದೆ. ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀಮತಿ ರಶ್ಮಿತಾ ಜೈನ್ ವಸುದೈವ ಕುಟುಂಬಕಂ ಎಂಬ ಭಾರತೀಯ ಮಹಾವಾಕ್ಯವು “ಪೂರ್ಣ ಭೂಮಿಯೇ ಒಂದು ಕುಟುಂಬ” ಎಂಬ ಉದಾತ್ತ ತತ್ತ್ವವನ್ನು ಸಾರುತ್ತದೆ. ಕ್ರಿಸ್ಮಸ್ ಹಬ್ಬವು ಯೇಸು ಕ್ರಿಸ್ತನ ಜನ್ಮಸಂದೇಶದ ಮೂಲಕ ಇದೇ ವಿಶ್ವಮಾನವೀಯತೆಯನ್ನು ಲೋಕಕ್ಕೆ ಪ್ರಕಟಿಸುತ್ತದೆ. ಈ ಎರಡರ ನಡುವೆ ಇರುವ ಸಮನ್ವಯತೆ ಅತ್ಯಂತ ಆಳವಾದುದು.ಕುಟುಂಬವೆಂದರೆ ಪರಸ್ಪರ ಸೇವೆ. ವಸುಧೈವ ಕುಟುಂಬಕಂ ಸೇವೆಯನ್ನು ಧರ್ಮವೆಂದು ಕಾಣುತ್ತದೆ; ಕ್ರಿಸ್ಮಸ್ ಸೇವೆ, ದಾನ ಮತ್ತು ತ್ಯಾಗವನ್ನು ಜೀವನಮಾರ್ಗವಾಗಿ ಪ್ರತಿಪಾದಿಸುತ್ತದೆ ಎಂದರು

ವೇದಿಕೆಯಲ್ಲಿ ಎಕ್ಸಲೆಂಟ್ ಪ್ರೌಢಶಾಲಾ ಮುಖ್ಯೋಪಾಧ್ಯಾಯರಾದ ಶಿವಪ್ರಸಾದ್ ಭಟ್ , ಸಿ ಬಿ ಎಸ್ ಈ ಪ್ರಾಂಶುಪಾಲರಾದ ಶ್ರೀಪ್ರಸಾದ್ ಉಪಸ್ಥಿತರಿದ್ದರು. ಶಿಕ್ಷಕಿ ಅನಿತಾ ಸ್ವಾಗತಿಸಿ , ಮೆಲಿಟಾ ವಂದಿಸಿದರು. ಉಪನ್ಯಾಸಕ ಸಂತೋಷ್ ನಿರೂಪಿಸಿದರು.

Related posts

ಶಿವಪುರ ಶ್ರೀಶಂಕರದೇವ ದೇವಸ್ಥಾನ ಬ್ರಹ್ಮ ಕಲಶಾಭಿಷೇಕ: ನಾಗಶಿಲಾ ಪ್ರತಿಷ್ಠೆ – ಆಶ್ಲೇಷಾ ಬಲಿ

Madhyama Bimba

ಮೂಡುಬಿದಿರೆಗೆ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ ಪಾದಾರ್ಪಣೆ-  35ನೇ ಶಾಖೆ ಏ.19ರಂದು ಉದ್ಘಾಟನೆ: ಬೋಳಾರ್

Madhyama Bimba

ಯುವ ವಾಹಿನಿ ಕ್ರೀಡಾ ನಿರ್ದೇಶಕರಾಗಿ ಶಂಕರ್ ಕೋಟ್ಯಾನ್

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More