Blog

ಅಂಬೇಡ್ಕರ್ ಅವಹೇಳನ ಬಗ್ಗೆ ಬಿಜೆಪಿ ಮಾತನಾಡಲೇ ಇಲ್ಲ

ಅಂಬೇಡ್ಕರ್ ಹಾಗೂ ದಲಿತ ಸಮುದಾಯವನ್ನು ನಿಂದಿಸಿದ ಪ್ರಕರಣದ ಕುರಿತು ಬಿಜೆಪಿ ಮೌನವಾಗಿರುವುದು ಮೌನಂ ಸಮ್ಮತಿ ಲಕ್ಷಣಂ ಎಂದಂತೆ: ರಾಘವ ಕುಕ್ಕುಜೆ

ದೇಶದ ಪವಿತ್ರ ಗ್ರಂಥ ಜಗತ್ತಿನ ಶ್ರೇಷ್ಠ ಸಂವಿಧಾನವನ್ನು ದೇಶಕ್ಕೆ ನೀಡಿದ ಮಹಾನ್ ಮಾನವತಾವಾದಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರನ್ನು ಸಂವಿಧಾನವನ್ನು ಗೌರವಿಸುವ ದೇಶದ ಪ್ರತಿಯೊಬ್ಬ ಪ್ರಜೆಯೂ ಗೌರವಿಸುತ್ತಾನೆ. ಆದರೆ ದೇಶದ ಸಂವಿಧಾನದ ಮೇಲೆ ಗೌರವವೇ ಇಲ್ಲದ ದೇಶದ್ರೋಹಿಗಳು ಮಾತ್ರಾ ಅಂಬೇಡ್ಕರ್ ಅವರನ್ನು ಅವಮಾನಿಸುತ್ತಿದ್ದಾರೆ.

ಈ ದೇಶದಲ್ಲಿ ಎಲ್ಲರೂ ಸಮಾನರು, ದಲಿತರೂ ಸೇರಿದಂತೆ ಎಲ್ಲಾ ಜಾತಿ ಮತ ಪಂಥ ಧರ್ಮದ ಜನರಿಗೆ ನಮ್ಮ ದೇಶದಲ್ಲಿ ಗೌರವಯುತವಾಗಿ ಬದುಕುವ ಹಕ್ಕು ಇದೆ. ಭಾರತದ ಸಂವಿಧಾನವು ಎಲ್ಲರನ್ನೂ ಸಮಾನವಾಗಿ ಕಾಣುತ್ತದೆ, ಆದರೆ ಸಂವಿಧಾನದ ಮೇಲೆ ಗೌರವ ಇಲ್ಲದ   ಉಮೇಶ್ ನಾಯ್ಕ ಸೂಡ ಎನ್ನುವ ಬಿಜೆಪಿ ಮುಖಂಡನು ದಲಿತರನ್ನು ಹಾಗೂ ಅಂಬೇಡ್ಕರ್ ಅವರನ್ನು ಅವಮಾನಿಸಿರುವುದು ಅತ್ಯಂತ ಖಂಡನೀಯ. ದೇಶದ ಸಾರ್ವಭೌಮತೆಗೆ ಧಕ್ಕೆ ಉಂಟು ಮಾಡುವ ಇಂತಹ ಮನಸ್ಥಿತಿಯುಳ್ಳವರು ದೇಶದ ಏಕತೆಗೆ ಮಾರಕ.

ಎಲ್ಲರಿಗೂ ದೇಶಭಕ್ತಿಯ ಪಾಠವನ್ನು ಬೋಧಿಸುವ ಬಿಜೆಪಿ ಪಕ್ಷವು ತನ್ನ ಪಕ್ಷದ ಮುಖಂಡ ಉಮೇಶ್ ನಾಯ್ಕನ ಈ ದೇಶದ್ರೋಹಿ ಕೃತ್ಯಕ್ಕೆ ಮೌನವಾಗಿರುವುದು ಆಶ್ಚರ್ಯವನ್ನುಂಟು ಮಾಡಿದೆ.  ಸಂವಿಧಾನ ಶಿಲ್ಪಿ ಅಂಬೇಡ್ಕರ್ ಹಾಗೂ ದಲಿತ ಸಮುದಾಯವನ್ನು ಅವಮಾನ ಮಾಡಿದ ತನ್ನದೇ ಪಕ್ಷದ ಮುಖಂಡನ ಈ ದುಷ್ಕೃತ್ಯದ ಕುರಿತು ಬಿಜೆಪಿ ತನ್ನ ನಿಲುವನ್ನು ಸ್ಪಷ್ಟಪಡಿಸಲಿ. ಸಮುದಾಯಗಳ ನಡುವೆ ಅಪನಂಬಿಕೆ ದ್ವೇಷವನ್ನು ಹರಡಲು ಪ್ರಯತ್ನಿಸಿದ ಆರೋಪಿಯನ್ನು ಬಂಧಿಸಿದ ಉಡುಪಿ ಜಿಲ್ಲಾ ಪೋಲಿಸರಿಗೆ ಅಭಿನಂದನೆಗಳು ಎಂದು ಕಾರ್ಕಳ ಭೂನ್ಯಾಯ ಮಂಡಳಿ ಸದಸ್ಯರಾದ ರಾಘವ ಕುಕ್ಕುಜೆ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Related posts

ಸ್ಪೆಷಲ್ ಡಿಶ್

Madhyama Bimba

ಪಳ್ಳಿ ಕುಂಟಾಡಿಗೆ ಸರಕಾರಿ ಬಸ್ _ ಊರವರ ಅಭಿನಂದನೆ

Madhyama Bimba

ಸರಕಾರಿ ಬಸ್ ಸಿಬ್ಬಂದಿಗಳ ಮಾನವೀಯತೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More