ಜೋಡುರಸ್ತೆಯಲ್ಲಿ ಕೇಂದ್ರ ಕಚೇರಿಯನ್ನು ಹೊಂದಿರುವ ಸಹಕಾರಿ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಶ್ರೀ ದುರ್ಗಾಪರಮೇಶ್ವರಿ ವಿವಿಧೋದ್ಧೇಶ ಸಹಕಾರಿ ಸಂಘವು ವರಮಹಾಲಕ್ಷ್ಮಿ ಹಬ್ಬ ಹಾಗೂ ಗಣೇಶ್ ಚತುರ್ಥಿ ಪ್ರಯುಕ್ತ ಆಗಸ್ಟ್ 16 ರಿಂದ ಸೆಪ್ಟೆಂಬರ್ 16ರ ವರೆಗೆ ವಿಶೇಷ ಠೇವಣಿ ಯೋಜನೆಯನ್ನು ಗ್ರಾಹಕರಿಗೆ ನೀಡಿದ್ದು ಈ ಯೋಜನೆಗೆ ಗ್ರಾಹಕರು ಉತ್ತಮ ಸ್ಪಂದನೆ ನೀಡಿದ್ದು, ಸಂಘವು ಒಂದೇ ತಿಂಗಳಲ್ಲಿ 2.76ಕೋಟಿ ಸಂಗ್ರಹ ಮಾಡಿದೆ.


2001 ರಲ್ಲಿ ಆರಂಭವಾದ ಸಂಘವು ಅಭಿವೃದ್ಧಿ ಪಥದಲ್ಲಿ ಮುನ್ನಡೆಯುತ್ತಾ ಸಾಗುತ್ತಿದೆ. ಸಂಘದ ಮೇಲೆ ಗ್ರಾಹಕರು ವಿಶೇಷ ವಿಶ್ವಾಸ ಇರಿಸಿರುವುದರಿಂದ ಪ್ರತೀ ವರ್ಷವೂ ಠೇವಣಿಯಲ್ಲಿ ಗಣನೀಯ ಹೆಚ್ಚಳವಾಗುತ್ತಿದೆ.


ಸಂಘವು 2023-24ನೇ ಆರ್ಥಿಕ ವರ್ಷದಲ್ಲಿ ರೂ. 147 ಕೋಟಿ ವ್ಯವಹಾರ ನಡೆಸಿ ರೂ. 55.46 ಲಕ್ಷ ನಿವ್ವಳ ಲಾಭಗಳಿಸಿದೆ. ವಾರ್ಷಿಕ ಸಾಲಿನ ಅಂತ್ಯಕ್ಕೆ ಸಂಘವು ರೂ.30.55 ಲಕ್ಷ ಪಾಲು ಬಂಡವಾಳ ಇದ್ದು ರೂ. 29.57 ಕೋಟಿ ಠೇವಣಿ ಸಂಗ್ರಹವಾಗಿದ್ದು ರೂ. 25.57 ಕೋಟಿ ಸಾಲ ವಿತರಿಸಿದ್ದು ರೂ. 34.63 ಕೋಟಿ ದುಡಿಮೆ ಬಂಡವಾಳ ಹೊಂದಿರುತ್ತದೆ.
ಠೇವಣಿಗಳು: ಸಂಘದಲ್ಲಿ ಸಂಚಯ ಠೇವಣಿ, ನಿರಖು ಠೇವಣಿ, ಮಾಸಿಕ ಠೇವಣಿ, ಭಾರತ್ ವಿಕಾಸ್ ಪತ್ರ, ಚಾಲ್ತಿ ಠೇವಣಿ, ಹನಿದೈನಿಕ್ ಠೇವಣಿ ಇದ್ದು, ಠೇವಣಿದಾರರಿಗೆ ಉತ್ತಮ ಬಡ್ಡಿಯನ್ನು ಸಂಘವು ನೀಡುತ್ತಾ ಬಂದಿದೆ. ಸಂಘದ ಕೇಂದ್ರ ಕಚೇರಿಯಲ್ಲಿ ಸೇಫ್ ಲಾಕರ್ ಸೌಲಭ್ಯ ಇದೆ.
ಸಾಲ ಸೌಲಭ್ಯಗಳು: ಸಂಘವು ಸದಸ್ಯರಿಗೆ ಆಸ್ತಿ ಅಡಮಾನ ಸಾಲ, ಚಿನ್ನಾಭರಣ ಸಾಲ, ಇತರ ಉದ್ದೇಶ ಸಾಲ, ವಾಹನ ಸಾಲ, ತುರ್ತು ಸಾಲ, ಭದ್ರತಾ ಸಾಲ, ಠೇವಣಾತಿ ಸಾಲ, ಹನಿದೈನಿಕ ಸಾಲ, ಓವರ್ ಡ್ರಾಫ್ಟ್ ಸಾಲ, ಜಾಮೀನು ಸಾಲ, ಗೃಹ ಸಾಲ, ಗ್ರೂಪ್ ಸಾಲಗಳ ಮೂಲಕ ಸಂಘದ ಸದಸ್ಯರಿಗೆ ಆರ್ಥಿಕ ಪ್ರೋತ್ಸಾಹವನ್ನು ನೀಡುತ್ತಾ ಬಂದಿದೆ.

ಸಂಘವು 1 ತಿಂಗಳ ಅವಧಿಯಲ್ಲಿ ಹಮ್ಮಿಕೊಂಡಿರುವ ವಿಶೇಷ ಠೇವಣಿಗೆ ಗ್ರಾಹಕರು ಉತ್ತಮ ಸ್ಪಂದನೆ ನೀಡಿದ್ದಾರೆ. ಸಂಘದ ಮೇಲೆ ವಿಶ್ವಾಸ ಇರಿಸಿ ಅತೀ ಹೆಚ್ಚಿನ ಠೇವಣಿ ನೀಡಿದ ಠೇವಣಿದಾರರಿಗೆ ಕೃತಜ್ಞತೆಗಳು. ಸಂಘದ ಮೂಲಕ ಜನರಿಗೆ ಉತ್ತಮ ಸೇವೆ ನೀಡಲಾಗುವುದು, ಇನ್ನಷ್ಟು ಜನರು ಸಂಘದಲ್ಲಿ ದೊರೆಯುವ ಸೌಲಭ್ಯಗಳನ್ನು ಪಡೆದುಕೊಂಡು ಸಂಘದ ಅಭಿವೃದ್ದಿಗೆ ಸಹಕರಿಸುವಂತೆ ವಿನಂತಿ.
ಸಂತೋಷ್ ರಾವ್, ಅಧ್ಯಕ್ಷರು
