ಗೋವಾದಲ್ಲಿ ನೆಲೆಸಿರುವ ತುಳು ಭಾಷಿಗರು ಸೇರಿಕೊಂಡು ರಚನೆಯಾಗಿರುವ ತುಳುಕೂಟ ಗೋವಾ ಇದರ ಉದ್ಘಾಟನಾ ಸಮಾರಂಭವು ಅ. 20ರಂದು ಗೋವಾ ಪೂರ್ವರಿಮ್ ನಾರ್ತ್‌ನಲ್ಲಿರುವ ಪುಂಡಲೀಕ ದೇವಸ್ಥಾನದ ಸಭಾಂಗಣದಲ್ಲಿ ಮಧ್ಯಾಹ್ನ 2.30ಕ್ಕೆ ನಡೆಯಲಿದೆ.
ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್ ಸಮಾರಂಭವನ್ನು ಉದ್ಘಾಟಿಸಲಿದ್ದಾರೆ.
ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಗೋವಾ ತುಳುಕೂಟವನ್ನು ಉದ್ಘಾಟಿಸಲಿದ್ದಾರೆ. ಅಖಿಲ ಭಾರತ ತುಳುಕೂಟದ ಅಧ್ಯಕ್ಷರಾದ ಶಶಿಧರ ಶೆಟ್ಟಿ ಬರೋಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.
ಯುವ ಸಂಶೋಧಕ ಹಾಗೂ ಬರಹಗಾರ ಡಾ. ಅರುಣ್ ಉಳ್ಳಾಲ್ ಉಪನ್ಯಾಸ ನೀಡಲಿದ್ದಾರೆ. ಅತಿಥಿಗಳಾಗಿ ಜಿಲ್ಲಾ ಕಂಬಳ ಸಮಿತಿಯ ಕಾರ್ಯಾಧ್ಯಕ್ಷರಾದ ಕೆ. ಗುಣಪಾಲ್ ಕಡಂಬ, ತುಳು ಚಿತ್ರರಂಗ ಹಾಗೂ ರಂಗಭೂಮಿ ನಿರ್ದೇಶಕರಾದ ವಿಜಯಕುಮಾರ್ ಕೊಡಿಯಾಲ್ ಬೈಲ್, ಉಪನ್ಯಾಸಕರಾದ ಸುಧಾಕರ ಶೆಟ್ಟಿ ನೆಲ್ಲಿಕಟ್ಟೆ, ತುಳು ನಟ ಹಾಗೂ ಸಂಭಾಷಣೆಗಾರ ಪ್ರಸನ್ನ ಶೆಟ್ಟಿ ಬೈಲೂರು, ಬೆದ್ರ ತುಳುಕೂಟದ ಅಧ್ಯಕ್ಷರಾದ ಧನಕೀರ್ತಿ ಬಲಿಪ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಗೋವಾ ತುಳುಕೂಟದ ಗೌರವಾಧ್ಯಕ್ಷರುಗಳಾದ ಸದಾನಂದ ಶೆಟ್ಟಿ ಬೆಳುವಾಯಿ, ಚಂದ್ರಹಾಸ ಅಮೀನ್, ವಿಜಯೇಂದ್ರ ಶೆಟ್ಟಿ, ತುಳುಕೂಟದ ಅಧ್ಯಕ್ಷರಾದ ಗಣೇಶ್ ಕೆ. ಶೆಟ್ಟಿ ಇರ್ವತ್ತೂರು, ಕಾರ್ಯಾಧ್ಯಕ್ಷರಾದ ಶಶಿಧರ ನಾಯಕ್, ಕೋಶಾಧ್ಯಕ್ಷರಾದ ಪ್ರಶಾಂತ್ ಜೈನ್ ಸಿ.ಎ., ಸಂಯೋಜಕರಾದ ಅಶೋಕ್ ಶೆಟ್ಟಿ ಮುಡಾರು ಉಪಸ್ಥಿತರಿದ್ದಾರೆ.
ಈ ಸಂದರ್ಭದಲ್ಲಿ ತುಳುನಾಡಿನ ಆರಾಧನೆ, ಆಚರಣೆಗೆ ಉಪಯೋಗಿಸುವ ವಸ್ತುಗಳ ಪ್ರದರ್ಶನ ನಡೆಯಲಿದೆ.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ರಂಗಸಂಗಮ ಕಲಾವಿದರು ಕುಡ್ಲ ಇವರಿಂದ “ಶಿವದೂತೆ ಗುಳಿಗೆ” ನಾಟಕ ಪ್ರದರ್ಶನಗೊಳ್ಳಲಿದೆ ಎಂದು ಅಧ್ಯಕ್ಷರಾದ ಗಣೇಶ್ ಶೆಟ್ಟಿ ಇರ್ವತ್ತೂರು ತಿಳಿಸಿದ್ದಾರೆ.