ಮಿಯ್ಯಾರು ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮ ಕಲಶ ಕಾರ್ಯಕ್ರಮದ ಪೂರ್ವ ಭಾವಿಯಾಗಿ ವಿವಿಧ ಸಮಿತಿಗಳನ್ನು ರಚನೆ ಮಾಡುವ ಕಾರ್ಯಕ್ರಮ ನಡೆಯಿತು.
ಈ ಕಾರ್ಯಕ್ರಮದಲ್ಲಿ ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಗಣಪತಿ ಹೆಗ್ಡೆ, ಕಮಲಾಕ್ಷ ಕಾಮತ್, ಜಗದೀಶ್ ಮಲ್ಯ ಆನಂದ ಶೆಟ್ಟಿ ಮಂಜೇ ಮನೆ, ರಾಜು ಶೆಟ್ಟಿ ಮಂಜೇ ಮನೆ, ಇರ್ವತ್ತೂರು ಧನ ಕೀರ್ತಿ ಕಡಂಬ , ವೇ. ಮೂ. ಹರಿದಾಸ್ ಭಟ್, ರಾಘವೇಂದ್ರ ಭಟ್, ಕಟ್ಟಣಿಗೆ ವಿಜಯ ಶೆಟ್ಟಿ, ಸತ್ಯೇಂದ್ರ ನಾಯಕ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ದೇವಸ್ಥಾನದ ಅಭಿವೃದ್ಧಿ ಸಮಿತಿ ಅಧ್ಯಕ್ಷ ರಾದ ಗಣಪತಿ ಹೆಗ್ಡೆ ಮಾತನಾಡಿ ಪೂರ್ವ ಕಾಲದ ಪುಣ್ಯ ಹಾಗೂ ಭಗವಂತನ ಪ್ರೇರಣೆಯಿಂದ ಈ ದೇವಸ್ಥಾನದ ಅಭಿವೃದ್ಧಿ ಕಾರ್ಯ ಮಾಡುವ ಅವಕಾಶ ನಮಗೆ ದೊರಕಿದೆ ಎಂದು ಹೇಳಿದರು.
ಪ್ರೀತಿಯಿಂದ ಕೆಲಸ ಕಾರ್ಯಗಳು ಈ ದೇವಸ್ಥಾನದಲ್ಲಿ ಆಗುತ್ತಿದೆ. ಹೀಗಾಗಿ ಭಗವಂತನ ಕಾರ್ಯದಲ್ಲಿ ನಾವು ಎಷ್ಟು ತೊಡಗಿಸಿದರು, ಭಗವಂತ ಅದಕ್ಕಿಂತ ಹತ್ತು ಪಟ್ಟು ನಮಗೆ ಕೊಡುತ್ತಾರೆ ಎಂದು ಹೇಳಿದರು.
ಹಿರಿಯರಿಗೆ ನಾವು ಗೌರವ ಕೊಡುವ ಮೂಲಕ ಧರ್ಮ ಉಳಿಸಬೇಕು ಎಂದ ಅವರು ಸಂಸ್ಕೃತಿ, ಸಂಸ್ಕಾರಗಳನ್ನು ಉಳಿಸುವ ಮೂಲಕ ನಾವೆಲ್ಲರೂ ಮುನ್ನಡಿ ಇಡೋಣ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕಮಲಾಕ್ಷ ಕಾಮತ್ ರವರು ದೇವಸ್ಥಾನದ ಅಭಿವೃದ್ಧಿ ಮೂಲಕ ಒಟ್ಟಾಗುವ ಜನರ ಸಹಕಾರ ನಿಜಕ್ಕೂ ಅತ್ಯದ್ಭುತ ಎಂದು ಹೇಳಿದರು.
ಭಜನೆಯಿಂದ ಧರ್ಮ ಪ್ರಭಾವನೆ ಆಗುವ ಜೊತೆಗೆ ಶಕ್ತಿ ಕೂಡ ಹೆಚ್ಚುತ್ತದೆ. ಭಜನೆ ಎಂದರೆ ಅಮೃತ ಕುಡಿದಂತೆ.
ಕುಣಿತ ಭಜನೆಯಿಂದ ದೇವರು ಸಂಪ್ರೀತನಗುತ್ತಾನೆ. ಮನುಷ್ಯ ಜನ್ಮ ನಮಗೆ ಸಿಕ್ಕಿದೆ. ಯಾರ ಮನಸ್ಸನ್ನು ನೋಯಿಸದೆ ಬದುಕು ಕಟ್ಟುವ ಕಾರ್ಯವನ್ನು ಮಾಡೋಣ.
ಸತತ ಪ್ರಯತ್ನ ಮಾಡುವ ಮೂಲಕ ದೇವಸ್ಥಾನ ನಿರ್ಮಾಣಗೊಳ್ಳುತ್ತಿದೆ. ಈ ವಿಚಾರದಲ್ಲಿ ನಾವೆಲ್ಲರೂ ಸಂತಸ ಪಡೋಣ ಎಂದು ಹೇಳಿದರು.
ಉದ್ಯಮಿ ಜಗದೀಶ್ ಮಲ್ಯ ಮಾತನಾಡಿ ಭಗವಂತನ ಕಾರ್ಯದಲ್ಲಿ ಮಾಡುವುದು ಸೇವೆ. ಈ ಸೇವೆ ಮಾಡುವಾಗ ಹೆಸರು ಬರಬೇಕು ಎಂದು ಆಸೆ ಪಡಬಾರದು ಎಂದು ಹೇಳಿದರು.
ಹಲವಾರು ದೇವಾಲಯದ ಅಭಿವೃದ್ಧಿ ಕಾರ್ಯಗಳಲ್ಲಿ ಪಾಲ್ಗೊಳ್ಳುವ ಬಗ್ಗೆ ತಿಳಿಸಿದ ಅವರು ಈ ದೇವಾಲಯದ ಅಭಿವೃದ್ಧಿ ಕಾರ್ಯ ಕೂಡ ಸಾಂಗವಾಗಿ ನೆರವೇರಲಿ ಎಂದು ಹೇಳಿದರು.
ವೇ. ಮೂ ಹರಿದಾಸ್ ಭಟ್ ಮಾತನಾಡಿ ಎಲ್ಲಾ ಗ್ರಾಮದವರು ಕೂಡ ಈ ಕ್ಷೇತ್ರದ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳು ತ್ತಿರುವುದು ನಿಜಕ್ಕೂ ಸಂತಸ ತರುವ ವಿಚಾರ.
ಜೀವನದಲ್ಲಿ ಬರುವ ಸಂಕಷ್ಟ ಪರಿಹಾರ ಮಾಡಲು ಭಗವಂತನ ಕೃಪೆ ಬೇಕು. ಭಗವಂತನಿಗೆ ಭಕ್ತಿಯಿಂದ ನಮಿಸಿದರೆ ಮಾತ್ರ ಭಗವಂತ ಕೃತಾರ್ಥನಾಗಬಲ್ಲ ಎಂದು ಹೇಳಿದರು.
ಆನಂದ್ ಶೆಟ್ಟಿ ಮಂಜೇ ಮನೆ ಮಾತನಾಡಿ ದೇವಸ್ಥಾನದ ಅಭಿವೃದ್ಧಿ ಕಾರ್ಯಗಳಲ್ಲಿ ಎಲ್ಲರೂ ಪಾಲ್ಗೊಳ್ಳುತ್ತಿರುವುದು ಸಂತಸ ತಂದಿದೆ ಎಂದರು.
ಊರಿನ ದೇವಸ್ಥಾನ ಅಭಿವೃದ್ಧಿ ಆದರೆ ಊರಿನ ಸಂಕಷ್ಟಗಳೆಲ್ಲ ಪರಿಹಾರ ಆದಂತೆ ಈ ನಿಟ್ಟಿನಲ್ಲಿ ಸಹಕಾರ ನೀಡುವ ಜನರ ಧರ್ಮ ಕಾರ್ಯ ನಿಜಕ್ಕೂ ಮಹತ್ವ ಪೂರ್ಣ ಆದುದು ಎಂದು ಹೇಳಿದರು.
ಮಿಯ್ಯಾರಿನ ಹಿರಿಯರಾದ ಮಾಧವ ಕಾಮತ್ ದೇವಾಲಯದ ಹಿನ್ನೆಲೆ ಬಗ್ಗೆ ತಿಳಿಸಿದರು.
ಕಾರ್ಕಳದ ಪ್ರಕಾಶ್ ರಾವ್, ಕೃಷ್ಣ ಮೊಯ್ಲಿ ನಲ್ಲೂರು ತಮ್ಮ ಅಭಿಪ್ರಾಯ ತಿಳಿಸಿದರು.
ಕಿಶೋರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
previous post
next post