ಮೂಡುಬಿದಿರೆ

ಮಾನವೀಯತೆ ಮೆರೆದ ರಿಕ್ಷಾ ಚಾಲಕ ವಿಶ್ವನಾಥ್ ಪೂಜಾರಿಗೆ ಸನ್ಮಾನ

ಮೂಡುಬಿದಿರೆ ತಾಲೂಕಿನ ತೋಡಾರ್ ಪ್ರದೇಶದ ಮೈಟ್ ಇಂಜಿನಿಯರಿಂಗ್ ಕಾಲೇಜ್ ತಿರುವು ಬಳಿ ಖಾಸಗಿ ಬಸ್ ಸ್ಕೂಟರ್ ಗೆ ಡಿಕ್ಕಿಯಾದಾಗ ನೆಲಕ್ಕುರುಳಿ ನೋವು ಅನುಭವಿಸುತ್ತಿದ್ದ ಸವಾರ ಗಾಯಾಳುವನ್ನು ರಕ್ಷಿಸಲು ಬಸ್ ಎದುರು ತನ್ನ ರಿಕ್ಷಾ ಅಡ್ಡ ಇಟ್ಟು ಸಾಹಸ ಮೆರೆದ ಮತ್ತು ಗಾಯಳುವನ್ನು ಆಸ್ಪತ್ರೆಗೆ ಸಾಗಿಸಲು ನೆರವಾದ ರಿಕ್ಷಾ ಮಾಲಕ ಚಾಲಕ ವಿಶ್ವನಾಥ್ ಪೂಜಾರಿಯವರಿಗೆ ಇಂದು ಸನ್ಮಾನ ನಡೆಯಿತು.
ಹಿಂದೂ ಜಾಗರಣ ವೇದಿಕೆ ಮೂಡುಬಿದಿರೆ ತಾಲೂಕು ನೇತೃತ್ವದಲ್ಲಿ ಮೂಡುಬಿದಿರೆ ಸಮಾಜ ಮಂದಿರದಲ್ಲಿ ಶಾಲು ಹೊದಿಸಿ ಫಲ ಪುಷ್ಪ ನೀಡಿ ಅಭಿನಂದಿಸಲಾಯಿತು. ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ರಂಜಿತ್ ಪೂಜಾರಿ ಮಾತನಾಡಿ ರಾತ್ರಿ ಹಗಲೆನ್ನದೆ ವೃತ್ತಿ ನಿರ್ವಹಿಸುವ ರಿಕ್ಷಾ ಚಾಲಕರು ತೋರುವ ಸೇವೆ, ಮಾನವೀಯ ಮೌಲ್ಯ ಶ್ರೇಷ್ಠವಾದುದು. ವಿಶ್ವನಾಥ್ ಪೂಜಾರಿಯವರ ಹೃದಯವಂತಿಕೆ ಬೆಳಕಿಗೆ ಬಂದಂತಾಗಿದೆ ಎಂದರು.
ಹಿಂಜಾವೇ ಜಿಲ್ಲಾ ಸಹ ಸಂಯೋಜಕ ಸಮಿತ್ ರಾಜ್ ದರೆಗುಡ್ಡೆ ಮಾತನಾಡಿ ರಿಕ್ಷಾ ಚಾಲಕರ ಸಮಯೋಚಿತ ಕಾರ್ಯ, ಸಂಘಟನೆಯ ಬದ್ಧತೆಗಾಗಿ ಈ ಕಾರ್ಯಕ್ರಮ. ಬದುಕು ನೀಡಿದ ರಿಕ್ಷಾ, ತನ್ನ ಪ್ರಾಣ ಲೆಕ್ಕಿಸದೆ ವಿಶ್ವನಾಥ್ ರವರು ತೋರಿದ ಕಾಳಜಿ ಮಾದರಿ ಎಂದರು. ಖಾಸಗಿ ಬಸ್ಸುಗಳು ತನ್ನ ಅಜಾಗರುಕತೆಯ ಚಾಲನೆಯಿಂದ ಹಲವಾರು ಅವಾಂತರ ನಡೆಸಿ ಪ್ರಾಣ ತೆಗೆಯುವ ಕೆಲಸವಾಗಿದೆ ಎಂದರು. ಈ ಬಗ್ಗೆ ಬಸ್ ಮಾಲಕರು ಎಚ್ಚರ ವಹಿಸಬೇಕು ಎಂದರು.
ರಿಕ್ಷಾ ಚಾಲಕ ಮಾಲಕರ ಸಂಘದ ಅಧ್ಯಕ್ಷ ದೀಪಕ್ ರಾಜ್ ಕೋಡಂಗಲ್ಲು,
ಹಿಂದೂ ಜಾಗರಣ ವೇದಿಕೆಯ ತಾಲೂಕು ಸಂಯೋಜಕ ಹರೀಶ್ಚಂದ್ರ ಕೆ. ಸಿ., ಮಾಜಿ ಅಧ್ಯಕ್ಷ ಸಂದೀಪ್ ಹೆಗ್ಡೆ ವೇದಿಕೆಯಲ್ಲಿದ್ದರು. ಸನ್ಮಾನಿತ ವಿಶ್ವನಾಥ್ ಪೂಜಾರಿ ಮಾತನಾಡಿ ಆಫಘಾತ ಆದಾಗ ವೀಡಿಯೊ ಮಾಡುವ ಮೊದಲು ಗಾಯಳುವನ್ನು ಬದುಕಿಸಿ ಮಾನವೀಯತೆ ತೋರುವಂತೆ ಕರೆಯಿತ್ತರು. ಸಹ ಸಂಯೋಜಕರಾದ ಶರತ್ ಮಿಜಾರು, ಸಂತೋಷ್ ಜೈನ್, ದರೆಗುಡ್ಡೆ ಪಂಚಾಯತ್ ಅಧ್ಯಕ್ಷ ಅಶೋಕ್ ಶೆಟ್ಟಿ ಬೇಲೊಟ್ಟು, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಕುಮಾರ್ ಪ್ರಸಾದ್, ಭಾರತೀಯ ಮಜದೂರು ಸಂಘದ ಅಧ್ಯಕ್ಷ ರಾಜೇಶ್ ಸುವರ್ಣ ಭಾಗವಹಿಸಿದ್ದರು. ಹಿಂಜಾವೇ ಜಿಲ್ಲಾ ಪ್ರಮುಖ್ ಸಂದೀಪ್ ಸುವರ್ಣ ಕೆಲ್ಲಪುತ್ತಿಗೆ ನಿರೂಪಿಸಿದರು.

Related posts

ಆಳ್ವಾಸ್ ನಲ್ಲಿ ದೀಪಾವಳಿ ಸಂಭ್ರಮ, ಸಾಂಪ್ರದಾಯಿಕ ಮೆರುಗು, ಸಾಂಸ್ಕೃತಿಕ ಸೊಬಗು, ಸಿಡಿಮದ್ದಿನ ಬೆರಗು, ಸಾಕ್ಷೀಕರಿಸಿದ 20000 ಕ್ಕೂ ಅಧಿಕ ಜನಸ್ತೋಮ- ಬೆಳಕು ಅಂತರಂಗ ಅರಳಿಸಲಿ, ಸಂಬಂಧವೇ ಸಂಪತ್ತಾಗಲಿ: ಡಾ. ಆಳ್ವ ಆಶಯ

Madhyama Bimba

ಕಟ್ಟಡ ಕಾರ್ಮಿಕರ ಪಿಂಚಣಿ ಬಿಡುಗಡೆಗೆ ಆಗ್ರಹ: ವಸಂತ ಆಚಾರಿ

Madhyama Bimba

ಸಚ್ಚೇರಿಪೇಟೆ ಲಯನ್ಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿಜ್ಞಾನ ಮಾದರಿ ತಯಾರಿ ಸ್ಪರ್ಧಾ ಕಾರ್ಯಕ್ರಮ ( Science Expo – 2025 )

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More