ಮೂಡುಬಿದಿರೆ: ಕರ್ನಾಟಕ ರಾಜ್ಯದ ಅನುದಾನಿತ ಪದವಿಪೂರ್ವ ಕಾಲೇಜಿನ ನೌಕರರ ಸಮಸ್ಯೆಗಳನ್ನು ಸರಿಪಡಿಸುವಂತೆ ಕೋರಿ ಇಂದು ಮೂಡುಬಿದಿರೆ ತಾಲೂಕಿನ ಅನುದಾನಿತ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯರು ಉಪನ್ಯಾಸಕರು ಮೂಡುಬಿದರೆಯ ಶಾಸಕರಾದ ಉಮಾನಾಥ್ ಕೋಟ್ಯಾನ್ ಅವರನ್ನು ಭೇಟಿ ಮಾಡಿದರು .
ಅನುದಾನಿತ ಕಾಲೇಜಿನ ವಿದ್ಯಾರ್ಥಿಗಳ ಗರಿಷ್ಠ ಮಿತಿ ಕನಿಷ್ಠ ಮಿತಿ ಕಾರ್ಯಭಾರ ಡೆಪ್ಯುಟೇಷನ್ ಮೊದಲಾದ ಸಮಸ್ಯೆಗಳ ಕುರಿತಾಗಿ ನೌಕರರು ಅನುಭವಿಸುತ್ತಿರುವ ಸಮಸ್ಯೆಗಳ ಕುರಿತಾಗಿ ಶಾಸಕರ ಗಮನವನ್ನು ಸೆಳೆಯಲಾಯಿತು. ಮಂಗಳೂರಿನ ಕಿಟಲ್ ಪದವಿಪೂರ್ವ ಕಾಲೇಜಿನ ಶ ವಿಠಲ್, ಜೈನ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ. ಪ್ರಭಾತ್ ಬಲ್ನಾಡು ಪ್ರಾಂಶುಪಾಲರುಗಳಾದ ಶ್ರೀಮತಿ ಗಾಯತ್ರಿ ಶ್ರೀಮತಿ ರೇಣುಕಾ, ರಾಮಕೃಷ್ಣ ಉಡುಪ ಮತ್ತಿತರ ಉಪನ್ಯಾಸಕರು ಹಾಗೂ ಕಚೇರಿ ಸಿಬ್ಬಂದಿಗಳು ಈ ಸಂದರ್ಭದಲ್ಲಿ ಶಾಸಕರಿಗೆ ಮನವಿಯನ್ನು ಅರ್ಪಿಸಿದರು. ಶಿಕ್ಷಣ ಸಚಿವರೊಂದಿಗೆ ಈ ಕುರಿತಾಗಿ ಚರ್ಚಿಸುವುದಾಗಿ ಶಾಸಕರು ಭರವಸೆಯನ್ನು ನೀಡಿದರು