ಹೆಬ್ರಿ : ಎಲ್ಲರೂ ಒಟ್ಟಾಗಿ ಜೀರ್ಣೋದ್ಧಾರ ಪುಣ್ಯದ ಕಾರ್ಯವನ್ನು ಯಶಸ್ವಿಗೊಳಿಸೋಣ. ಕಡಿಮೆ ಸಮಯದಲ್ಲಿ ಜೀರ್ಣೋದ್ಧಾರ ನಡೆದು, ಲೋಕಾರ್ಪಣೆಯಾಗಬೇಕು. ಊರಿನ ಜನರೆಲ್ಲ ಸಹಕಾರ ನೀಡಿ ಸಹಕರಿಸಿ ಎಂದು ಹೆಬ್ರಿಯ ಬಡಾಗುಡ್ಡೆ ಕೊರತಿ ಕೊರಗಜ್ಜ ದೈವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಲಕ್ಷ್ಮೀನಾರಾಯಣ್ ನಾಯಕ್ ಹೇಳಿದರು.
ಹೆಬ್ರಿಯ ಬಡಾಗುಡ್ಡೆಯಲ್ಲಿ ಇತ್ತೀಚೆಗೆ ಕೊರತಿ ಕೊರಗಜ್ಜ ದೈವಸ್ಥಾನದ ಜೀರ್ಣೋದ್ಧಾರದ ವಿಜ್ಞಾಪನ ಪತ್ರ ಬಿಡುಗಡೆ ಮಾಡಿ ಮಾತನಾಡಿದರು.
ಸಮಿತಿಯ ಗೌರವಾಧ್ಯಕ್ಷ ವೇದಮೂರ್ತಿ ಎಚ್. ನಾಗರಾಜ್ ಜೋಯಿಸ್, ಪ್ರಧಾನ ಕಾರ್ಯದರ್ಶಿ ಎಚ್.ಜನಾರ್ಧನ್, ಆಡಳಿತ ಮಂಡಳಿಯ ಅಧ್ಯಕ್ಷ ಜನಾರ್ಧನ್ ಬಡಾಗುಡ್ಡೆ, ಹೆಬ್ರಿ ಗ್ರಾಮ ಪಂಚಾಯಿತಿ ಅಧ್ಯಕ್ಷ ತಾರನಾಥ ಎಸ್ ಬಂಗೇರ, ಸ್ಥಳೀಯ ಪ್ರಮುಖರಾದ ಸುಧಾಕರ ಹೆಗ್ಡೆ, ಶ್ರೀಕಾಂತ್ ಪೂಜಾರಿ ಕುಚ್ಚೂರು, ಸಮುದಾಯ ಬಾಂಧವರು, ಸದಸ್ಯರು ಉಪಸ್ಥಿತರಿದ್ದರು.